ಮಾ.25 ರಂದು ಶ್ರೀರಾಮೋತ್ಸವ ಅಂಗವಾಗಿ ಬೃಹತ್ ಶೋಭಾ ಯಾತ್ರೆ-ಶರಣಬಸವ
ಮಾ.25 ರಂದು ಶ್ರೀರಾಮೋತ್ಸವ ಅಂಗವಾಗಿ ಬೃಹತ್ ಶೋಭಾ ಯಾತ್ರೆ-ಶರಣಬಸವ
ರಾಯಚೂರು,ಮಾ.೨೩-ಶ್ರೀರಾಮೋತ್ಸವ ಅಂಗವಾಗಿ ನಗರದಲ್ಲಿ ಮಾ.೨೫ ರಂದು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳ ನಗರ ಸಂಚಾಲಕ ಶರಣಬಸವ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಶ್ವ ಹಿಂದೂ ಪರಿಷದ್ ಹಾಘೂ ಬಜರಂಗದಳ ಸಂಯುಕ್ತಾಶ್ರಯದಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು ಅಂದು ಬೆಳಿಗ್ಗೆ ೧೦ ಗಂಟೆಗೆ ಚಂದ್ರಮೌಳೇಶ್ವರ ವೃತ್ತದಿಂದ ಪ್ರಾರಂಭವಾಗಿ ನಗರ ಪ್ರಮುಖ ವೃತ್ತಗಳಾದ ಸರ್ದಾರ್ ವಲ್ಲಭಭಾಯ್ ವೃತ್ತ, ಪಟೇಲ ವೃತ್ತ, ನೇತಾಜಿ ವೃತ್ತ, ಕಲ್ಲಾನೆ ವೃತ್ತ, ಭಗತಸಿಂಗ ವೃತ್ತ, ಮಾರ್ಗವಾಗಿ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನಕ್ಕೆ ತಲುಪಲಿದ್ದು ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಕಿಲ್ಲೆ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಬಜರಂಗದಳ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ಹೆಚ್.ಕೆ, ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್ ಹೂಗಾರ್, ಬಜರಂಗದಳ ಜಿಲ್ಲಾ ಸಹ ಸಂಯೋಜಕ ರವಿ ಕುಮಾರ್ ಆಗಮಿಸಲಿದ್ದಾರೆಂದರು.
ಶೋಭಾಯಾತ್ರೆಯುದ್ದಕ್ಕು ಡಿಜೆ ಸಂಗೀತ ಮೊಳಗಲಿದ್ದು ಯಾವುದೆ ಅಹಿತಕರ ಘಟನೆಗೆ ಅಸ್ಪದ ನೀಡದಂತೆ ಕಾರ್ಯಕ್ರಮ ಅಯೋಜಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ, ಶ್ರೀಕಾಂತ್,ಶಿವರಾಜ ಇದ್ದರು.
Comments
Post a Comment