ಧರ್ಮದಲ್ಲಿ ರಾಜಕೀಯ ಬರಬಾರದು ರಾಜಕೀಯದಲ್ಲಿ ಧರ್ಮ ಬರಬೇಕು: ಉತ್ತಮರು ಯಾರೇಯಾದರೂ ರಾಜಕೀಯ ಪ್ರವೇಶಿಸಬಹುದು- ಶ್ರೀ ಸುಬುಧೇಂದ್ರತೀರ್ಥರು
ಧರ್ಮದಲ್ಲಿ ರಾಜಕೀಯ ಬರಬಾರದು ರಾಜಕೀಯದಲ್ಲಿ ಧರ್ಮ ಬರಬೇಕು:
ಉತ್ತಮರು ಯಾರೇಯಾದರೂ ರಾಜಕೀಯ ಪ್ರವೇಶಿಸಬಹುದು- ಶ್ರೀ ಸುಬುಧೇಂದ್ರತೀರ್ಥರು
ರಾಯಚೂರು,ಫೆ.೨೬-ಉತ್ತಮರು ಯಾರೇ ಆಗಿರಲಿ ಅವರು ರಾಜಕೀಯ ಪ್ರವೇಶಿಸಿ ಜನರಿಗೆ ಬೇಕಾಗುವ ಅಭಿವೃದ್ದಿ ಕೆಲಸಗಳನ್ನು ಮಾಡಬಹುದೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ನುಡಿದರು.
ಅವರಿಂದು ಮಂತ್ರಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮಠಾಧೀಶರು, ಸನ್ಯಾಸಿಗಳು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಇಂತಹವರೆ ರಾಜಕೀಯ ಪ್ರವೇಶಿಸಬೇಕೆಂದು ಏನು ಇಲ್ಲ ಉತ್ತಮರು ಯಾರೆ ಆಗಿರಲಿ ಅವರು ರಾಜಕೀಯ ಪ್ರವೇಶಿಸಬಹುದು ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಮತ್ತು ಅಭಿವೃದ್ದಿ ಚಿಂತನೆಯುಳ್ಳ ಯಾರಾದರೂ ಸರಿ ರಾಜಕೀಯ ಪ್ರವೇಶಿಸಬಹುದೆಂದ ಅವರು ಧರ್ಮದಲ್ಲಿ ರಾಜಕೀಯ ಬರಬಾರದು ಆದರೆ ರಾಜಕೀಯದಲ್ಲಿ ಧರ್ಮದಿಂದ ನಡೆದುಕೊಳ್ಳಬೇಕೆಂದರು.
ಧಾರ್ಮಿಕ ಮುಖಂಡರು ಧಾರ್ಮಿಕವಾಗಿ ದೇಶವನ್ನು ಮುನ್ನಡೆಸಬೇಕು ರಾಜಕೀಯ ವ್ಯಕ್ತಿಗಳಿಗೆ ಸಲಹೆ ಸೂಚನೆ ನೀಡುತ್ತೇವೆ ತಾವು ಸ್ವತಃ ರಾಜಕೀಯ ಪ್ರವೇಶಸುವುದಿಲ್ಲವೆಂದ ಅವರು ಪರೋಕ್ಷವಾಗಿ ಸಾಧು, ಸಂತರು, ಮಠಾಧೀಶರು ರಾಜಕೀಯ ಪ್ರವೇಶಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಯಿಸಿದರು.
ಮಂತ್ರಾಲಯದಲ್ಲಿ ಇಂದು ಶ್ರೀ ಗುರುರಾಯ ೪೨೮ನೇ ವರ್ಧಂತಿ(ಜನ್ಮದಿನೋತ್ಸವ) ನಡೆಯುತ್ತಿದ್ದು ಕಳೆದ ಒಂದು ವಾರದಿಂದ ನಡೆಯುತ್ತಿದ್ದ ರಾಘವೇಂದ್ರ ವೈಭವೋತ್ಸವಕ್ಕೆ ಇಂದು ತೆರೆ ಬೀಳಲಿದ್ದು ಇಂದು ಟಿಟಿಡಿ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀ ನಿವಾಸ ದೇವರ ವಸ್ತç ಬಂದಿದ್ದು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಲಾಗಿದೆ ಎಂದ ಅವರು ಪ್ರತಿವರ್ಷದಂತೆ ಈ ವರ್ಷವು ತಮಿಳುನಾಡಿನ ನಾದಹಾರ ಟ್ರಸ್ಟ್ ನ ಸುಮಾರು ೩೦೦ ಕ್ಕೂ ಹೆಚ್ಚು ಕಲಾವಿದರು ನಿರಂತಾರವಾಗಿ ಇಂದು ನಾದ ನಮನ ಸಂಗೀತ ಮೂಲಕ ರಾಯರಿಗೆ ಸಂಗೀತ ಸೇವೆ ಸಲ್ಲಿಸಲಿದ್ದಾರೆಂದರು.
ಮ0ತ್ರಾಲಯದಲ್ಲಿ ಶ್ರೀ ರಾಮನ ಭವ್ಯ ಮೂರ್ತಿ ನಿರ್ಮಾಣವಾಗುತ್ತಿದ್ದು ಮೂರು ಎಕರೆ ಪ್ರದೇಶದಲ್ಲಿ ಮಿನಿ ಅಯೋಧ್ಯ ಮಾದರಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ ಎಂದ ಅವರು ಈ ಬಾರಿ ರಾಯರ ಗುರು ವೈಭವೋತ್ಸವ ಸಂದರ್ಭದಲ್ಲಿ ರಾಯರ ಗರ್ಭ ಗುಡಿಗೆ ಸುಮಾರು ೨೫೦ ಕೆ.ಜಿ ತೂಕದ ರಜತ ಬಾಗಿಲು ಸಮರ್ಪಿಸಲಾಗುತ್ತಿದೆ ಎಂದರು.
ಮ0ತ್ರಾಲಯದಲ್ಲಿ ಮಿನಿ ಏರ್‌ಪೋರ್ಟ ನಿರ್ಮಾಣ ಮಾಡಲು ಈಗಾಗಲೆ ಬೆಂಗಳೂರಿನ ಕೆಲ ತಂಡಗಳು ಆಗಮಿಸಿ ಈ ಬಗ್ಗೆ ಪರಿಶೀಲಿಸಿವೆ ಮುಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಂಕಲ್ಪಿಸಲಾಗಿದೆ ಎಂದರು.
ಮ0ತ್ರಾಲಯ ತುಂಗಭದ್ರ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ ನಿರ್ಮಾಣ ಬಗ್ಗೆ ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆ ರೂಪಿಸಲಾಗಿತ್ತು ಅದನ್ನು ಕಾರ್ಯಗತಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದ ಅವರು ಮಂತ್ರಾಲಯದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
Comments
Post a Comment