ಗಬ್ಬೂರಿನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ: ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು-ಅಮಿತ್ ಶಾ


 ಗಬ್ಬೂರಿನಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ:

ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು-ಅಮಿತ್ ಶಾ

ರಾಯಚೂರು,ಮಾ.೨೬- ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಆರೋಪಿಸಿದರು.

ಅವರಿಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ಆಯೋಜಿಸಿದ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿ ಕೊಪ್ಪರ ನರಸಿಂಹದೇವರು, ಬೂದಿ ಬಸವೇಶ್ವರರು ಮತ್ತು ಇಲ್ಲಿನ ಸಮಸ್ತ ಪುಣ್ಯ ಪುರುಷರಿಗೆ ವಂದಿಸುತ್ತ ಇಂದು ರಾಯಚೂರು ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನೆರವೇರುತ್ತಿದ್ದು ಸುಮಾರು ೪೨೮೩ ಕೋಟಿ ರೂಗಳ ೨೨೦ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದ್ದು ಬಿಜೆಪಿ ಸರ್ಕಾರ ಅಭಿವೃದ್ದಿ ಪರ ಎಂಬುದನ್ನು ಸಾಬೀತು ಮಾಡಿದೆ ಎಂದರು.

ಕಾ0ಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿತ್ತು ಇಲ್ಲಿ ಬ್ರಷ್ಟಾಚಾರ ಮಾಡಿ ಹಣ ದೋಚಿ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ನೀಡುತ್ತಿತು ಆದರೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದ್ದು ಅಭೀವೃದ್ದಿ ಪರ್ವ ಪ್ರಾರಂಭವಾಗಿದೆ ಎಂದರು.

ರಾಹುಲ್ ಅವಧಿಯಲ್ಲಿ ಕಾಂಗ್ರೆಸ್ ಸಮಾಪ್ತಿ ಕಂಡಿದೆ ಇತ್ತಿಚೆಗೆ ನಡೆದ ಪೂವೋತ್ತರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದ್ದು ಎನ್ ಡಿ ಎ ಮೈತ್ರಿಕೂಟ ಅಧಿಕಾರಕ್ಕೆ ಏರಿದೆ ಎಂದ ಅವರು

ಜೆಡಿಎಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರದೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಯಿತು ಸಮ್ಮಿಶ್ರ ಸರ್ಕಾರದಿಂದ ರಾಜ್ಯಕ್ಕೆ ಏನು ಉಪಯೋಗವಿಲ್ಲ ಜನರು ಕಾಂಗ್ರೆಸ್ ಮತ್ತು ಜೆಡಿಎಸ್‌ನ್ನು ತಿರಸ್ಕರಿಸಿದ್ದಾರೆ ಬಿಜೆಪಿಗೆ ಮುಂದಿನ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರಬೇಕೆಂದ ಅವರು ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕೆಂದರು.


ಕಾ0ಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶದ ಸುರಕ್ಷತೆಗೆ ಧಕ್ಕೆಯಿತ್ತು ನಮ್ಮ ಸೈನಿಕರನ್ನು ಪಾಕಿಸ್ಥಾನದ ಆತಂಕವಾದಿಗಳು ಅಮಾನವೀಯವಾಗಿ ಹತ್ಯೆ ಮಾಡಿದರೂ ದೇಶದಲ್ಲಿ ಅಧಿಕಾರ ನಡೆಸುವವರು ಅದನ್ನು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ಆದರೆ ದೇಶದಲ್ಲಿ ಯಾವಾಗ ಮೋದಿವರು ಪ್ರದಾನಿಯಾದರು ಅಂದಿನಿ0ದ ನಮ್ಮ ದೇಶವು ಸುರಕ್ಷಿತವಾಯಿತು ನಮ್ಮ ಸೈನಿಕರನ್ನು ಪುಲ್ವಾಮದಲ್ಲಿ ಬಾಂಬ್ ಸ್ಪೋಟಿಸಿ ಹತ್ಯೆ ಮಾಡಿದ್ದಕ್ಕೆ ತಕ್ಕ ಶಾಸ್ತಿ ಮಾಡಲಾಯಿತು ಪಾಕಿಸ್ಥಾನz ಒಳ ಹೊಕ್ಕು ಸರ್ಜಿಕಲ್ ಸ್ಟೆçöÊಕ್ ಮಾಡಲಾಯಿತು ಎಂದರು.

ಮೋದಿಯವರ ದಿಟ್ಟ ನಿಲುವಿನಿಂದ ದೇಶವು ಆರ್ಥಿಕವಾಗಿ ಪ್ರಗತಿ ಕಾಣುತ್ತಿದೆ ವಿಶ್ವದ ಐದನೆ ಸ್ಥಾನದಲ್ಲಿ ಭಾರತವಿದೆ ಮೇಕ್ ಇನ್ ಇಂಡಿಯಾ ಮೂಲಕ ಉದ್ಯೋಗ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಯಾಗಿದೆ ಕರೋನಾದಂತಹ ವಿಷಮ ಸಂದರ್ಭದಲ್ಲಿ ಬಡವರಿಗೆ ಉಚಿತ ಆಹಾರ ನೀಡಲಾಯಿತು ದೇಶ ವಾಸಿಗಳಿಗೆ ಉಚಿತವಾಗಿ ಕರೋನಾ ಲಸಿಕೆ ನೀಡಲಾಯಿತು ಎಂದ ಅವರು ಬಡವರಿಗೆ ಸೂರು, ಅನ್ನ ಮತ್ತು ಸ್ವಚ್ಚ ಭಾರತ ನಿರ್ಮಿಸಲು ಶೌಚಾಲಯ ನಿರ್ಮಿಸಿಕೊಡಲಾಯಿತು ಅಲ್ಲದೆ ಬಡವರಿಗೆ ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ ಸೌಕರ್ಯ ಕಲ್ಪಿಸಲಾಯಿತು,  ಬಡವರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಯಿತು ಎಂದರು.


ಕೇ0ದ್ರ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿದೆ ಅದೇ ರೀತಿ ಮಹಾದಾಯಿ ಯೋಜನೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸಿದೆ ಎಂದ ಅವರು ಇತ್ತೀಚೆಗೆ ಬಸವರಾಜ ಬೊಮ್ಮಾಯಿಯವರು ಮುಸ್ಲಿಂರಿಗಿದ್ದ ಶೇ.೪ ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿರಿಗೆ ಮತ್ತು ಪಂಚಮಸಾಲಿಯವರಿಗೆ ನೀಡಿದ್ದಾರೆ ಎಂದರು.

ಈ ಹಿಂದೆ ಈ ಪ್ರದೇಶವನ್ನು ನಿಜಾಂರು ಆಳಿದ್ದರಿಂದ ಇದನ್ನು ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿತ್ತು ಅದನ್ನು ನಮ್ಮ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಕಲ್ಯಾಣ ಕರ್ನಾಟಕವೆಂದು ಮರು ನಾಮಕಾರಣ ಮಾಡಿದ್ದಲ್ಲದೆ ಈ ಭಾಗದ ಅಭೀವೃದ್ದಿಗೆ ಸುಮಾರು ೫ಸಾವಿರ ಕೋಟಿ ರೂ ಮಂಜೂರಿ ಮಾಡಿದೆ ಎಂದರು.


ಜಲ ಜೀವನ್ ಮಿಷನ್  ಮೂಲಕ ಮನೆ ಮನೆಗೂ ನೀರು ನೀಡುವುದು ನಮ್ಮ ಸಂಕಲ್ಪವಾಗಿದೆ ಅದೇ ರೀತಿ ಈ ಭಾಗದಲ್ಲಿ ಹೆದ್ದಾರಿಗಳ ನಿರ್ಮಾಣ, ರೈಲ್ವೇ ಸಂಪರ್ಕ ಮುಂತಾದವುಗಳನ್ನು ಮಾಡುತ್ತಿದೆ ಐಐಐಟಿ ನೀಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ದೇವದುರ್ಗ ಶಾಸಕರಾದ ಕೆ.ಶಿವನಗೌಡ ಮಾತನಾಡಿ  ದೇಶದ ರಾಜಕೀಯ ಚಾಣಿಕ್ಯರೆಂದೆ ಖ್ಯಾತರಾದ ಅಮಿತ್ ಶಾರವರು ಶ್ರೀ ಬೂದಿ ಬಸವೇಶ್ವರರ ನಾಡಿಗೆ  ಬಂದಿದ್ದು ನಮ್ಮೆಲ್ಲರ ಸುದೈವವಾಗಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಸುಮಾರು ೪೨೮೩ ಕೋಟಿ ರೂಗಳ ೨೨೦ ಕಾಮಗಾರಿಗಳ ಉದ್ಘಾಟನೆ ಮತ್ತು ಅಡಿಗಲ್ಲು ನೆರವೇರಿಸಲಾಗಿದ್ದು ಜೆಜೆಎಂ ಯೋಜನೆ ಸೇರಿದಂತೆ ತಾಲೂಕಿನಲ್ಲಿ ಶಾಲಾ, ಕಾಲೇಜುಗಳು, ಪ್ರಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ವಸತಿನಿಲಯಗಳು, ನಿರಾವರಿ ಸೌಲಭ್ಯಗಳು ಮುಂತಾದವುಗಳನ್ನು ಉದ್ಘಾಟಿಸಲಾಗಿದ್ದು ಈ ಬಾಗದ ಅಭಿವೃದ್ದಿಗೆ ಪ್ರಧಾನಿ ಮೋದಿಯವರು ಮತ್ತು ಸಿಎಂ ಬಸವರಾಜ ಬೊಮ್ಮಾಯೊ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ0ದರು.


ಜಿಲ್ಲೆಗೆ ಏಮ್ಸ್ ನೀಡಬೇಕೆಂದು ಬಹುದಿನಗಳಿಂದ ಹೋರಾಟ ಮತ್ತು ಉಪವಾಸ ಸತ್ಯಾಗೃಹ ನಡೆದಿದ್ದು ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿ ಎಮ್ಸ್ ಮಂಜೂರಿ ಮಾಡಬೇಕೆಂದ ಅವರು ನಾನು ಹವ್ಯಾಸಿ ರಾಜಕಾರಣಿಯಲ್ಲ ಬದಲಾಗಿ ಬದ್ದತೆಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಯಾಗಿದ್ದು ಜನರ ಸಂಕಷ್ಟ ಪರಿಹಾರ ಮಾಡಬೇಕೆನ್ನುವ ಆಸೆಯಿಂದ ರಾಜಕೀಯಕ್ಕೆ ಬಂದಿದ್ದೇನೆ0ದರು.

ದೇಶವನ್ನು ೭೦ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಈ ಭಾಗದ ಅಭೀವೃದ್ದಿಗೆ ಒತ್ತು ನೀಡಿಲ್ಲ ದೇಶದ ಉಕ್ಕಿನ ಮನುಷ್ಯರಾಗಿದ್ದ ಸರ್ದಾರ ವಲ್ಲಬಾಯಿ ಪಟೇಲರಂತೆ ದಿಟ್ಟ ಗೃಹ ಸಚಿವರಾಗಿರುವ  ಅಮಿತ್ ಶಾ ಇಲ್ಲಿಗೆ ಬಂದಿದ್ದು ನಮ್ಮೆಲ್ಲರ ಭಾಗ್ಯವೆಂದರು.

ಈ ಬಾರಿ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೆ ವಂದಿಸಿದರು.

ಸ0ಸದ ಅಮರೇಶ್ವರ ನಾಯಕ ಮಾತನಾಡಿ ಮೋದಿಯವರ ಆಡಳಿತದಿಂದ ದೇಶವು ಪ್ರಗತಿಯತ್ತ ಸಾಗುತ್ತಿದ್ದು ಜಿಲ್ಲೆಯ ಜನರ ಬೇಡಿಕೆಯಾದ ಏಮ್ಸ್ ನೀಡಬೇಕೆಂದು ಮನವಿ ಮಾಡಿದ ಅವರು ಈ ಬಾರಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.

ವೇದಿಕೆ ಮೇಲೆ ಸಂಸದ ಭಗವಂತ ಖೂಬಾ, ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಕೊಲ್ಲಾ ಶೇಷಗಿರಿರಾವ್, ಪ್ರತಾಪ ಸಿಂಹ ನಾಯಕ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಸೇರಿದಂತೆ  ಅನೇಕರಿದ್ದರು.

ಹರಿದು ಬಂದ ಜನ ಸಾಗರ: ಅಮಿತ್ ಶಾ ನೋಡಲು ಜನ ಸಾಗರ ಹರಿದುಬಂದಿತ್ತು ಜನರು ತಂಡೋಪ ತ0ಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸೂಕ್ತ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.





Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್