ಮಹಿಮೆಯ ತಾಣ ;ಕಾಡ್ಲೂರು ವನವಾಸಿ ಶ್ರೀ ರಾಮದೇವರ ದೇವಸ್ಥಾನ


ನದಿಯ ಮಧ್ಯೆ ಭಾಗದಲ್ಲಿ ಶ್ರೀರಾಮದೇವರ ಪಾದ ಮೂಡಿರುವ ಪ್ರತೀತಿ:
ಮಹಿಮೆಯ ತಾಣ  ಕಾಡ್ಲೂರು ವನವಾಸಿ  ಶ್ರೀ ರಾಮದೇವರ ದೇವಸ್ಥಾನ                   ರಾಯಚೂರು,ಜ.21- ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾನದಿ ತೀರದಲ್ಲಿ ವನವಾಸಿ ಶ್ರೀರಾಮದೇವರ ಹಾಗೂ ಶ್ರೀಉಪೇಂದ್ರ ತೀರ್ಥ ಕರಾರ್ಚಿತ ಶ್ರೀಪ್ರಾಣದೇವರ ಸನ್ನಿದಾನವಿದೆ.       ಶಕ್ತಿನಗರದಿಂದ ಸುಮಾರು 10 ಕಿ.ಮಿ ಅಂತರದಲ್ಲಿ ಕಾಡ್ಲೂರು ಗ್ರಾಮವಿದ್ದು ಈ ಸ್ಥಳಕ್ಕೆ ಪುರಾತನ ಇತಿಹಾಸವುಳ್ಳ ಹಿನ್ನೆಲೆಯಿದೆ. ತ್ರೇತಾಯುಗದಲ್ಲಿ ಶ್ರೀರಾಮನು ಸೀತಾನ್ವೇಷಣೆ ಮಾಡುವ ಸಂದರ್ಭದಲ್ಲಿ ಇಲ್ಲಿ ಸಂಚರಿಸುತ್ತಾ ಹೊರಟಾಗ ನದಿ ತೀರದಲ್ಲಿ ಋಷಿ, ಮುನಿಗಳು ಯಜ್ಙ, ಯಾಗ ಮಾಡುವ ಸಂದರ್ಭದಲ್ಲಿ ಲವಣಾಸುರನೆಂಬ ರಾಕ್ಷಸ ದೇವತಾ ಕಾರ್ಯಗಳಿಗೆ ಭಗ್ನ ಉಂಟುಮಾಡುತ್ತಿದ್ದನ್ನು ಕಂಡ ಶ್ರೀರಾಮನು ಆತನನ್ನು ಸಂಹರಿಸಿದನೆಂಬ ಪ್ರತೀತಿ ಇದೆ . ಶ್ರೀರಾಮನು ಇಲ್ಲಿ ನಡೆದಾಡಿದನೆಂಬುದಕ್ಕೆ ಪೂರಕವೆಂಬಂತೆ ಇಲ್ಲಿ ಭೃಹತ ಶಿಲೆಯ ಮೇಲೆ ಶ್ರೀರಾಮನ ಪಾದದ ಗುರುತು, ಶ್ರೀಚಕ್ರನಾರಾಯಣನ ಮೂರ್ತಿಯು ಶಿಲೆಯಲ್ಲಿ ಮೂಡಿದೆ ಇದಕ್ಕೆ ಧಕ್ಕೆ ಉಂಟಾಗಬಾರದೆಂದು ಕಾಡ್ಲೂರ ಸಂಸ್ಥಾನದವರು ಚೌಕಾಕಾರದ ರಕ್ಷಣೆ ಕಟ್ಟೆ ಕಟ್ಟಿಸಿದ್ದಾರೆ. ಸುಮಾರು 190 ರಿಂದ 200 ವರ್ಷಗಳ ಹಿಂದೆ ಸಂಚಾರಾರ್ಥವಾಗಿ ಹೊರಟ ಶ್ರೀರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ ಪೀಠಾಧಿಪತಿಗಳಾದ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ನಂತರ ನಾಲ್ಕನೆ ಪೀಠಾಧಿಪತಿಗಳಾದ ಶ್ರೀಉಪೆಂದ್ರತೀರ್ಥ ತೀರ್ಥರು ಮಧ್ವಧರ್ಮ ಪ್ರಚಾರ ಮಾಡುತ್ತಾ ಸಂಚರಿಸುತ್ತಾ ಕಾಡ್ಲೂರು ಸಂಸ್ಥಾನವನ್ನು ಅನುಗ್ರಹಿಸಲು ಕಾಡ್ಲೂರಿಗೆ ಆಗಮಿಸಿದಾಗ ಕೃಷ್ಣಾ ನದಿ ತೀರದಲ್ಲಿ ಆಹ್ನೀಕ ಮಾಡುವ ಸಂದರ್ಭದಲ್ಲಿ ಶಿಲೆಯ ಮೇಲೆ ಕಪಿ(ಕೋತಿ)ಬಂದು ಕುಳಿತಿರುತ್ತಿತ್ತು .ಇದೆ ರೀತಿ ಸುಮಾರು ದಿನಗಳವರೆಗೆ ಮುಂದೆವರಿದಾಗ ಒಂದು ದಿನ ಶ್ರೀಗಳವರ ಸ್ವಪ್ನದಲ್ಲಿ ಪ್ರಾಣದೇವರು ಆಗಮಿಸಿ ನನ್ನ ಪ್ರಭು ಶ್ರೀರಾಮದೇವರ ಸನ್ನಿದಾನ ಇಲ್ಲೆ ಇದ್ದು, ನನ್ನನ್ನು ಇಲ್ಲೆ ಪ್ರತಿಷ್ಠಾಪನ ಮಾಡು ಎಂಬ ಆಜ್ಞೆ ದೊರೆಯಿತು ಇದೆ ರೀತಿಯ ಸ್ವಪ್ನವು ಕಾಶಿ ಕ್ಷೇತ್ರದ ಶಿಲ್ಪಿಗೂ ಮೂಡಿದ ಘಟನೆ ನಡೆಯಿತು ಆತನು ಉತ್ತರ ಭಾರತದಿಂದ ದಕ್ಷಿಣದ ಕಡೆ ಕಾಡ್ಲೂರು ಗ್ರಾಮವನ್ನು ವಿಚಾರಿಸುತ್ತಾ ಬಂದು ಒಂದು ಮಾಸದವರೆಗೆ( ತಿಂಗಳು)ವರೆಗೆ. ಶ್ರೀಉಪೇಂದ್ರತೀರ್ಥರು ಶಿಲೆಯಲ್ಲಿ ಅಂಗಾರದಿಂದ ತೀಡಿದರು ಇದರಂತೆಯೆ ಕೆತ್ತನಾಕಾರನು ಭವ್ಯ ಮೂರ್ತಿಯನ್ನು ಕೆತ್ತಿದನು ಇಲ್ಲಿ ನಡೆದ ಒಂದು ಅಚ್ಚರಿ ಮೂಡಿಸುವ ಸಂಗತಿಯಂದರೆ ಕೆತ್ತನಾಕಾರನು ನದಿಯಲ್ಲಿ ಮುಳಗಿ ತನ್ನ ಒದ್ದಿ ಪಂಜೆಯಲ್ಲಿ ಆಗಮಿಸಿ ಕೆತ್ತನಾಕಾರ್ಯವನ್ನು ಮಾಡುತ್ತಿದ್ದನು ಅವನ ಪಂಜೆ ಒಣಗುವವರೆಗೆ ಮಾತ್ರ ಅತನ ಕೈಗಳು ಚಲನೆಯಿಂದಿದ್ದು ನಂತರ ಅತನಲ್ಲಿ ಶಕ್ತಿ ಕುಗ್ಗುತ್ತಿತ್ತು .ನಂತರ ಮೂರ್ತಿ ಕೆತ್ತನೆ ಕಾರ್ಯ ಪೂರ್ಣಗೊಂಡಾಗ ಶ್ರೀಗಳು ಪ್ರಾಣದೇವರ ಪ್ರಾಣ ಪ್ರತಿಷ್ಢಾನ ಮಾಡಿದರು.



ಇದಾದ ಬಳಿಕ ರಾಮದೇವರ ಮೂರ್ತಿಯು ಪ್ರತಿಷ್ಠಾಪನೆ ಮಾಡಬೇಕೆಂದು ಪ್ರಾಣದೇವರ ದೇವಸ್ಥಾನ ಕೂಗಳತೆಯಲ್ಲಿ ದೇವಸ್ಥಾವನ್ನು ಕಾಡ್ಲೂರ ಸಂಸ್ಥಾನದವರು ಕಟ್ಟಿಸಿದರು ಉತ್ತರ ಭಾರತದಿಂದ ಹೊಳಪು ಕಲ್ಲುಗಳಿಂದ ರೂಪಗೊಂಡ ಹನುಮಂತ ಸಮೇತ ರಾಮ ಲಕ್ಷ್ಮಣ ಸೀತಾದೇವಿಯ ವಿಗ್ರಹವು ತರೆಸಿದರು ಆದರೆ ಕಾರಣಾಂತರಗಳಿಂದ ಅವುಗಳ ಪ್ರತಿಷ್ಠಪನಾ ಕಾರ್ಯವು ನಡೆಯಲಿಲ್ಲ ನಂತರ 1992 ರ ಡಿಸೆಂಬರ ತಿಂಗಳಲ್ಲಿ ಕಾಡ್ಲೂರು ದೇಸಾಯರ ಮಕ್ಕಳ ಉಪನಯನ ಕಾಲದಲ್ಲಿ ಅವುಗಳ ಪ್ರತಿಷ್ಠಾಪನಾ ಕಾರ್ಯವುನಡೆಯಿತು.          ಇಲ್ಲಿ ಅನೇಕ ಕಾರ್ಯಕ್ರಮಗಳು ನಡಯುತ್ತಿದ್ದು ಶ್ರೀ ರಾಮನವಮಿ,ಶ್ರೀ ಹನುಮದವ್ರತ, ಪರ್ವಕಾಲವಾದ ಸಂಕ್ರಮಣ, ಗ್ರಹಣ ಕಾಲ ಮುಂತಾದ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಾರೆ, ಹುಣಸಿಹಾಳ ಹುಡಾ, ಗೋನಾಳ ಸೇರಿದಂತೆ ಆನೇಕ ಗ್ರಾಮದ ಭಕ್ತಾದಿಗಳು ಪಾದಯಾತ್ರೆ ಮೂಲಕ ಆಗಮಿಸಿ ಭಕ್ತಿ ಸಮರ್ಪಿಸುತ್ತಾರೆ. ಕಾಡ್ಲೂರು ಸಂಸ್ಥಾನದ ಧರ್ಮದರ್ಶಿಗಳಾಗಿದ್ದ ದಿವಂಗತ ರಾಘವೇಂದ್ರರಾವ ದೇಸಾಯಿ ಕಾಡ್ಲೂರುರವರು ಹಾಕಿಕೊಟ್ಟ ಮಾರ್ಗದಲ್ಲಿ ಆವರ ಸುಪುತ್ರರು ಧರ್ಮ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸ್ಥಳಕ್ಕೆ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಯಮೀಂದ್ರತೀರ್ಥರು, ಶ್ರೀಸುಜಯೀಂದ್ರತೀರ್ಥರು ಶ್ರೀಸುಶಮೀಂದ್ರತೀರ್ಥರು, ಶ್ರೀಸುವಿದ್ಯೇಂದ್ರತೀರ್ಥರು ,ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರು , ಉತ್ತರಾಧಿಮಠಾಧೀಶರಾದ ಶ್ರೀಸತ್ಯಾತ್ಮತೀರ್ಥರು ,ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ್ವತೀರ್ಥ ಶ್ರೀಗಳು,ವಿಶ್ವಪ್ರಸನ್ನತೀರ್ಥರು, ಭಂಡಾರಕೇರಿ ಮಠಾಧೀಶರಾದ ಹಿರಿಯ ಶ್ರೀಪಾದಂಗಳವರಾದ ವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು , ಅದಮಾರು ಮಾಠಾಧೀಶರು , ಫಲಿಮಾರು ಮಠಾಧೀಶರು , ಕಣ್ವಮಠಾಧೀಶರು,ತಂಬಿಹಳ್ಳಿ ಮಾಧವತೀರ್ಥ ಮಠದ ಶ್ರೀಗಳು ಮಂತಾದ ಶ್ರೀಪಾದಂಗಳವರು ಆಗಮಿಸಿ ಗ್ರಾಮದ ಜನರನ್ನು ಹಾಗೂ ಕಾಡ್ಲೂರ ಸಂಸ್ಥಾನವನ್ನು ಅನುಗ್ರಹಿಸಿದ್ದಾರೆ .

ಪ್ರಶಾಂತವು ಪವಿತ್ರವು ಆದ ಈ ಸ್ಥಳದ ಆಭಿವೃದ್ದಿಗೆ ಕಾಡ್ಲೂರು ಸಂಸ್ಥಾನದ ದೇಸಾಯಿ ಕುಟುಂಬ ಕಂಕಣ ಬದ್ಧರಾಗಿದ್ದು ಈಗಾಗಲೆ ಇಲ್ಲಿ ಮಂಗಳ ಸಭಾ ಭವನವನ್ನು ನಿರ್ಮಿಸಿಲಾಗಿದ್ದು ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿವೆ .

          

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್