ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ: ನಗರ ಸೇರಿದಂತೆ ವಿವಿಧೆಡೆ ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದನೆ- ಎಂ.ವಿರುಪಾಕ್ಷಿ
ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ:
ನಗರ ಸೇರಿದಂತೆ ವಿವಿಧೆಡೆ ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದನೆ- ಎಂ.ವಿರುಪಾಕ್ಷಿ
ರಾಯಚೂರು,ಮಾ.೨೩-ನಗರ ಸೇರಿದಂತೆ ವಿವಿಧೆಡೆ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರು ಅಪಾರ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದು ಅವರ ವಿರುದ್ಧ ಲೋಕಾಯುಕ್ತ ದೂರು ಮತ್ತು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಗಂಭೀರ ಅರೋಪ ಮಾಡಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ನಾನು ಬ್ರಷ್ಠಾಚಾರಕ್ಕೆ ಆಸ್ಪದ ನೀಡುವುದಿಲ್ಲವೆಂದ ಹೇಳುತ್ತಾರೆ ಆದರೆ ಅವರ ಪಕ್ಷದ ಶಾಸಕರು ಇಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದು ಅವರ ಮೇಲೆ ಏನು ಕ್ರಮ ವಾಗಿದೆ ಎಂದು ಕೇಳಿದ ಅವರು ಗಬ್ಬೂರಿಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಬರುತ್ತಿದ್ದಾರೆ ಅವರು ಇದಕ್ಕೆ ಉತ್ತರಿಸಬೇಕೆಂದರು.
ನಮ್ಮ ದೇಶದ ಸಂಪತ್ತನ್ನು ಮೋದಿಯವರು ಅದಾನಿಗೆ ಅರ್ಪಿಸಿದ್ದಾರೆಂದ ಅರೋಪಿಸಿದ ಅವರು ಇತ್ತ ಶಿವನಗೌಡ ನಾಯಕರು ಬ್ರಷ್ಟಾಚಾರ ಮಾಡಿ ಕೋಟ್ಯಾಂತರ ಸಂಪತ್ತು ಗಳಿಸಿದ್ದು ಅವರು ತಾ.ಪಂ ಸದಸ್ಯರಾಗಿದ್ದಾಗಿನ ಆಸ್ತಿ ಮತ್ತು ಈಗಿನ ಆಸ್ತಿ ತುಲನೆ ಮಾಡಿದರೆ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ ಎಂದರು.
ಕೆ.ಶಿವನಗೌಡ ನಾಯಕರು ಬನಹಟ್ಟಿಯಲ್ಲಿ ವಿಶ್ವನಾಥ ಬನಹಟ್ಟಿ ಹೆಸರಲ್ಲಿ ಸಂಗಯ್ಯ ಮುತ್ಯ ಶುಗರ‍್ಸ್ ಹೆಸರಲ್ಲಿ ೩೦೦ ಎಕರೆ ಭೂಮಿ ಖರಿದಿಸಿದ್ದಾರೆ, ಅದೇ ರೀತಿ ಶಿವಲಿಂಗ ಶುಗರ‍್ಸ್ ಲಿಮಿಟೆಡ್ ನಿಲುವಂಜಿಯಲ್ಲಿ ದೇವೆಂದ್ರಪ್ಪ ಹೆಸರಲ್ಲಿ ೨೫೦ ಎಕರೆ ಭೂಮಿ ಖರೀದಿ, ರಂಜಿತಾ ಕನ್ಸಟ್ರಕ್ಷನ್ ,ಲಕ್ಷಿö್ಮÃ ರಂಜಿತಾ ಶುರ‍್ಸ್ ಮುಂತಾದವುಗಳನ್ನು ಹೊಂದಿದ್ದಾರೆಂದು ದೂರಿದರು.
ಇನ್ನೂ ಭೂಮಿಯನ್ನು ಸಹ ಹೊಂದಿದ್ದು ನಗರದ ಹೊಸೂರಿನಲ್ಲಿ ಸ.ನಂ ೧/೧ , ೭.೧೨ ಎಕರೆ ರಾಜಾ ವಾಸುದೇವ ನಾಯಕ ಹೆಸರಲ್ಲಿದೆ, ಸ.ನಂ ೧/೩, ೭.೧೩ ಎಕರೆ ರಾಜಾ ವಾಸುದೇವ ನಾಯಕಲ್ಲಿದೆ, ಸ.ನಂ ೫/೧, ೩ ಎಕರೆ ರಾಜಾ ಗೋಪಾಲ ನಾಯಕ ಹೆಸರಲ್ಲಿದೆ , ೬/೧, ೫.೩೨ ಎಕರೆ ರಾಜಾ ಗೋಪಾಲ ನಾಯಕ ಹೆಸರಲ್ಲಿದೆ , ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿ ಸ.ನಂ ೯೨೯ ೧೫.೯ ಎಕರೆ ಜಗನ್ನಾಥ ರಾಜ ಪಾಟೀಲ ಹೆಸರಲ್ಲಿದೆ ಎಂದರು.
ಅದೇ ರೀತಿಯಲ್ಲಿ ನಗರದ ಸ್ಟೇಶನ್ ರಸ್ತೆಯಲ್ಲಿರುವ ರಂಜಿತಾ ಹೋಟೆಲ್ ನನ್ನು ಅಜಿತ ರಾಜ ಮೂಥಾ ಮತ್ತು ಅದರ ಪಕ್ಕದಲ್ಲಿರುವ ಸಂತೋಷಿ ಸರೋವರ್ ಹೋಟೆಲ್ ರಾಖಿ ಸಂಚೇತಿ ಹೆಸರಲ್ಲಿ ನೋಂದಣೀ ಮಾಡಿಸಿದ್ದಾರೆಂದು ಅರೋಪಿಸಿದ ಅವರು ನಗರದ ಐಡಿಎಸ್‌ಎಂಟಿ ಲೇಔಟ್‌ನಲ್ಲಿ ದೊಡ್ಡ ಮನೆ, ನಿಜಲಿಂಗಪ್ಪ ಕಾಲೋನಿಯಲ್ಲಿ ಅಪಾರ್ಟ್ಮೆಂಟ್ ಖರೀದಿ,ಬೆಂಗಳೂರಿನಲ್ಲಿ ಮೈಕೋ ಲೇಔಟ್‌ನಲ್ಲಿ ಮನೆ, ಬೂಮನಗೊಂಡ ಗ್ರಾಮದಲ್ಲಿ ತಾಯಿ ಮಹಾದೇವಮ್ಮ ಹೆಸರಲ್ಲಿ ೬೦ ಎಕರೆ, ಕೆ.ಹನುಮಂತರಾಯ ನಗರದಲ್ಲಿ ೩೭ ಎಕರೆ ಸರ್ಕಾರಿ ಭೂಮಿ ಕಬ್ಜಾ, ಸಿರವಾರ ಗ್ರಾಮದಲ್ಲಿ ೮೦ ಎಕರೆ,ಜೆವರ್ಗಿಯಲ್ಲಿತಾಲೂಕಿನ ಗಡ್ಡಿ ಸಂಗಯ್ಯ ಗ್ರಾಮದಲ್ಲಿ ೩೦೦ ಎಕರೆ, ಸಿರವಾರ್ ಕ್ರಾಸ್ ಹತ್ತಿರ ೧೮ ಎಕರೆ, ಕೊಪ್ಪರ ಸ್ಟೇಡಿಯಮ್ ಗೆ ಮೀಸಲಿಟ್ಟ ಜಾಗದ ಪಕ್ಕದಲ್ಲಿ ೧೦೦ ಎಕರೆ ಜಾಗ,ತಿಂಥಣಿ ಬ್ರಿಜ್ ಬಳಿ ೪೦ ಎಕರೆ,ದೇವದುರ್ಗದಲ್ಲಿ ೧೭ ವೈನ್ ಶಾಪ್,ಹತ್ತಿಗುಡೂರು ಬಳಿ ಬಾರ್,ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಯಿಂದ ಖರೀದಿಸಿದ ೨೭ ಬಾರ್‌ಗಳು, ಇಲಕಲ್ ನಲ್ಲಿ ಗ್ರಾನೈಟ್ ಮೈನಿಂಗ, ಮಲ್ಲಾಪೂರದಲ್ಲಿ ಜಲ್ಲಿ ಕ್ರಷರ್ ಹೀಗೆ ಸಂಬಂಧಿಕರ ಹೆಸರಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಖರಿದಿಸಿದ್ದಾರೆ ಈ ಅಸ್ತಿಗಳ ಮೌಲ್ಯಮಾಪನ ಮಾಡಿದಾಗ ಇದರ ನಿಖರ ಮೊತ್ತ ತಿಳಿಯುತ್ತದೆ ಎಂದ ಅವರು ಲೋಕಾಯುಕ್ತಕ್ಕೆ ದೂರು ನೀಡಲಾಗುತ್ತದೆ ಮತ್ತು ಜನ ಪ್ರತಿನಿಧಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ ಅತ್ತನೂರು, ಬುಡ್ಡನಗೌಡ,ಯೂಸೂಫ್ ಖಾನ್, ಶಿವಶಂಕರ್,ದಾನಪ್ಪ ಯಾದವ್, ವಿಶ್ವನಾಥ ಪಟ್ಟಿ, ನರಸಿಂಹಲು ಇದ್ದರು.
Comments
Post a Comment