ದೇವದುರ್ಗದಲ್ಲಿ ದುರಾಡಳಿತ ತೊಡೆದು ಹಾಕಲು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ-ಆದರ್ಶ ನಾಯಕ
ದೇವದುರ್ಗದಲ್ಲಿ ದುರಾಡಳಿತ ತೊಡೆದು ಹಾಕಲು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ-ಆದರ್ಶ ನಾಯಕ
ರಾಯಚೂರು,ಮಾ.೨೫-ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ದುರಾಡಳಿತವಿದ್ದು ಅದನ್ನು ತೊಡೆದು ಹಾಕಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ದಿಸುತ್ತೇನೆಂದು ಆದರ್ಶ ನಾಯಕ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಏಷ್ಯಾ ಖಂಡದಲ್ಲೆ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊತ್ತಿರುವ ದೇವದುರ್ಗಕ್ಕೆ ಅತಿ ಹೆಚ್ಚು ಅನುದಾನ ಬರುತ್ತದೆ ಆದರೆ ಅದು ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ ಅದನ್ನು ಶಾಸಕರು ಸಮರ್ಪವಾಗಿ ತಾಲೂಕಿನ ಅಭಿವೃದ್ದಿ ಮಾಡದೆ ಮತದಾರರಿಗೆ ವಂಚಿಸಿದ್ದಾರೆ ಎಂದು ದೂರಿದರು.
ತಾಲೂಕಿನಲ್ಲಿ ಬ್ರಷ್ಟಾಚಾರ,ಇಸ್ಪೀಟು ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಮಿತಿ ಮೀರಿದ್ದು ಅದನ್ನು ಮಟ್ಟ ಹಾಕಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಆದ್ದರಿಂದ ತಾವು ಈ ಬಾರಿ ಪಕ್ಷೇತರರಾಗಿ ಕಣಕ್ಕಿಳೀಯಲಿದ್ದು ಕೆಲವು ಪಕ್ಷಗಳಿಗೆ ಸ್ಪರ್ದಿಸಲು ಕೋರಿದ್ದೇನೆ ಅಲ್ಲಿ ಅವಕಾಶ ಸಿಗದಿದ್ದಲ್ಲಿ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ದಿಸುತ್ತೇನೆಂದರು.
ಈ ಸಂದರ್ಭದಲ್ಲಿ ಶಿವಕುಮಾರ್,ಆಂಜಿನೇಯ್ಯ,ಲಕ್ಷಿö್ಮÃಕಾ0ತ,ಲಿ0ಗರೆಡ್ಡಿ ಇದ್ದರು.
Comments
Post a Comment