ಕುಂದಾಪುರ ವೈದ್ಯರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಪ್ರಶಂಸೆ
ಕುಂದಾಪುರ ವೈದ್ಯರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಪ್ರಶಂಸೆ
ರಾಯಚೂರು,ಮಾ.25- ವಿಶ್ವದ ಅಗ್ಗದ ಮತ್ತು ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯಲ್ಲಿ ಭಾರತವು ಅಗ್ರ ಐದು ದೇಶಗಳಲ್ಲಿ ಒಂದು. ವೈದ್ಯರು ತಮ್ಮ ಆದಾಯವಾಗಿರುವ ವೃತ್ತಿಯಲ್ಲಿಯೇ ಹಲವರಿಗೆ ಉಚಿತ ಸೇವೆ ನೀಡುವುದರ ಜೊತೆಗೆ ವಿವಿಧ ದತ್ತಿ ಸಂಸ್ಥೆಗಳ ಮೂಲಕ ವಿವಿಧ ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕುಂದಾಪುರದ ವೈದ್ಯರು ಅನುದಿನದ ಸೇವಾ ಚಟುವಟಿಕೆಗಳ ಜೊತೆಗೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು , ದೇಶದಲ್ಲಿ ಮೊದಲ ಬಾರಿಗೆ ಒಂದು ವಿನೂತನ ಸೇವಾ ಚಟುವಟಿಕೆಯನ್ನು ನಡೆಸುತ್ತಿದ್ದಾರೆ.
ಸಮಾಜದಲ್ಲಿ ಧನನಾತ್ಮಕ ಬದಲಾವಣೆಗಾಗಿ ತಮ್ಮ ತನು ಮನ ಧನವನ್ನು ಅರ್ಪಿಸಿರುವ ಹಾಗೂ ಆರ್ಥಿಕವಾಗಿ ಕಷ್ಟದಲ್ಲಿರುವ ಸಾಮಾಜಿಕ ಕಾರ್ಯಕರ್ತರಿಗೆ ಬೆಂಬಲ ನೀಡುವ "ಆರೋಗ್ಯ ಸೇವಾ ಕಾರ್ಡ್" ಅನ್ನು ಕುಂದಾಪುರದ ವೈದ್ಯರು ನೀಡಿದ್ದಾರೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸುಮಾರು 150 ಜನರು ಆರೋಗ್ಯ ಕಾರ್ಡ್ ನ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ ಹಾಗೂ ಇದನ್ನು ಒಂದು ವರ್ಷದವರೆಗೆ ಬಳಸಬಹುದು. ಈ ಆರೋಗ್ಯ ಕಾರ್ಡ ನ ಉಪಲಬ್ದತೆ ಹಾಗೂ ಉಪಯೋಗಕ್ಕೆ ತಗಲುಬಹುದಾದ ವೆಚ್ಚವನ್ನು ವೈದ್ಯರು ಮತ್ತು ಆಸ್ಪತ್ರೆಗಳು ಭರಿಸಲಿದ್ದಾರೆ .
ವೈದ್ಯ ಸಂಘಗಳ , ವೈದ್ಯರ , ಆಸ್ಪತ್ರೆಗಳ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ವಚ್ಚ ಭಾರತ್‌ನಲ್ಲಿ ತೊಡಗಿರುವ ಕಾರ್ಯಕರ್ತರೊಬ್ಬರು ಸಮಾಜದಲ್ಲಿ ಸಕಾರಾತ್ಮಕ ಕಾರ್ಯಗಳನ್ನು ಬೆಂಬಲಿಸುವ ವೈದ್ಯ ಸಮುದಾಯದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
"ಅರ್ಹರಿಗೆ ಇಂತಹ ಬೆಂಬಲಗಳು ಇತರ ವೃತ್ತಿಪರ ಸಂಸ್ಥೆಗಳಿಂದಲೂ ಬರಬೇಕು, ಇದರಿಂದ ಸಮಾಜದಲ್ಲಿ ಇನ್ನೂ ಹೆಚ್ಚಿನ ರಚನಾತ್ಮಕ ಕೆಲಸಗಳನ್ನು ಮಾಡಬಹುದು" ಎಂದು ಹಲವು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯ.
Comments
Post a Comment