ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿ-ಮೇಟಿ

 



ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿ-ಮೇಟಿ

ರಾಯಚೂರು,ಏ.೨೭-ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸದ್ಯ ಖಾಲಿ ಇದ್ದು ಪಕ್ಷಕ್ಕಾಗಿ ದಶಕಗಳಿಂದ ಕಾರ್ಯಕರ್ತನಾಗಿ ದುಡಿಯುತ್ತಿರುವ ನನಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಒಂದು ಬಾರಿ ಅವಕಾಶ ನೀಡಬೇಕೆಂದು ಲಿಂಗಸ್ಗೂರಿನ ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಮೇಟಿ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ಅನೇಕ ದಶಕಗಳಿಂದ ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿದಿದ್ದೇನೆ ವಿವಿಧ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿಭಾಯಿಸಿದ್ದೇನೆ ಕಳೆದ ಆರು ವರ್ಷಗಳಿಂದ ಅಧ್ಯಕ್ಷ ಸ್ಥಾನಕ್ಕೆ ಅಕಾಂಕ್ಷಿಯಾಗಿದ್ದೇನೆ ಈ ಹಿಂದೆ ಎಐಸಿಸಿ ಮಟ್ಟದಲ್ಲಿ ಅನುಮೋದನಗೊಂಡರು ಜಿಲ್ಲೆಯ ಕೆಲ ಮುಖಂಡರು ಅದಕ್ಕೆ ತಡೆ ಹಾಕಿಸಿದರು ಎಂದು ದೂರಿದ ಅವರು ಬೋಸರಾಜು ಮತ್ತು ಬಿ.ವಿ ನಾಯಕರು ತಮಗೆ ಅಧ್ಯಕ್ಷ ಸ್ಥಾನ ಸಿಗದಂತೆ ಮಾಡಿದರು ಎಂದು ಆರೋಪಿಸಿದರು.

ನನಗೆ ಪಕ್ಷದಿಂದ ಎಷ್ಟೆ ನೋವಾದರು ನಾವು ಪಕ್ಷದ ವಿರುದ್ದ ಮಾತಾಡಿಲ್ಲ ಕೆಲವರು ನನಗೆ ಪ್ರಚೋದನೆ ಮಾಡಿದರು ನನ್ನನ್ನು ಪಕ್ಷ ಬಿಡುವಂತೆ ಮಾಡಿದರು ನಾನು ಪಕ್ಷದಲ್ಲೆ ಉಳಿದಿದ್ದೇನೆ ಆದ್ದರಿಂದ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನೆ ಖರ್ಗೆಯವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ರವರಿಗೆ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ನನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ ಎಂದರು.

ಪಕ್ಷಕ್ಕೆ ಸೇರ್ಪಡೆಯಾಗದವರನ್ನು ಅಧ್ಯಕ್ಷರನ್ನಾಗಿಸುವ ಹುನ್ನಾರ ನಡೆದಿದ್ದು ಅದಕ್ಕೆ ಆಸ್ಪದೆ ನೀಡದೆ ನಮಗೆ ಅವಕಾಶ ನೀಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಅಮರೇಶ, ರಾಜಶೇಖರ್, ಪ್ರಮೋದ ಕುಲಕರ್ಣೀ,ಬಾಬಾ, ಯಮನಪ್ಪ, ಶಿವಪ್ಪ ನಾಯಕ, ಮೌಲ ಸಾಬ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ