ಮುಸ್ಲಿಂರ ಮೀಸಲಾತಿ ರದ್ದು ಮಾಡಿದ ಬೊಮ್ಮಾಯಿ ಕ್ರಮ ಖಂಡನೀಯ-ರಜಾಕ ಉಸ್ತಾದ
ಮುಸ್ಲಿಂರ ಮೀಸಲಾತಿ ರದ್ದು ಮಾಡಿದ ಬೊಮ್ಮಾಯಿ ಕ್ರಮ ಖಂಡನೀಯ-ರಜಾಕ ಉಸ್ತಾದ
ರಾಯಚೂರು,ಮಾ.೨೫-ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಖಂಡನೀಯವೆ0ದು ಅಂಜುಮನ್ ಎ ರಾಯಚೂರು ಸಂಚಾಲಕ ರಜಾಕ ಉಸ್ತಾದ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ಯ ಸಮುದಾಯಕ್ಕೆ ಮೀಸಲಾತಿ ನೀಡುವ ಭರದಲ್ಲಿ ಸಂವಿದಾನದತ್ತವಾದ ಮುಸ್ಲಿಂ ಸಮಾಜದ ಮೀಸಲಾತಿ ಕಿತ್ತುಕೊಂಡಿದ್ದಾರೆ0ದ ಅವರು ಬೇರೆ ಸಮುದಾಯಕ್ಕೆ ಮೀಸಲಾತಿ ನೀಡಲು ನಮ್ಮ ವಿರೋಧವಿಲ್ಲ ಆದರೆ ನಮಗೆ ಇದ್ದ ಮೀಸಲಾತಿ ಕಸೆದು ಅನ್ಯ ಸಮಾಜಕ್ಕೆ ನೀಡಿದ್ದು ಎಸ್ಟು ಸರಿ ಎಂದು ಪ್ರಶ್ನಿಸಿದರು.
ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ.೪ ರಷ್ಟು ಮೀಸಲಾತಿ ಕಡಿತವಾಗಿದ್ದು ನಮ್ಮ ಸಮುದಾಯದ ಬಡ ಜನರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ಅಮಾನವೀಯ ಮುಖ್ಯಮಂತ್ರಿ ಎಂದು ದೂರಿದ ಅವರು ನಮ್ಮ ಸಮುದಾಯದ ಹಿರಿಯರು ಈ ಬಗ್ಗೆ ಸಭೆ ಸೇರಿ ಕಾನೂನಾತ್ಮಕವಾಗಿ ಇದನ್ನು ನಿಭಾಯಿಸುವ ಬಗ್ಗೆ ಚಿಂತಿಸಲಾಗುತ್ತದೆ ಎಂದರು.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಅನೇಕ ಅಯೋಗಗಳು, ಸಮಿತಿಗಳು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ವರದಿ ನೀಡಿವೆ ರಾಜೇಂದ್ರ ಸಚಾರ್ ಸಮಿತಿ, ರಾಜ್ಯದಲ್ಲಿ ಕೆ.ರಹಮಾನ್ ಖಾನ್ ನೇತೃತ್ವದಲ್ಲಿ ಹೈ ಪವರ್ ಕಮಿಟಿ ರಚಿಸಲಾಗಿತ್ತು ಸಂವಿದಾನದಲ್ಲಿ ಮೀಸಲಾತಿ ತಗೆಯಿರಿ ಎಂದು ಹೇಳಿಲ್ಲ ಆದರೂ ರಾಜ್ಯ ಸರ್ಕಾರ ದ್ವೇಶದ ಮತ್ತು ಮುಸ್ಲಿಂ ಸಮುದಾಯ ಬಿಜೆಪಿಗೆ ಮತ ನೀಡುವುದಿಲ್ಲವೆಂಬ ಉದ್ದೇಶದಿಂದ ನಮ್ಮ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಅರೋಪಿಸಿದರು.
ಇತ್ತೀಚೆಗೆ ನಮ್ಮ ಉಡುಗೆ ತೊಡುಗೆ, ಆಹಾರ , ವ್ಯಾಪಾರದ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಅದರ ಮುಂದುವರಿದ ಭಾಗವಾಗಿ ಈಗ ಮೀಸಲಾತಿ ಕಸಿದುಕೊಳ್ಳಲಾಗಿದ್ದು ಇದರ ಬೆಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಹೈಫಿರೋಜ,ರಫಿ,ಫರೀದ ಉಲ್,ಇನ್ನಿತರರು ಇದ್ದರು.
Comments
Post a Comment