ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಹಿಳಾ ಸಮಾವೇಶ ಕಾರ್ಯಕ್ರಮ: ನಮ್ಮೆಲ್ಲರ ಸಂರಕ್ಷಣೆಗೆ ಬಿಜೆಪಿ ವಿರುದ್ಧ ಮಹಿಳೆಯರು ಕಚ್ಚೆ ಕಟ್ಟಬೇಕಾಗಿದೆ- ದನಸಾರಿ ಸೀತಕ್ಕ.


 ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಹಿಳಾ ಸಮಾವೇಶ ಕಾರ್ಯಕ್ರಮ:

ನಮ್ಮೆಲ್ಲರ ಸಂರಕ್ಷಣೆಗೆ ಬಿಜೆಪಿ ವಿರುದ್ಧ ಮಹಿಳೆಯರು ಕಚ್ಚೆ ಕಟ್ಟಬೇಕಾಗಿದೆ- ದನಸಾರಿ ಸೀತಕ್ಕ.

ರಾಯಚೂರು,ಮಾ.25- ಬಿಜೆಪಿ ಸರ್ಕಾರ ಬಡ ಜನರನ್ನು ಮರೆತು ಬಂಡವಾಳ ಶಾಹಿಗಳ ಕೈಗೊಂಬೆಯಾಗಿ ಪ್ರಜಾ ಪ್ರಜಾಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ದೇಶದಲ್ಲಿ  ನಿರಂತರ ವಾಗಿ  ಬೆಲೆ ಏರಿಕೆಯಿಂದ ಬಡವರ ಬದುಕು ಬೀದಿಪಾಲಾಗುತ್ತಿದೆ. ಈ ದೇಶದಲ್ಲಿ ಯಾರು ಮಾತನಾಡದಂತೆ ಬಿಜೆಪಿ ಸರ್ಕಾರ ಸರ್ವಾಧಿಕಾರ ನಡೆಸುತ್ತಿದೆ ನಮ್ಮೆಲ್ಲರ ರಕ್ಷಣೆಗಾಗಿ ಮಹಿಳೆಯರು ಬಿಜೆಪಿ ವಿರುದ್ಧ ಕಚ್ಚೆ ಕಟ್ಟಿ ಹೋರಾಡಬೇಕಾಗಿದೆ ಎಂದು ತೆಲಂಗಾಣ ಶಾಸಕಿ, ಎಐಸಿಸಿ ಮಹಿಳಾ ಕಾರ್ಯದರ್ಶಿಗಳಾದ    ದನಸಾರಿ ಸೀತಕ್ಕ ಸಂದೇಶ ನೀಡಿದರು‌.

ಸಮೀಪದ ಬೋಳಮಾನ್ ದೊಡ್ಡಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಗ್ಯಾರಂಟಿ‌ ಕಾರ್ಡ್ ವಿತರಣೆ ಕಾರ್ಯಕ್ರಮ ಹಾಗೂ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ತೆಲಂಗಾಣ ಶಾಸಕಿ, ಹೋರಾಟಗಾರ್ತಿ ದನಸಾರಿ ಸೀತಕ್ಕ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ್ಯ ಪೂರ್ವದಿಂದಲೂ ಬಡತನ ನಿರ್ಮೂಲನೆ, ಸಮಾನತೆ, ರಾಷ್ಟ್ರೀಯತೆ, ಸರ್ವಾಂಗೀಣ ಅಭಿವೃದ್ದಿ ಕಾಂಗ್ರೆಸ್ ನಿಂದ ಮಾತ್ರ ಸಾದ್ಯವಾಗಿದೆ.   ದೇಶಕ್ಕೆ ಬಿಜೆಪಿ ಅವರ ಕೊಡುಗೆ ಶೂನ್ಯವಾಗಿದೆ ಮುಂಬರುವ ಚುನಾವಣೆಯಲ್ಲಿ ಈ ಸುಳ್ಳಿನ ಬಿಜೆಪಿಯನ್ನು ಸೋಲಿಸಿ ಕೈ‌ಜೊತೆ ಕೈಜೋಡಿಸಬೇಕೆಂದು  ಮನವಿ‌ಮಾಡಿದರು..

ನಂತರ ಎಐಸಿಸಿ ಕಾರ್ಯದರ್ಶಿ ಎನ್‌.ಎಸ್ ಬೋಸರಾಜು ಮಾತನಾಡಿ,ಬಿಜೆಪಿ ಸರ್ಕಾರ ಹಾಗೂ ಶಾಸಕರು ಬರೀ ಸುಳ್ಳುಗಳನ್ನು ಹೇಳುವ ಮೂಲಕ ಜನರನ್ನು ಮರಳು ಮಾಡುತ್ತಿದ್ದಾರೆ‌. ರಾಜ್ಯದಲ್ಲಿ‌  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಂದರೆ ಮಾತ್ರ  ಆರ್ಥಿಕ, ಸಾಮಾಜಿಕ, ಶೈಕ್ಣಣಿಕ, ರೈತರ, ಮಹಿಳೆಯರ ರಕ್ಷಣೆ ಸೇರಿ ಸರ್ವಾಂಗೀಣ ಅಭಿವೃದ್ದಿಯಾಗಲಿದೆ  ಎಂದು ತಿಳಿಸಿದರು. 


ರಾಜ್ಯದಲ್ಲಿ ಯಾರೂ ಹಸಿವಿನಿಂದ  ಉಪವಾಸ ಮಲಗಬಾರದೆಂದು ಅನ್ನ ಬಾಗ್ಯ ಯೋಜನೆ ಜಾರಿಗೆ ತಂದಿರ್ತಕ್ಕಂತಹದ್ದು ಕಾಂಗ್ರೆಸ್ ಸರ್ಕಾರ ಎಂದು ಕಾಂಗ್ರೆಸ್ ಯೋಜನೆಗಳ ಕುರಿತು ಮಾತನಾಡಿದರು.

ನಂತರ ಜಿಲ್ಲಾದ್ಯಕ್ಷರು, ಮಾಜಿ ಸಂಸದರಾದ ಬಿ.ವಿ ನಾಯಕ್ ಮಾತನಾಡಿ,  ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬೆಲೆಗಳೆಲ್ಲ ಗಗನಕ್ಕೆ ಮುಟ್ಟಿವೆ, ಬಡವರು ಬದುಕಲಾರದೆ ಜನರ ಬದುಕು ಅತಂತ್ರವಾಗಿದ್ದಾರೆ‌. ಮಾತೆತ್ತಿದರೆ ಬರಿ ಸುಳ್ಳು ಹೇಳುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಯಾವ ಜನಪರ ಯೋಜನೆಗಳನ್ನು ಬಿಜೆಪಿ ಜಾರಿಗೆ ತಂದಿದೆ ಎಂದು ಗಂಬೀರವಾಗಿ ಬಿಜೆಪಿಯನ್ನು ಪ್ರಶ್ನಿಸಿದರು‌.

ಪ್ರತೀ ಮನೆಗೆ 200 ಯೂನಿಟ್ ಕರೆಂಟ್ ಫ್ರೀ, ಮನೆಯ ಯಜಮಾನಿಗೆ ರೂ.2000/ ಮತ್ತು ಬಿಪಿಎಲ್ ಕಾರ್ಡ್ ಗೆ 10 ಕೆಜಿ ಅಕ್ಕಿ ಉಚಿತ, ಯುವನಿಧಿ ಯೋಜೆನೆ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸರಳ ಹಾಗೂ ಬಡವರ ಅಭಿವೃದ್ದಿಯ ಯೋಜೆನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಬ್ಲಾಕ್ ಅದ್ಯಕ್ಷರಾದ ಬಸವರಾಜ ರಡ್ಡಿ ಮಾತನಾಡಿ, ರಾಯಚೂರು ನಗರ ಕ್ಷೇತ್ರದಲ್ಲಿ ಸರಿಯಾಗಿ ರಸ್ತೆಗಳಿಲ್ಲ, ಕುಡಿಯಲು ನೀರಿಲ್ಲ, ಚರಂಡಿಗಳ ನೀರು ರಸ್ತೆಗೆ ಬಂದು ಗಬ್ಬು ನಾರುತ್ತಿದೆ, ಈ ಬಾರಿ ಬಿಜೆಪಿ ಶಾಸಕರಿಗೆ ತಕ್ಕಪಾಟ ಕಲಿಸಿ ಕಾಂಗ್ರೆಸ್ ಗೆಲ್ಲಿಸಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ಹಿರಿಯರಾದ ಜಯಣ್ಣ, ಕೆ. ಶಾಂತಪ್ಪ, ರುದ್ರಪ್ಪ ಅಂಗಡಿ, ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು, ಬಷಿರುದ್ದೀನ್, ನಿರ್ಮಲಾ ಬೆಣ್ಣೆ, ಎಸ್. ಪ್ರತಿಭಾ ರೆಡ್ಡಿ, ಅವರು ಮಾತನಾಡಿದರು.

ನಗರಸಭೆ ಉಪಾದ್ಯಕ್ಷರಾದ ನರಸಮ್ಮ ನರಸಿಂಹಲು, ಮಕ್ತಾಲಪೇಟೆ ಶ್ರೀ ಹರಿ, ಮಹಾದೇವ್, ನರಸಿಂಹಲು‌ ಮಾಡಗಿರಿ, ಕುರಬದೊಡ್ಡಿ ಆಂಜನೇಯ್ಯ,  ವಂದನಾ, ಜೋತಿ, ಅಕ್ಕಮ್ಮ ಗಿಲ್ಲೆಸಗೂರು, ಶ್ರೀದೇವಿ, ಹರಿಬಾಬು ರಾಂಪೂರ, ಮಹಾದೇವ, ತಿಮ್ಮಪ್ಪ‌, ಸಣ್ಣ ನರಸರಡ್ಡಿ, ಹನುಮಂತ ಹೊಸೂರು, ತಿಮ್ಮಾ ರಡ್ಡಿ, ಶ್ರೀನಿವಾಸ ರಡ್ಡಿ,  ಬಸನಗೌಡ, ರವಿ ರಾಂಪೂರ, ಮಲ್ಲಂಗ್, ಪ್ರಮೋದ್  ಶರಣಗೌಡ ಮಲ್ಲಾಪೂರು, ನರಸಿಂಹ ಮಟಮಾರಿ ಸೇರಿದಾಂತೆ ಸಾವಿರಾರು ಜನರು ಉಪಸ್ತಿತರಿದ್ದರು‌.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್