ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರಾಮಾಂತರ ಕ್ಷೇತ್ರದ ಸಮಗ್ರ ನೀರಾವರಿ - ಬಿ.ವೈ.ವಿಜಯೇಂದ್ರ

 


ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ರಾಮಾಂತರ ಕ್ಷೇತ್ರಕ್ಕೆ ಸಮಗ್ರ ನೀರಾವರಿ - ಬಿ.ವೈ.ವಿಜಯೇಂದ್ರ

ರಾಯಚೂರು,ಮಾ.20-  ಭಾರತೀಯ ಜನತಾ ಪಾರ್ಟಿ 2023ರ ವಿಧಾನಸಭೆ ಚುನಾವಣೆಯಲ್ಲಿ  ಅಧಿಕಾರಕ್ಕೆ ಬಂದರೆ ರಾಯಚೂರು ಗ್ರಾಮಾಂತರದ ಕ್ಷೇತ್ರದ ಸಮಗ್ರ ನೀರಾವರಿ ಮಾಡುವ ಗುರಿಯನ್ನು ಹೊಂದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಭರವಸೆಯನ್ನು ನೀಡಿದರು.

ಅವರಿಂದು ರಾಯಚೂರು ಗ್ರಾಮೀಣ ಕ್ಷೇತ್ರಕ  ಮಟಮಾರಿ ಗ್ರಾಮದಲ್ಲಿ ಎಸ್.ಸಿ ಮೋರ್ಚಾದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ತಮಟೆ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

  ಬಿಜೆಪಿ ಎಂದು ದಲಿತ ವಿರೋಧಿಯಲ್ಲ ಈ ಸಮುದಾಯಕ್ಕೆ ಅಧಿಕವಾಗಿ ಸ್ಥಾನಮಾನವನ್ನು ಒದಗಿಸಿದ್ದು ಬಿಜೆಪಿ ಮಾತ್ರ ಕಾಂಗ್ರೆಸ್ ಕೇವಲ ಮತಬ್ಯಾಂಕ್ ಆಗಿ ಸಮುದಾಯವನ್ನು ಬಳಸಿಕೊಂಡಿದೆ ಹೊರತು ಅಭಿವೃದ್ಧಿಯನ್ನೇ ಮಾಡದೆ ನಿರ್ಲಕ್ಷ್ಯವಹಿಸಿದೆ ಎಂದರು.  ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಪ್ರೀತಿಯನ್ನು ಹೊಂದಿದ್ದು ಅಪಾರ ಕಾಳಜಿಯನ್ನು ಹೊಂದಿದ್ದರು ಎಂದರು‌. 



ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಚಲುವಾದಿ ನಾರಾಯಣಸ್ವಾಮಿಯವರು ಕಾಂಗ್ರೆಸ್ ನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಅಸ್ಥಿತ್ವವೇ ಗ್ಯಾರಂಟಿ ಇಲ್ಲ. ಇನ್ನು ಜನಕ್ಕೇನು ಗ್ಯಾರಂಟಿ  ಕಾಡ್೯ ಕೊಡ್ತಾರೋ ಎಂದು ಲೇವಡಿ ಮಾಡಿದರು‌.

ಈ ವೇಳೆ ಮಾತನಾಡಿದ ತಿಪ್ಪರಾಜ್ ಹವಾಲ್ದಾರ್ ಅವರು ಕಳೆದ 2013 ರಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ಮಾಡಿದ್ದು. ಯಡಿಯೂರಪ್ಪನವರ ಆರ್ಶೀವಾದದಿಂದ ನೆರೆಗೆ ತುತ್ತಾಗಿದ್ದ ಗ್ರಾಮಗಳ  ಅಭಿವೃದ್ಧಿ ಸೇರಿದಂತೆ ಹಲವು ನೀರಾವರಿ ಮಾಡಿದ್ದನ್ನು ಸ್ಮರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಬಿಜೆಪಿ ಕಾರ್ಯಕರ್ತರು ಹೂ ಮಳೆ ಸುರಿಸಿ ಸ್ವಾಗತಿಸಿದರು. 


ಈ ಕಾರ್ಯಕ್ರಮದಲ್ಲಿ ಬಿ.ವೈ ವಿಜಯೇಂದ್ರನವರಿಗೆ , ಚಲುವಾದಿ ನಾರಾಯಣಸ್ವಾಮಿಯವರಿಗೆ  ಗ್ರಾಮಾಂತರ ಹಾಲುಮತ ಸಮುದಾಯದ ಮುಖಂಡರು ಕಂಬಳಿ ಹಾಕಿ ಗೌರವಿಸಿದರು. ಅಲ್ಲದೇ ಗ್ರಾಮಾಂತರ ವೀರಶೈವ , ಹೂಗಾರ್ ಸಮುದಾಯ ಮುಖಂಡರುಗಳು ಕೂಡ ವಿಜಯೇಂದ್ರಗೆ ವಿಶೇಷವಾಗಿ ಗೌರವಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಮಾನಂದ ಯಾದವ್, ಮಾಜಿ ವಿಧಾನ ಪರಿಷತ್ ಸದಸ್ಯರು, ಹಿರಿಯರಾದ ಎನ್.ಶಂಕ್ರಪ್ಪನವರು, ಮಾಜಿ ಶಾಸಕರಾದ ಗಂಗಾಧರ ನಾಯಕ, ಬಸವನಗೌಡ ಬಾಗ್ಯವಾಟ್, ರಾಜ್ಯ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ನರಸಿಂಹ ನಾಯಕ, ಜಿಲ್ಲಾ ಎಸ್.ಸಿ ಮೋರ್ಚಾ ಶರಣಬಸವ ಉಮಲೂಟಿ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ, ರಾಯಚೂರು ಗ್ರಾಮೀಣ ಕ್ಷೇತ್ರದ ಚುನಾವಣಾ ಉಸ್ತುವಾರಿ ರಾಜಕುಮಾರ್ ಪಾಟೀಲ್, ಎಸ್.ಸಿ ಮೋರ್ಚಾ ಮಂಡಲ ಅಧ್ಯಕ್ಷರಾದ ನವೀನ ಕುರ್ಡಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಚ್ಯುತ್ ರೆಡ್ಡಿ,  ಸತೀಶ್,  ಮಲ್ಲೇಶ ನಾಯಕ, ಜಿಲ್ಲಾ ಕೆಡಿಪಿ ಸದಸ್ಯರಾದ  ಮಲ್ಲಿಕಾರ್ಜುನ ಉಡಮಗಲ್, ಪಕ್ಷದ ಮುಖಂಡರಾದ ರಂಗಪ್ಪಗೌಡ ಹಂಚಿನಾಳ, ವಿಷ್ಣುವರ್ಧನ್ ರೆಡ್ಡಿ,  ವರಪ್ರಸಾದರೆಡ್ಡಿ,  ಆಂಜನೇಯ ಕಡಗೋಲು, ರವೀಂದ್ರ ಜಲ್ದಾರ್, ಶಶಿರಾಜ ಮಸ್ಕಿ, ಬಂಗಿ ನರಸರೆಡ್ಡಿ,  ತ್ರಿವಿಕ್ರಮ ಜೋಶಿ, ಬಂಡೇಶ ವಲ್ಕದಿನ್ನಿ, ಜಗದೀಶ್ ವಕೀಲರು,ನಾರಾಯಣರಾವ್ ಪುರತಿಪ್ಲಿ,  ರಾಘವ ಬೂರ್ದಿಪಾಡು,  ಶಿವಪ್ಪ ಯಾದವ್,  ವೀರನಗೌಡ ಮಟಮಾರಿ,  ಉರುಕುಂದಪ್ಪ ನಾಯಕ, ಜಂಡ್ ಮಲ್ಲೇಶ, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ