ಮುಖ್ಯಮಂತ್ರಿಗಳಿಂದ ಇಂದು ರಾಯಚೂರು ವಿಶ್ವವಿದ್ಯಾಲಯ ಉದ್ಘಾಟನೆ ಖಂಡನೀಯ- ಉಸ್ತಾದ

 


ಮುಖ್ಯಮಂತ್ರಿಗಳಿಂದ ಇಂದು ರಾಯಚೂರು ವಿಶ್ವವಿದ್ಯಾಲಯ ಉದ್ಘಾಟನೆ ಖಂಡನೀಯ- ಉಸ್ತಾದ. ರಾಯಚೂರು,ಮಾ.28-  ರಾಯಚೂರು ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷದ ನಂತರ ರಾಜ್ಯದ ಮುಖ್ಯ ಮಂತ್ರಿ ಇಂದು  ಉದ್ಘಾಟನೆ ಮಾಡುತ್ತಿರುವದು ಆಶ್ಚರ್ಯಕರ ಮತ್ತು ಖಂಡನೀಯವಾದದ್ದು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ್ ಹೇಳಿದ್ದಾರೆ.

ವಿಶ್ವವಿದ್ಯಾಲಯ ಪ್ರಾರಂಭವಾಗಿ ಎರಡು ವರ್ಷವಾದರೂ ನಯಾ ಪೈಸೆ ಅನುದಾನ ನೀಡದ ಸರಕಾರ ಯಾವ ಮುಖವನ್ನಿಟ್ಟುಕೊಂಡು ಇಂದು ಉದ್ಘಾಟನೆ ಮಾಡುತ್ತಿದ್ದಾರೆ ಎಂದು      ಪ್ರಶ್ನಿಸುವಂತಾಗಿದೆ.

ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸುಮಾರು 500 ಕೋ.ರೂ ಅನುದಾನದ ಬೇಡಿಕೆ ಇದ್ದರೂ ಇಲ್ಲಿಯವರೆಗೆ ಒಂದೇ ಒಂದು ನಯಾ ಪೈಸೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿಲ್ಲ, ಇಂತಹ ಸಂದರ್ಭದಲ್ಲಿ ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುತ್ತಿರುವದು ಹಾಸ್ಯಾಸ್ಪದವಾಗಿದೆ.     ರಾಯಚೂರು ವಿಶ್ವವಿದ್ಯಾಲಯದ ಬೆಳವಣಿಗೆಗೆ ಸರಕಾರದ ಪಾತ್ರವೇನು? ಪೂರ್ಣ ಪ್ರಮಾಣದ ಹುದ್ದೆಗಳ ಮಂಜೂರಿ ಇಲ್ಲ, ಯಾವುದೇ ಹೊಸ ಕಟ್ಟಡ ಕಟ್ಟಲು ಅನುದಾನ ನೀಡಿಲ್ಲ, ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ, ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಉದ್ಘಾಟನೆ ಗೆ ಮುಂದಾಗಿರುವದು ಚುನಾವಣಾ ಗಿಮಿಕ್ ಬಿಟ್ಟರೆ ಬೇರೇನೂ ಇಲ್ಲ.


ಸುಮಾರು 250 ಎಕರೆ ಜಮೀನು ಇರುವ ರಾಯಚೂರು ವಿಶ್ವವಿದ್ಯಾಲಯದ  23 ಸ್ನಾತಕೋತ್ತರ ಕೋರ್ಸಗಳಿದ್ದು ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಕ್ಯಾಂಪಸ್ ಒಳಗಡೆಯೇ ಉನ್ನತ ವ್ಯಾಸಂಗ್ ಪಡೆಯುತ್ತಿದ್ದಾರೆ, ಆ ವಿದ್ಯಾರ್ಥಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ, ಅವುಗಳನ್ನು ಒದಗಿಸುವದು ಬಿಟ್ಟು ಕಾಟಾಚಾರದ ಉದ್ಘಾಟನೆ ಯಾವ ಪುರುಷಾರ್ಥಕ್ಕೆ ಎಂದು ತಿಳಿಯದಾಗಿದೆ.

ಕಾರಣ, ಮುಖ್ಯ ಮಂತ್ರಿಗಳಿಗೆ ಈ‌ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿ ಕುರಿತು ಕಾಳಜಿ ಇದ್ದಲ್ಲಿ, ತಕ್ಷಣ ವಿಶ್ವವಿದ್ಯಾಲಯದ ಬೇಡಿಕೆಯಂತೆ ಅನುದಾನ ಬಿಡುಗಡೆ ಹಾಗೂ ಹುದ್ದೆಗಳ ಮಂಜೂರಾತಿ ಮಾಡಬೇಕೆಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ