ನಿಯಮ ಬಾಹಿರವಾಗಿ 10ಕೋಟಿ ರೂ. 74 ಕಾಮಗಾರಿಗಳ ನಿರ್ವಹಣೆ ಆದೇಶ: ಪ್ರಾದೇಶಿಕ ಆಯುಕ್ತರಿಗೆ ಮತ್ತು ರಾಜೀವ ಗಾಂಧಿ ವಸತಿ ನಿಗಮ ಎಂ.ಡಿ ಗೆ ದೂರು- ಬಷೀರುದ್ದೀನ್


 ನಿಯಮ ಬಾಹಿರವಾಗಿ 10 ಕೋಟಿ ರೂ. 74 ಕಾಮಗಾರಿಗಳ ನಿರ್ವಹಣೆ ಆದೇಶ:

ಪ್ರಾದೇಶಿಕ ಆಯುಕ್ತರಿಗೆ ಮತ್ತು ರಾಜೀವ ಗಾಂಧಿ ವಸತಿ ನಿಗಮ ಎಂ.ಡಿ ಗೆ ದೂರು- ಬಷೀರುದ್ದೀನ್

ರಾಯಚೂರು,ಮಾ.೨೮-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬ್ರಷ್ಟಾಚಾರ ತಾಂಡವವಾಡುತ್ತಿರುವಾಗಲೆ ಜಿಲ್ಲೆಯಲ್ಲಿ ನಿಮಯ ಬಾಹಿರವಾಗಿ ಕಾಮಗಾರಿಗಳ ನಿರ್ವಹಣೆ ಆದೇಶವನ್ನು ಜಿಲ್ಲಾಡಳಿತ ಮಾಡಿದ್ದು ಈ ಕೂಡಲೆ ರದ್ದು ಪಡಿಸಬೇಕೆಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಮತ್ತು ರಾಜೀವಗಾಂಧಿ ವಸತಿ ನಿಗಮಕ್ಕೆ ದೂರು ನೀಡಲಾಗುತ್ತದೆ ಎಂದು ಜಿ.ಪಂ ಮಾಜಿ ಸದಸ್ಯ ಬಷೀರುದ್ದೀನ್ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರ ಕ್ಷೇತ್ರದಲ್ಲಿ ಸುಮಾರು ೭೪ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ ವಾಸ್ತವದಲ್ಲಿ ಕಟ್ಟಡ ಕಾಮಗಾರಿಗಳನ್ನು ಮಾತ್ರ ನಿರ್ಮಿತಿ ಕೇಂದ್ರ ಮತ್ತು ಕ್ಯಾಷೋಟೆಕ್ ಗೆ ನೀಡಬೇಕು ಆದರೆ ನಗರಾಭಿವೃದ್ದಿ ಪ್ರಾಧಿಕಾರ ನಿಯಮ ಉಲ್ಲಂಘಿಸಿ ಕಟ್ಟಡ ಕಾಮಗಾರಿಗಳಲ್ಲದೆ ಉಳಿದ ಕಾಮಗಾರಿಗಳಾದ ಗ್ರಿಲ್ ಅಳವಡಿಕೆ, ಹೈ ಮಾಸ್ ಲೈಟ್ ಇನ್ನಿತರ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು ಇದರಲ್ಲಿ ಭಾರಿ ಅಕ್ರಮದ ಅನುಮಾನ ಮೂಡುತ್ತಿದ್ದು ಟೆಂಡರ್ ಕರೆಯದೆನೆ ಕಾಮಗಾರಿಗಳನ್ನು ನೀಡಲಾಗಿದ್ದು ಇದರಿಂದ ಬ್ರಷ್ಟಾಚಾರವಾದಂತಾಗುತ್ತದೆ ಈ  ಅದೇಶ ಹಿಂಪಡೆಯಬೇಕೆAದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಏನು ಕ್ರಮವಾಗದ ಕಾರಣ ಕಲಬುರ್ಗೀ ಪ್ರದೇಶಿಕ ಆಯುಕ್ತರು ಮತ್ತು ರಾಜೀವ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಲಾಗುತ್ತದೆ ಅಲ್ಲದೆ ಕನೂನು ಹೋರಾಟ ಸಹ ಮಾಡಲಾಗುತ್ತದೆ ಎಂದರು.


ಅನೇಕ ಕಾಮಗಾರಿಗಳಣ್ನು ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಚಿಕ್ಕ ರಸ್ತೆಯಲ್ಲಿ ಸ್ವಾಗತ ಕಮಾನು, ಖಾಸಗಿ ವಕ್ತಿಗಳ ಲೇಔಟ್‌ಗಳಿಗೆ ಉದ್ಯಾನವನ ಅಭೀವೃದ್ದಿ ಇನ್ನೂ ಅನೇಕ ಕಾಮಗಾರಿಗಳು ಲೋಪ ದೋಷದಿಂದ ಕೂಡಿದ್ದು ಅನುದಾನ ದುರ್ಬಳಿಕೆ ಮಾಡುವ ಮತ್ತು ಬ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದಾಗಿದ್ದು ಸದರಿ ಕಾಮಗಾರಿಗಳ ನಿರ್ವಹಣೆಯಲ್ಲಿ ಶಾಸಕರು ಸಹ ಭಾಗಿಯಾಗಿರುವ ಸಂಶಯವಿದ್ದು ರಾಜಕೀ ಒತ್ತಡ ಕಾರಣ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಅರೋಪಿಸಿದರು.

ಈ ಸಂದಭದಲ್ಲಿ ಜೇಮ್ಸ್ ,ಶಂಕ್ರಪ್ಪ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ