ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಜಯ ಖಚಿತ: ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಸಕಲ ಪ್ರಯತ್ನ- ರವಿ ಬೋಸರಾಜು

 


ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಜಯ ಖಚಿತ:

ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಸಕಲ ಪ್ರಯತ್ನ- ರವಿ ಬೋಸರಾಜು

ರಾಯಚೂರು,ಏ.೨೪-ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಮೊಹಮ್ಮದ್ ಶಾಲಂ ಖಚಿತವಾಗಿ ಗೆಲ್ಲಲಿದ್ದು ತಾವು ಚುನಾವಣೆ ಕಣದಿಂದ ಹಿಂದಕ್ಕೆ ಸರಿದಿದ್ದು ನಾಮ ಪತ್ರ ವಾಪಸ್ ಪಡೆದಿದ್ದೇನೆಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಹೇಳಿದರು.

ಅವರಿಂದು ನಗರದ ಸಹಾಯಕ ಆಯುಕ್ತರು ಮತ್ತು ಚುನಾವಣಾಧಿಕಾರಿ ರಜನಿಕಾಂತರವರ ಕಚೇರಿಯಲ್ಲಿ ನಾಮಪತ್ರ ಹಿಂಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಗರಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಮೊಹಮ್ಮದ ಶಾಲಂ ರವರಿಗೆ ಪಕ್ಷದ ವರಿಷ್ಟರು ಟಿಕೆಟ್ ನೀಡಿದ್ದು ಅದಕ್ಕೆ ತಾವೆಲ್ಲರೂ ಬದ್ಧರಾಗಿದ್ದು ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷ ಸೂಚಿಸಿದ ಅಭ್ಯರ್ಥಿಯ ಗೆಲುವಿಗೆ ಸಕಲ ರೀತಿಯಲ್ಲಿ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು.


ಈ ಬಾರಿ ನಗರದ ಮತದಾರರು ಬದಲಾವಣೆ ಬಯಸಿದ್ದು ಕಾಂಗ್ರೆಸ್ ಅಭ್ಯರ್ಥಿ ಹೋದ ಕಡೆಗಳೆಲ್ಲ ಅಭೂತ ಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಬೆಂಬಲ ವ್ಯಕ್ತಪಡಿಸುತ್ತಿದ್ದು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನಿಶ್ಚಿತವೆಂದ ಅವರು ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ದೊರೆಯಲಿಲ್ಲವೆಂದು ಕೆಲವರು ಅಸಮಾಧಾನಗೊಂಡು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ಅವರನ್ನು ಮನವೊಲಿಸಿ ನಾಮಪತ್ರ ಹಿಂಪಡೆಯಲು ಕೋರಾಲಾಗುತ್ತದೆ ಅವರು ಪಕ್ಷದ ಅಧಿಕೃತ ಅಭ್ಯಿರ್ಥಿಗಳ ಗೆಲುವಿಗೆ ಶ್ರಮಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಬಷೀರುದ್ದೀನ್, ಸಾಜಿದ ಸಮೀರ್, ಎನ್.ಶ್ರೀನಿವಾಸ ರೆಡ್ಡಿ, ಶ್ರೀಕಾಂತ್ ವಕೀಲ, ರುದ್ರಪ್ಪ ಅಂಗಡಿ, ತಿಮ್ಮಾರೆಡ್ಡಿ ಇತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ