ಕೆಎಸ್‌ಓಯು ನಿಂದ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣಕ್ಕೆ ಒತ್ತು-ಶರಣಪ್ಪ
ಕೆಎಸ್‌ಓಯು ನಿಂದ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣಕ್ಕೆ ಒತ್ತು-ಶರಣಪ್ಪ
ರಾಯಚೂರು,ಫೆ.೨೦-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯದೊಂದಿಗೆ ರಾಜ್ಯದ ಆರ್ಥಿಕ ದುರ್ಬಲವಾದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಮೂಲಕ ಶಿಕ್ಷಣ ನೀಡಲಾಗುತ್ತದೆ ಎಂದು ಕೆಎಸ್‌ಓಯು ಉಪಕುಲಪತಿ ಶರಣಪ್ಪ ವೈಜನಾಥ ಹಲಸೆ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಏಕೈಕ ಮುಕ್ತ ವಿವಿ ಎಂದು ಹೆಸರು ಪಡೆದಿರುವ ಕೆಎಸ್‌ಓಯು ರಾಜ್ಯದಲ್ಲಿ ಒಟ್ಟು ೨೩ ಪ್ರದೇಶಿಕ ಕೇಂದ್ರಗಳನ್ನು ಒಳಗೊಂಡಿದ್ದು ೧೩೦ ಕಲಿಕಾ ಕೇಂದ್ರಗಳಿದ್ದು ಸುಮಾರು ೬೪ ವಿವಿಧ ವಿಷಯಗಳನ್ನು ಬೋಧಿಸಲಾಗುತ್ತದೆ ಎಂದ ಅವರು ಈ ವಿವಿಯಲ್ಲಿ ದೂರ ಶಿಕ್ಷಣ ಪಡೆದ ಅನೇಕರು ಜಿಲ್ಲಾಧೀಕಾರಿ, ಸಹಾಯಕ ಆಯುಕ್ತ ಮುಂತಾದ ಉನ್ನತ ಹುದ್ದೇಯಲ್ಲಿದ್ದಾರೆಂದರು.
೧೯೯೬ ರಲ್ಲಿ ಸ್ಥಾಪನೆಯಾದ ಈ ವಿವಿ ರಾಜ್ಯದಲ್ಲಿ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಇದೀಗ ನಾನು ಕುಲಪತಿಯಾದ ನಂತರ ಇದರ ವಿಸ್ತರಣೆ ಹೆಚ್ಚಿಸಲು ಮೇಲಾಗಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯೋನ್ಮುಖನಾಗಿದ್ದೇನೆಂದರು.
ನ್ಯಾಕ್ ಪಡೆದಿರುವ ವಿವಿ ಸದ್ಯದಲ್ಲೆ ಅ ಪ್ಲಸ್ ಪ್ಲಸ್ ಶ್ರೇಣೀ ಲಬಿಸಲಿದೆ ಎಂದ ಅವರು ಮನೆ ಮನೆಗೆ ವಿದ್ಯೆ ಎಂಬ ಭಾವನೆಯೊಂದಿಗೆ ಬಿಪಿಎಲಸ್ ಕಾರ್ಡ ಹೊಂದಿದ ವಿದ್ಯಾರ್ಥಿಗಳಿಗೆ ಶೇ.೧೫, ಅಟೋ ಚಾಲಕ ಮಕ್ಕಳಿಗೆ ಶೆ.೧೫, ಕರೋನಾದಿಂದ ಮೃತರಾದ ಪೋಷಕರ ಮಕ್ಕಳಿಗೆ ಉಚಿತ ಮತ್ತು ಮಹಿಳೆಯರಿಗೆ ಶೇ.೩೦ ರಷ್ಟು ಶುಲ್ಕ ರಿಯಾಯಿತಿಯಲ್ಲಿ ಪ್ರವೇಶ ದೊರೆಯುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ವಿವಿಗೆ ಒಂದು ಎಕರೆ ಜಾಗ ನೀಡಿದರೆ ನಮ್ಮ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುತ್ತದೆ ಎಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡುತ್ತಿದ್ದೇನೆಂದ ಅವರು ನಮ್ಮ ವಿವಿಯಲ್ಲಿ ಒಂದೆ ಸಮಯದಲ್ಲಿ ಮುಕ್ತವಿವಿ ಮತ್ತು ಇತರೆ ವಿವಿಗಳ ತರಗತಿಗಳನ್ನು ಪ್ರವೇಶಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಗಮೇಶ ಹಿರೇಮಠ ಇದ್ದರು.
Comments
Post a Comment