ಏಮ್ಸ್ ಗಾಗಿ ನನ್ನಿಂದ ಸೋಮವಾರದಿಂದ ಉಪವಾಸ ಸತ್ಯಾಗ್ರಹ - ರವಿ ಬೋಸರಾಜು
ಏಮ್ಸ್ ಗಾಗಿ ನನ್ನಿಂದ ಸೋಮವಾರದಿಂದ ಉಪವಾಸ ಸತ್ಯಾಗ್ರಹ - ರವಿ ಬೋಸರಾಜು. ರಾಯಚೂರು,ಮಾ.24- ರಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ಗಳಿಲ್ಲದೆ ರೋಗಿಗಳು ನರಳಾಡುತ್ತಿದ್ದಾರೆ ರಾಯಚೂರು ಜಿಲ್ಲೆಯನ್ನು ಕೇಂದ್ರ, ರಾಜ್ಯ ಸರಕಾರ ಸಂಪೂರ್ಣ ನಿರ್ಲ ಕ್ಷಿಸುತ್ತಿವೆ, ಕಲ್ಯಾಣ ಕರ್ನಾಟಕವೆಂದು ನಾಮಕರಣ ಮಾಡಿ ಈ ಭಾಗದ ಕಲ್ಯಾಣವನ್ನೆ ಮರೆತಿದ್ದಾರೆ. ನಾನು ಸೋಮವಾರ ಏಮ್ಸ್ ಗಾಗಿ ಉಪವಾಸ ಸತ್ಯಾಗ್ರಹ ಕೂರುವೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದರು.
ಏಮ್ಸ್ ಹೋರಾಟ ಸಮೀತಿ ನಡೆಸುತ್ತಿರುವ ೩೧೮ ದಿನಗಳ ನಿರಂತರ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಮೂಲಕ ಮಾಡುತ್ತಿರುವ ರಾಯಚೂರು ಬಂದ್ ಗೆ ಬೆಂಬಲಿಸಿ ಮಾತನಾಡಿ,
ರಾಯಚೂರಿನಲ್ಲಿ ಎರೆಡು ನದಿಗಳು ಹರಿಯುತ್ತವೆ, ವಿಶಾಲವಾದ ಭೂಮಿಯಿದೆ, ಉದ್ಯತ್ ಉತ್ಪಾದನೆ ಇದೆ, ರಾಜ್ಯಕ್ಕೆ ಅನ್ನ, ಚಿನ್ನ ನೀಡುತ್ತದೆ. ಜಿಲ್ಲೆಯಲ್ಲಿ ಏಮ್ಸ್ ಮಂಜೂರಾತಿಗಾಗಿ ಸುಮಾರು ೩೧೬ ದಿನದಿಂದ ನಡೆದ ಹೋರಾಟವನ್ನು ರ‍್ಕಾರ ನಿರ‍್ಲಕ್ಷ ಮಾಡುತ್ತಿದೆ, ರಾಯಚೂರು ಬಂದ್ ಸತ್ಯಾಗ್ರಹವನ್ನು ನಿರ್ಲಕ್ಷ ಮಾಡಿದರೆ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿನ ವೈದ್ಯಕೀಯ ಅವ್ಯವಸ್ತೆಯಿಂದ ಜನ ಸಾಮಾನ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಹೈದ್ರಾಬಾದ್ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಸಂಕಷ್ಟ ಅನುಭವಿಸುವದನ್ನು ನಿತ್ಯ ನೋಡುತ್ತಿದ್ದೇವೆ ಎಂದು ತಿಳಿಸಿದರು.
Comments
Post a Comment