ಪೂರ್ಣಿಮಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಘಾಟನೆ: ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇದ- ಶ್ರೀ ಸುಬುಧೇಂದ್ರತೀರ್ಥರು.
ಪೂರ್ಣಿಮಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಘಾಟನೆ: ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇದ- ಶ್ರೀ ಸುಬುಧೇಂದ್ರತೀರ್ಥರು.
ರಾಯಚೂರು,ಮಾ. 21-ವೈದ್ಯಕೀಯ ಚಿಕಿತ್ಸೆಯ ಮೂಲ ಆಯುರ್ವೇವೆಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಹೇಳಿದರು.
ಅವರು ಸೋಮವಾರ ಪೂರ್ಣಿಮಾ ಶಿಕ್ಷಣ ಸಂಸ್ಥೆಯಿಂದ ಸಂಚಾಲಿತ, ಪೂರ್ಣಿಮಾ ಆಯುರ್ವೇದ ಮೆಡಿಕಲ್ ಆಸ್ಪತ್ರೆ ಮತ್ತು ಕಾಲೇಜಿನ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಇವತ್ತು ವೈದ್ಯಕೀಯ ಪ್ರಪಂಚದಲ್ಲಿ ಅನೇಕ ಬಗೆಯ ವೈದ್ಯಕೀಯ ವಿಭಾಗಗಳು ಇವೆ ಆಂಗ್ಲ ಮಾಧ್ಯಮದ ಅಲೋಪತಿ ಮೆಡಿಸಿನ್, ಯುನಾನಿ, ಹೋಮಿಯೋಪತಿ ಇತ್ಯಾದಿಗಳೆಲ್ಲವೂ ಇದ್ದಾವೆ. ಆದರೆ ಇವಕ್ಕೆಲ್ಲ ಮೂಲ ಆಯುರ್ವೇದ. ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳ ಮೇಲೆ ತುಂಬಾ ಅವಲಂಬಿತವಾಗಿದ್ದಾರೆ. ಆದರೆ ಹಿಂದಿನ ಕಾಲದಲ್ಲಿ ಆಯುರ್ವೇದ ಅಧ್ಯಯನ ಮಾಡುವ ಬಹು ಮುಖ್ಯವಾದ ಗ್ರಂಥಗಳೆಂದರೆ ಮಾಧವ ನಿಧಾನ ಅಂದರೆ ರೋಗಗಳನ್ನು ಕಂಡುಹಿಡಿಯುವುದು, ಸೂತ್ರ ಸ್ಥಾನ ಇದು ಪ್ರಥಮ ಭಾಗವಾಗಿದ್ದು ವಾಗ್ಭಟರಿಂದ ರಚಿತವಾಗಿತ್ತು, ಶುಶ್ರೂತ ಸಂಹಿತೆ ದೇಹದ ಭಾಗಗಳನ್ನು ಅಧ್ಯಯನ ಮಾಡುವುದು ಮತ್ತು ಚರಕ ಸಂಹಿತೆ ಚಿಕಿತ್ಸೆಯನ್ನು ನೀಡುವುದು ಇತ್ಯಾದಿಗಳಿಂದ ಆಯುರ್ವೇದವನ್ನು ಮಧ್ಯಾಹ್ನ ಮಾಡಬಹುದಾಗಿದೆ. ಹೀಗೆ ಇವುಗಳನ್ನೆಲ್ಲ ಉತ್ತಮವಾಗಿ ಅಧ್ಯಯನ ಮಾಡಿದರೆ ಆಯುರ್ವೇದ ತಜ್ಞರಾಗುತ್ತಾರೆ. ಆಯುರ್ವೇದ "ನಾಡಿ ಪರಿಜ್ಞಾನ" ದಿಂದಲೇ ಎಲ್ಲವನ್ನು ಕಂಡುಹಿಡಿಯುವ ಸಾಮರ್ಥ್ಯ ಇದೆ. ವಾತ, ಪಿತ್ತ, ಕಫ ಈ ಮೂರು ಅಂಶಗಳಿಂದಲೇ ಪ್ರತಿಯೊಂದು ರೋಗವನ್ನು ಪತ್ತೆ ಹಚ್ಚಬಹುದು ಎಂದು ಆಯುರ್ವೇದ ಶಾಸ್ತ್ರದಲ್ಲಿದೆ. ಚಿಕಿತ್ಸಾ ವಿಧಾನ, ಸನಾತನ ವಿಧಾನದಿಂದ ರೋಗಗಳನ್ನು ಬೇರು ಸಹಿತ ಕಿತ್ತಿ ಹಾಕುವ ಶಕ್ತಿ ಆಯುರ್ವೇದ ಶಾಸ್ತ್ರಕ್ಕಿದೆ ಇದೆ ಎಂದು ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು, ಆಗಮಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಸುಸಜ್ಜಿತವಾದ ಕಟ್ಟಡ ಮತ್ತು ಅನುಭವವಿರುವ ಬೋಧನಾ ಸಿಬ್ಬಂದಿಗಳನ್ನೊಳಗೊಂಡ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ರಾಯಚೂರಿನಲ್ಲಿ ಪ್ರಾರಂಭವಾಗುತ್ತಿದೆ ಆಸ್ಪತ್ರೆ ಬಗ್ಗೆ ಬಹಳ ಮುಖ್ಯವಾಗಿ ಹೇಳುವುದಾದರೆ, ತಜ್ಞ ವೈದ್ಯರನ್ನು ಒಳಗೊಂಡಂತೆ ಎಲ್ಲಾ ರೀತಿಯ ಗುಣಮಟ್ಟದ ಲ್ಯಾಬೋರೇಟರಿಗಳು, ಎಲ್ಲಾ ತರಹದ ರೋಗಿಗಳ ವಿಭಾಗಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಮತ್ತು ಊಟದ ವ್ಯವಸ್ಥೆ, ಉತ್ತಮ ಆರೋಗ್ಯಯುತವಾದ ಕ್ಯಾಂಟೀನ್ ಸೌಲಭ್ಯವನ್ನು ಹೊಂದಿದೆ. ವಿಶೇಷವಾಗಿ ಆಸ್ಪತ್ರೆಯು ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿ ಇರುವುದರಿಂದ ಇದು ಜನರಿಗೆ ತುಂಬಾ ಅನುಕೂಲವಾಗಲಿದೆ. ಇದರ ಸದುಪಯೋಗವನ್ನು ಈ ಭಾಗದ ಜನರು ಪಡೆದು ಉತ್ತಮ ಆರೋಗ್ಯವಂತರಾಗಿರಿ ಎಂದು ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದಕ್ಕೆ ರಾಯಚೂರಿನ ಸೋಮವಾರಪೇಟೆಯ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮಿಗಳು ಆಗಮಿಸಿ, ಮಾತನಾಡಿ, ರಾಯಚೂರು ಜಿಲ್ಲೆ ಹಿಂದುಳಿದ ಹಣೆ ಪಟ್ಟಿಯನ್ನು ಕಟ್ಟಿಕೊಂಡಿತ್ತು ಆದರೆ ಕೇಶವರೆಡ್ಡಿ ಹಾಗೂ ಕುಟುಂಬದವರು ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿ, ಆಯುರ್ವೇದ ಮೆಡಿಕಲ್ ಕಾಲೇಜನ್ನು ತೆರೆದಿದ್ದಾರೆ. ಇದರ ಉಪಯೋಗವನ್ನು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಪಡೆದು ಈ ಭಾಗದ ಕೀರ್ತಿಯನ್ನು ಹೆಚ್ಚಿಸಬೇಕೆಂದು ಆಶೀರ್ವದಿಸಿದರು
ಉದ್ಘಾಟನಾ ಸಮಾರಂಭಕ್ಕೆ ರಾಯಚೂರಿನ ಸಾವಿರ ದೇವರ ಸಂಸ್ಥಾನ ಕಿಲ್ಲೆಬೃಹ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಆಗಮಿಸಿ, ಮಾತನಾಡಿ, ಹಸಿಯದೆ ಉಣಬೇಡ, ಹಸಿದು ಇರಬೇಡ, ಬಸಿಗೂಡಿ ತಂಗಳನ್ನುಣ್ಣಬೇಡ ವೈದ್ಯನ ವ್ಯಸನಬೇಡ ಎಂದ ಸರ್ವಜ್ಞ. ಪ್ರಾರಂಭದಲ್ಲಿ ಸರ್ವಜ್ಞನ ವಚನವನ್ನು ಸ್ಮರಿಸಿಕೊಂಡು ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಮೆಡಿಸನ್ ಇದರಿಂದ ತುಂಬಾ ದುರಂತಗಳು ಕಂಡುಬರುತ್ತಿವೆ, ಎಂದು ಹೇಳಿ ಪ್ರಸ್ತುತ ದಿನಗಳಲ್ಲಿ ಶರೀರವನ್ನು ರೋಗದ ಗೂಡನ್ನಾಗಿ ಮಾಡಿಕೊಂಡಿದ್ದೇವೆ ಅದನ್ನು ಸಂಪೂರ್ಣವಾಗಿ ತೊಲಗಿಸಬೇಕೆಂದು ರೇಖಾ ಕೇಶವರಡ್ಡಿ ದಂಪತಿಗಳು ಈ ಆಯುರ್ವೇದ ಮೆಡಿಕಲ್ ಕಾಲೇಜಿನ ತೆಗೆದಿದ್ದಾರೆ. ಆಧುನಿಕ ಎಲ್ಲಾ ತಂತ್ರಜ್ಞಾನಗಳನ್ನು ಈ ಕಾಲೇಜು ಒಳಗೊಂಡಿದೆ. ವಿದ್ಯಾರ್ಥಿಗಳು ಆಯುರ್ವೇದ ಅಧ್ಯಯನ ಮಾಡಲು ಇದು ಉತ್ತಮ ಕಾಲೇಜು ಎಂದು ಹೇಳಿದರು ಹಾಗೆಯೇ ಇದರ ಶಂಕುಸ್ಥಾಪನೆಯನ್ನು ಕೇದಾರ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭೀಮಾಶಂಕರಲಿಂಗ ಮಹಾ ಭಗವತ್ಪಾದರು ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು
ಸಮಾರಂಭದ ಅಧ್ಯಕ್ಷತೆಯನ್ನು ಪೂರ್ಣಿಮಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ .ಎಲ್. ಕೇಶವರೆಡ್ಡಿ ವಹಿಸಿದ್ದರು
ಕಾರ್ಯಕ್ರಮದಲ್ಲಿ ರಾಯಚೂರು ನಗರದ ಶಾಸಕರಾದ ಡಾ.ಶಿವರಾಜ ಪಾಟೀಲ್,ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್, ಎ. ಪಾಪಾರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ ,ಬಿಜೆಪಿ ಜಿಲ್ಲಾಧ್ಯಕ್ಷರಾದ ರಮಾನಂದ್ ಯಾದವ್, ಮುಖಂಡರಾದ ತ್ರಿವಿಕ್ರಮ ಜೋಷಿ, ಗಿರೀಶ ಕನಕವೀಡು, ಬಿಜೆಪಿ ನಗರ ಅಧ್ಯಕ್ಷರಾದ ಬಿ. ಗೋವಿಂದ್, ನಗರ ಸಭೆ ಸದಸ್ಯರಾದ ಉಮಾ ರವೀಂದ್ರ ಜಲ್ದಾರ್, ಪ್ರದೀಪ್ ಸಾನ್ ಬಾಳ್, ಎ.ಚಂದ್ರಶೇಖರ್, ನವೀನ್ ರೆಡ್ಡಿ ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲರುಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments
Post a Comment