ಶಾಸಕ ದದ್ದಲ್ ಸಮ್ಮುಖದಲ್ಲಿ ಡಾ. ಶಾರದಾ ಹುಲಿ ನಾಯಕ ಕಾಂಗ್ರೆಸ್ ಸೇರ್ಪಡೆ
ಶಾಸಕ ದದ್ದಲ್ ಸಮ್ಮುಖದಲ್ಲಿ ಡಾ. ಶಾರದಾ ಹುಲಿ ನಾಯಕ ಕಾಂಗ್ರೆಸ್ ಸೇರ್ಪಡೆ
ರಾಯಚೂರು,ಏ.26- ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸನಗೌಡ ದದ್ದಲ್ ರವರ ಸಮ್ಮುಖದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು ಡಾ. ಶಾರದ ಹುಲಿ ನಾಯಕ ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಹಾಗೂ ಶಾಸಕರ ಸರಳತೆ, ಮತ್ತು ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಕೈ ಬಲಪಡಿಸಿದಂತಾಗಿದೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ವಕೀಲ, ರಂಗನಾಥ ತಿಮ್ಮಪ್ಪ, ಉದಯ ಕುಮಾರ ಆಲ್ಕೂರ, ನರಸಿಂಹ, ಭೀವೇಶ,ವಿರೇಶ,ರೋಸಯ್ಯ, ಪಕ್ಷದ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಹಿರಿಯ ಮುಖಂಡರುಗಳು ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು.
Comments
Post a Comment