ಏ.14 ರಂದು ರಾಜ್ಯಾದ್ಯಂತ ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರ ಬಿಡುಗಡೆ-ಶಿವು
ಏ.14 ರಂದು ರಾಜ್ಯಾದ್ಯಂತ ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರ ಬಿಡುಗಡೆ-ಶಿವು
ರಾಯಚೂರು,ಮಾ.೨೩- ಖ್ಯಾತ ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರವು ಏ.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಸಹ ನಿರ್ದೇಶಕ ಶಿವು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಗೋಲ್ಡನ್ ರೇನ್ ಮೂವಿಸ್ ಬ್ಯಾನರ್ ಅಡಿಯಲ್ಲಿ ರೈತನ ಸಮಸ್ಯೆಯನ್ನೆ ಮುಖ್ಯ ವಿಷಯವಾಗಿಟ್ಟುಕೊಂಡು ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು ಮುಖ್ಯ ಭೂಮಿಕೆಯಲ್ಲಿ ಹಿಂದಿ ಚಿತ್ರ ನಟ ಸೋನು ಸೂದ್ ನಟಿಸಲಿದ್ದು ಚಿತ್ರದಲ್ಲಿ ಕ್ರಾಂತಿಯವರು ನಟಸಿದ್ದು ಚಿತ್ರದ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ಸೇರಿದಂತೆ ಹಿರಿಯ ನಟ ರಮೇಶ ಭಟ್, ಚರಣರಾಜ್,ಕಲ್ಯಾಣಿ, ರಾಜು ತಾಳಿಕೋಟಿ,ಬ್ಯಾಂಕ್ ಮಂಜಣ್ಣ ಮತ್ತಿತರರು ನಟಿಸಿದ್ದಾರೆಂದರು.
ಡಾ.ಹ0ಸಲೇಖ ಸಂಗೀತ ಸಾಹಿತ್ಯ ಚಿತ್ರಕ್ಕಿದ್ದು ಟಿ.ಕೆ.ರಮೇಶ, ಜಿ.ನಾರಾಯಣಪ್ಪ, ವಿ.ಸಂಜಯಬಾಬು ನಿರ್ಮಾಪಕರಾಗಿದ್ದಾರೆಂದ ಅವರು ಚಿತ್ರವು ದೊಡ್ಡ ಬಜೆಟ್‌ನಲ್ಲಿ ನಿರ್ಮೀಸಲಾಗಿದ್ದು ಬಹುತಾರಾಗಣ ಹೊಂದಿದ್ದು ಚಿತ್ರಕ್ಕೆ ನಾಡಿನ ಪ್ರೇಕ್ಷಕರು ಪ್ರೋತ್ಸಹಿಸಬೇಕೆಂದರು.
ಈ ಸಂದರ್ಭದಲ್ಲಿ ಚಿತ್ರ ತಂಡದ ಸತೀಶ ಪಾಟೀಲ, ಮಹೇಶ, ರುಕ್ಮಂಗದ, ಇತರರು ಇದ್ದರು.
Comments
Post a Comment