ವಿವಿಧ ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಮತಯಾಚನೆ
ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಮತಯಾಚನೆ ರಾಯಚೂರು,ಏ.28- ವಾರ್ಡ್ ನಂಬರ್ 24 ಮತ್ತು 25ರಲ್ಲಿ ಪಕ್ಷೇತರ ಅಭ್ಯರ್ಥಿ ಮುಜೀಬುದ್ದೀನ್ ಅವರು ಮತಯಾಚನೆ ಮಾಡಿದರು. ಇಂದು ನಗರದ ವಾರ್ಡ್ 24ರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರವೀಂದ್ರ ರೆಡ್ಡಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ನಂತರ ಪ್ರಚಾರ ಆರಂಭಿಸಿದರು. ಡೊಳ್ಳಿನ ಮೆರವಣಿಗೆ ಮೂಲಕ ಮನೆ ಮನೆಗೆ ಭೇಟಿ ನೀಡಿದ ಮುಜೀಬುದ್ದಿನ್ ಅವರು ಗ್ಯಾಸ್ ಸಿಲೆಂಡರ್ ಗುರುತಿಗೆ ಮತ ನೀಡುವಂತೆ ಮನವಿ ಮಾಡಿದರು.
ನೂರಾರು ನಿವಾಸಿಗಳು ಮುಜೀಬುದ್ದಿನ್ ರ ಪಕ್ಷೇತರ ಚಿಹ್ನೆಗೆ ಬೆಂಬಲಿಸುವುದಾಗಿ ಭರವಸೆ ನೀಡಿದರು. ನಂತರ ವಾರ್ಡ್ 25ರಲ್ಲಿ ಪ್ರಚಾರ ಮಾಡುವ ಪೂರ್ವದಲ್ಲಿ ಸಿಟಿ ಟಾಕೀಸ್ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ನೂರಾರು ಯುವಕರು ಪ್ರಚಾರದಲ್ಲಿ ಭಾಗವಹಿಸಿದ್ದರು.
Comments
Post a Comment