ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವಕ್ಕೆ ಅದ್ದೂರಿ ತೆರೆ: ರಾಯರ ವರ್ಧಂತಿ ಅಂಗವಾಗಿ ತಿರುಪತಿ ಶೇಷವಸ್ತ್ರ ಹಾಗೂ ನಾದಹಾರ ಸಮರ್ಪಣೆ
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವಕ್ಕೆ ಅದ್ದೂರಿ ತೆರೆ:
ರಾಯರ ವರ್ಧಂತಿ ಅಂಗವಾಗಿ ತಿರುಪತಿ ಶೇಷವಸ್ತ್ರ ಹಾಗೂ ನಾದಹಾರ ಸಮರ್ಪಣೆ
ರಾಯಚೂರು,ಫೆ.೨೬-ಕಳೆದ ಒಂದು ವಾರದಿಂದ ಮಂತ್ರಾಲಯದಲ್ಲಿ ನಡೆಯುತ್ತಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವಕ್ಕೆ ಇಂದು ಅದ್ದೂರಿ ತೆರೆ ಬಿದ್ದಿದ್ದು ಇಂದು ಟಿಟಿಡಿ ದೇವಸ್ಥಾನ ಸಮಿತಿಯಿಂದ ರಾಯರ ಮೂಲ ಬೃಂದಾವನಕ್ಕೆ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಶೇಷವಸ್ತç ಸಮರ್ಪಿಸಲಾಯಿತು.
ಬೆಳಿಗ್ಗೆ ಟಿಟಿಡಿ ಸಿಬ್ಬಂದಿಗಳು ಹಾಗೂ ವಿಧ್ವಾಂಸರು ಶೇಷವಸ್ತçವನ್ನು ಶ್ರೀ ಮಠಕ್ಕೆ ತಂದರು ನಂತರ ವಾದ್ಯ ವೈಭವದೊಂದಿಗೆ ವಸ್ತçವನ್ನು ಬರಮಾಡಿಕೊಳ್ಳಲಾಯಿತು ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಹರಿವಾಣದಲ್ಲಿ ಅದನ್ನು ತಮ್ಮ ಶಿರದ ಮೇಲೆ ಹೊತ್ತು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು.
ರಾಯರಿಗೆ ಪಂಚಾಮೃತ ಅಭೀಷೇಕ ನೆರವೇರಿಸಲಾಯಿತು. ನಂತರ ರಜತ ರಥೋತ್ಸವಕ್ಕೆ ಪೀಠಾಧಿಪತಿಗಳು ಚಾಲನೆ ನೀಡಿದರು.
ಕಳೆದ ೧೯ ವರ್ಷದಿಂದ ಸತತವಾಗಿ ಮಂತ್ರಾಲಯದಲ್ಲಿ ನಾದಹಾರ ಸೇವೆಗೈಯುತ್ತಿರುವ ಚೆನ್ನೆöÊನ ನಾದಹಾರ ಟ್ರಸ್ಟ್ನ ಸುಮಾರು ೩೦೦ ಕ್ಕೂ ಹೆಚ್ಚು ಕಲಾವಿದರಿಂದ ನಾದಹಾರ ಸಂಗೀತ ಸೇವೆ ಸಮರ್ಪಿಸಲಾಯಿತು.
ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಆಶೀರ್ವಚನ ನೀಡಿ ಇಂದು ರಾಯರ ೪೨೮ನೇ ವರ್ಧಂತಿ ಮಹೋತ್ಸವ ನೆಡೆಯುತ್ತಿದ್ದು ಆ ಮೂಲಕ ಫೆ.೨೧ ರಿಂದ ಒಂದು ವಾರದವರೆಗೆ ನಡೆಯುತ್ತಿದ್ದ ಗುರುವೈಭವೋತ್ಸವಕ್ಕೆ ಇಂದು ತೆರೆ ಬೀಳಲಿದ್ದು ಫೆ.೨೨ ರಂದು ರಾಯರ ೪೦೨ ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ನೆರವೇರಿತು ಇಂದು ಅವರ ವರ್ಧಂತಿ ನಡೆಯುತ್ತಿದ್ದು ಭಕ್ತರ ಆಭೀಷ್ಟಗಳನ್ನು ಪೂರೈಸುವ ಗುರುರಾಯರು ನಮ್ಮನ್ನೆಲ್ಲ ಕರುಣಿಸಿ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡಿ ದೇಶದಲ್ಲಿ ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಮಳೆ ಬೆಳೆ ಸುಭೀಕ್ಷವಾಗಲಿ ಎಂದು ಕೋರಿದರು.
ಕಳೆದ ೧೯ ವರ್ಷದಿಂದ ನಾದಹಾರ ಸೇವೆಯನ್ನು ತಮಿಳುನಾಡಿನ ನಾದಹಾರ ಟ್ರಸ್ಟ ನೆರವೇರಿಸುತ್ತಿದ್ದು ರಾಯರು ಜನಿಸಿದ್ದು ತಮುಳುನಾಡಿನ ಭುವನಗಿರಿಯಲ್ಲಿ ತಮಿಳು ನಾಡಿನ ಜನರಿಗೆ ರಾಯರ ಮೇಲೆ ಅಪಾರ ಭಕ್ತ ಆ ದೃಷ್ಟಿಯಿಂದ ಅವರು ತಮ್ಮ ಗುರುಗಳಿಗೆ ಸಂಗೀತ ಸೇಬವೆ ಗೈಯಲು ಪ್ರತಿ ವರ್ಷ ಆಗಮಿಸುತ್ತಾರೆಂದರು.
ನAತರ ಶ್ರೀ ಮನ್ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿತು. ಭಕ್ತರಿಗೆ ಪೀಠಾಧಿಪತಿಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು .ವಿವಿಧ ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದರು. ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. .ವಿವಿಧ ರಾಜ್ಯ ಗ¼ ಭಕ್ತರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯರಾದ ರಾಜಾ ಎಸ್.ಗಿರಿಯಾಚಾರ್, ವಿಧ್ವಾಂಸರಾದ ವಾಧಿರಾಜಾಚಾರ್ ಸೇರಿದಂತೆ ಇನ್ನಿತರರು ಇದ್ದರು.
Comments
Post a Comment