ಮತದಾರ ಪ್ರಭು ಬಯಸಿದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ: ಮೂರು ಪಕ್ಷಗಳಿಂದ ಕುಟುಂಬ ರಾಜಕಾರಣ-ಮುಖ್ಯಮಂತ್ರಿ ಚಂದ್ರು

 


ಮತದಾರ ಪ್ರಭು ಬಯಸಿದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ:

ಮೂರು ಪಕ್ಷಗಳಿಂದ ಕುಟುಂಬ ರಾಜಕಾರಣ- ಮುಖ್ಯಮಂತ್ರಿ ಚಂದ್ರು

ರಾಯಚೂರು,ಮಾ.೨೫-ಮತದಾರ ಪ್ರಭು ಬಯಸಿದಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ರಾಜ್ಯ ಸಂಚಾಲಕ ಮುಖ್ಯಮಂತ್ರಿ ಚಂದ್ರು ಹೇಳಿದರು.

ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ ದೇಶದಲ್ಲಿ ಆಮ್ ಆದ್ಮಿ ಪಕ್ಷ ಬದಲಾವಣೆಯ ರಾಜಕಾರಣ ಮಾಡುತ್ತಿದೆ ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್ ಸತತ ಎರಡೆನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದು ಪಂಜಾಬದಲ್ಲಿಯೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಅಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಭಗವಂತ ಮಾನ್ ಸಿಎಂ ಆಗಿದ್ದಾರೆ ಮತದಾರನೆ ಪ್ರಭುವಾಗಿದ್ದು ಆತ ಬಯಸಿದಲ್ಲಿ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎಂಬ ಆಶಾಭಾವನೆಯಿದೆ ಎಂದರು.

ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ದೆಹಲಿಯಲ್ಲಿ ಕೇಜ್ರಿವಾಲ್ ಜನರಿಗೆ ಸರ್ಕಾರದಿಂದ ಉಚಿತವಾಗಿ ಅನೇಕ ಕೊಡುಗೆ ನೀಡಿದ್ದಾರೆ ಆದರೂ ಅವರು ಕೊರತೆ ಬಜೆಟ್ ಎದುರಿಸಿಲ್ಲ ದೂರ ದೃಷ್ಟಿ ಮತ್ತು ಭ್ರಷ್ಟಾಚಾರ ರಹಿತ ಆಡಳಿತದಿಂದ ಜನರಿಗೆ ಸೌಲಭ್ಯ ಸಮರ್ಪಕವಾಗಿ ದೊರಕಿಸಿಕೊಡಬಹುದೆಂದು ತೋರಿಸಿದ್ದಾರೆಂದ ಅವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದೇಶದ ಜನರನ್ನು ಸಾಲಗಾರರನ್ನಾಗಿ ಮಾಡುತ್ತಿದೆ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೆಯೂ ಬಡ್ಡಿ ಇದೆ ನಾವೆಲ್ಲರು ಬಡ್ಡಿ ಮಕ್ಕಳು ಎಂದು ಹಾಸ್ಯ ಚಟಾಕಿ ಹಾರಿಸಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಜೆಪಿ ಸರ್ಕಾರ ಅತ್ಯಂತ ಬ್ರಷ್ಟ ಸರ್ಕಾರವಾಗಿದೆ ೪೦ ರಷ್ಟು ಕಮೀಷನ್ ಪಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ ಅದೇ ರೀತಿ ಕಾಂಗ್ರೆಸ್ ಸಹ ಬಿಜೆಪಿಯ ಇನೊಂದು ಮುಖದಂತಿದೆ ಕಾಂಗ್ರೆಸ್ ಪಕ್ಷದ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರು ಲಂಚ ಕೇಳುವ ದೃಶ್ಯ ಮಾಧ್ಯಮದಲ್ಲಿ ಬಿತ್ತರವಾಗಿದೆ ಎಂದ ಅವರು ಜೆಡಿಎಸ್ ಪಕ್ಷವು ಇವೆರಡು ಪಕ್ಷಕ್ಕಿಂತ ವಿಭಿನ್ನವಾಗಿಲ್ಲವೆಂದರು.


ಕಾ0ಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿಯವರನ್ನು ಟೀಕಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರಿ ಶಿಕ್ಷೆ ವಿಧಿಸಿ ಅವರ ಸಂಸದ ಸದಸ್ಯತ್ವ ಸ್ಥಾನವನ್ನು ಕಿತ್ತುಕೊಂಡ ಬಿಜೆಪಿ ವಾಕ್ ಸ್ವಾತಂತ್ರö್ಯ ಹರಣ ಮತ್ತು ಅಧಿಕಾರ ದುರ್ಬಳಿಕೆ ಮಾಡಿಕೊಳ್ಳುತ್ತಿದೆ ಎಂದರು.

ಬಿಜೆಪಿಯ ಅನೇಕ ನಾಯಕರು ವಿರೋಧಿಗಳನ್ನು ಟೀಕಿಸುತ್ತಾರೆ ಅರ‍್ಯಾರಿಗೆ ಅನರ್ಹತೆ ಮಾಡಿಲ್ಲ ಈ ಪ್ರಕರಣವು ಪ್ರಜಾಪ್ರಭುತ್ವದ ಅಣಕವೆಂದ ಅವರು ಸಂವಿಧಾನಕ್ಕೆ ಎಲ್ಲರೂ ತಲೆ ಬಾಗಲೇಬೇಕು ಆದರೆ ನಿರ್ದಿಷ್ಟವಾಗಿ ಒಬ್ಬರನ್ನೆ ಗುರಿಯಾಗಿಸುವುದು ಸರಿಯಲ್ಲವೆಂದರು.

ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುತ್ತಿದ್ದು ಅವೈಜ್ಞಾನಿಕ ಸಂಗತಿಯಾಗಿದ್ದು ಜನಗಣತಿಯಾಗದೆ ಜಾತಿಗೆ ಮೀಸಲಾತಿ ಹೆಚ್ಚಳದಿಂದ ಮೀಸಲಾತಿ ಆಶಯ ಈಡೇರುವುದಿಲ್ಲವೆಂದ ಅವರು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮೀಸಲಾತಿ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ,ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷದಲ್ಲಿ ಕುಟುಂಬ ರಾಜಕಾರಣವಿದ್ದು ಅಪ್ಪ ಮಕ್ಕಳು, ಅಣ್ಣ ತಮ್ಮಂದಿರು, ಸಂಬAಧಿಕರಿಗೆ ಟಿಕೆಟ್ ನೀಡುವುದು ಸರಿಯಲ್ಲವೆಂದರು ವಂಶ ಪಾರಂಪರ್ಯ ಆಡಳಿತಕ್ಕೆ ಆಮ್ ಆದ್ಮಿ ವಿರೋಧಿಯಾಗಿದ್ದು ನಮ್ಮ ಪಕ್ಷದಲ್ಲಿ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್ ಮತ್ತು ಅಧಿಕಾರವೆಂಬ ಸೂತ್ರವಿದೆ ಎಂದ ಅವರು ತಾವು ವಯಸ್ಸಿನ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲವೆಂದರು.

ಈ ಸಂದರ್ಭದಲ್ಲಿ ವಿಜಯ ಶರ್ಮ, ರುದ್ರಯ್ಯ ನವಲಿ ಹಿರೇಮಠ, ಡಿ.ವಿರೇಶ, ಸುಭಾಷ ಚಂದ್ರ ಸಂಬಾಜಿ, ಬಸವರಾಜ ಗುತ್ತೇದಾರ್ ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ