ಶೃತಿ ಸಾಹಿತ್ಯ ಮೇಳದಿಂದ ಏ.29 ರಂದು ವರಕವಿ ಶ್ರೀ ಶಾಮ ಸುಂದರ ದಾಸರ ಆರಾಧನಾ ಮಹೋತ್ಸವ- ಮುರಳಿಧರ ಕುಲಕರ್ಣಿ


ಶೃತಿ ಸಾಹಿತ್ಯ ಮೇಳದಿಂದ 29ರಂದು ವರಕವಿ ಶ್ರೀ ಶಾಮ ಸುಂದರ ದಾಸರ ಆರಾಧನಾ ಮಹೋತ್ಸವ -ಮುರಳಿಧರ ಕುಲಕರ್ಣಿ

ರಾಯಚೂರು,ಏ.28- ನಗರದ ಸಾಂಸ್ಕೃತಿಕ, ಸಾಹಿತಿಕ ,ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳ ರಾಯಚೂರು ವತಿಯಿಂದ ಏ. 29 ರಂದು ಸಂಜೆ 6 ಗಂಟೆಗೆ ಕರ್ನಾಟಕ ಸಂಘದಲ್ಲಿ ವರ ಕವಿಗಳು ದಾಸ ಶ್ರೇಷ್ಠರಾದ ಶ್ರೀ ಶಾಮಸುಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಯವರು ತಿಳಿಸಿದ್ದಾರೆ.

 ಈ ಕಾರ್ಯಕ್ರಮದಲ್ಲಿ ರಾಯಚೂರಿನ ದಾಸ ಸಾಹಿತ್ಯ ವಿದ್ವಾಂಸರು ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಜಯಲಕ್ಷ್ಮಿ ಮಂಗಳಮೂರ್ತಿಯವರು ರಚಿಸಿದ ಎರಡು ದಾಸ ಸಾಹಿತ್ಯ ಪುಸ್ತಕಗಳಾದ ಶ್ರೀ ಹರಿನಾಮಗಳ ಚಿಂತನೆ ಮತ್ತು ನಾರಾಯಣ ವರ್ಮ ಈ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

   ಈ ಕೃತಿಗಳ ಲೋಕಾರ್ಪಣೆಯನ್ನು ವೇದಮೂರ್ತಿ ಪಂಡಿತ್ ಶ್ರೀ ಶೇಷಾಚಾರ್ಯ ಗುಡೆಬಲ್ಲೂರು, ಪ್ರಸನ್ನ ಭೂ ವರಹ ವಿಠಲಾಂಕಿತರು, ಉಪನ್ಯಾಸಕರಾಗಿ ನಿವೃತ್ತ  ಪ್ರಾಧ್ಯಾಪಕರು ಕಲಬುರ್ಗಿ, ದಾಸ ಸಾಹಿತ್ಯ ವಿದ್ವಾಂಸರಾದ

ಶ್ರೀ ವ್ಯಾಸರಾಜ ಸಂತೆಕೆಲ್ಲೂರು,

ಮುಖ್ಯ ಅತಿಥಿಗಳಾಗಿ ಶ್ರೀ ಹನುಮಂತರಾವ್ ಕಲ್ಲೂರ್ಕರ್, ಅಧ್ಯಕ್ಷರು ಸಮೀರ ಸಂಸ್ಕೃತಿಕ ಸೇವಾ ಮಂಡಳಿ,ಇವರು ಗಳು ಆಗಮಿಸಲಿದ್ದಾರೆ.




    ಸಂದರ್ಭದಲ್ಲಿ ದಾಸ ಸಾಹಿತ್ಯದಲ್ಲಿ ಅಗಾಧ ಸೇವೆ ಸಲ್ಲಿಸಿದ ಸಾಧನೆಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಇದರಲ್ಲಿ ಸೇತು ಮಾಧವಕೋಟೆ, ಶ್ರೀ ಸಿರವಾಳ ರಾಘವೇಂದ್ರ ಆಚಾರ್ಯ, ಶ್ರೀ ಪವಮಾನಾಚಾರ ಕುರುಡಿ, ಶ್ರೀಮತಿ ತ್ರಿವೇಣಿ ಬಾಯಿ ಬನ್ನಿ ಗೋಳು, ಅಲ್ಕಾಬಾಯಿ ಹುಬ್ಬಳ್ಳಿ, ಶ್ರೀಮತಿ ಇಂದಿರಾ ಬಾಯಿ ಸಂಗಮ್, ಶ್ರೀಮತಿ ಮಾನಸ ಕುಲಕರಣಿ ಬೆಂಗಳೂರು ಇವರುಗಳಿಗೆ ಅಭಿನಂದಿಸಿ ಸನ್ಮಾನಿಸಲಾಗುವುದು.


 ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಾಸವಾಣಿ ಕಾರ್ಯಕ್ರಮವನ್ನು ಶ್ರೀ ಗುಂಡಾಚಾರ್ಯ ಹೊಳಗುಂದಿಯವರು ನಡೆಸಿಕೊಡಲಿದ್ದಾರೆ.

ಈ ದಾಸ ಸಾಹಿತ್ಯದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಕೋರಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ