ಅಲೆಮಾರಿ ಮತ್ತು ಬುಡುಕಟ್ಟು ಸಮುದಾಯಗಳಿಗೆ ಮತದಾನ ಜಾಗೃತಿಗಾಗಿ ಕಲ್ಯಾಣ ಕರ್ನಾಟಕ ಸಂಚಾರ - ಸಿ.ಎಸ್. ದ್ವಾರಕಾನಾಥ್
ಅಲೆಮಾರಿ ಮತ್ತು ಬುಡುಕಟ್ಟು ಸಮುದಾಯಗಳಿಗೆ ಮತದಾನ ಜಾಗೃತಿಗಾಗಿ ಕಲ್ಯಾಣ ಕರ್ನಾಟಕ ಸಂಚಾರ - ಸಿ.ಎಸ್. ದ್ವಾರಕಾನಾಥ್
ರಾಯಚೂರು, ಏ.೨೮- ಕಲ್ಯಾಣ ಕರ್ನಾಟಕದಲ್ಲಿ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಇಲ್ಲ. ಅವರಿಗೆ ಪ್ರಾಥಮಿಕ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ ಮತದಾನ ಜಾಗೃತಿ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚಾರ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಮತಿ ಅಧ್ಯಕ್ಷರು ಕಾಗೂ ಕೆಪಿಸಿಸಿ ಮುಖ್ಯ ವಕ್ತಾರ ಸಿಎಸ್ ದ್ವಾರಕಾನಾಥ್ ಅವರು ತಿಳಿಸಿದರು. ಅವರಿಂದು ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಗಣತಿ ವರದಿ ಬಾರದೇ ಇರುವುದರಿಂದ ನಿಖರವಾಗಿ ಮಾಹಿತಿ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಸುಮಾರು ೭೦ ಸಾವಿರ ಜನಸಂಖ್ಯೆ ಇದ್ದಾರೆ. ರಾಜ್ಯದಲ್ಲಿ ೫ ರಿಂದ ೬ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಾರೆ ಎಂದರು. ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ವಂಚಿತರಾಗಿ ಹಾಗೂ ರಾಜಕೀಯ ಪರಿಕಲ್ಪನೆ ಇಲ್ಲದ ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಬಿಜೆಪಿ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಲೆಮಾರಿ ಕೋಶ ಸ್ಥಾಪಿಸಿ ರೂ. ೩೦೦ ಕೋಟಿ ಅನುದಾನ ನೀಡಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಅಲ್ಲದೇ ಒಂದೇ ಒಂದು ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಅಲ್ಲದೇ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದ ಮಕ್ಕಳಿಗೆ ಹಿಂದೆ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ನೇರ ಪ್ರವೇಶ ಕಲ್ಪಿಸಲಾಗಿತ್ತು ಆದರೆ ಬಿಜೆಪಿ ಸರ್ಕಾರ ಪ್ರವೇಶ ಪರೀಕ್ಷೆಗಳನ್ನು ಅಳವಡಿಸಿ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಲಾಗುತ್ತಿದೆ. ಈ ಭಾಗದ ಚಿತ್ತವಾಡಗಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಸುಡುಗಾಡ ಸಿದ್ದರ ಸಣ್ಣ ಪುಟ್ಟ ಬಟ್ಟೆ ವ್ಯಾಪಾರಿ ಮಹಿಳೆಯರಿಗೆ ಪೋಲಿಸರು ವಿನಾ: ಕಾರಣ ಕಿರುಕುಳ ನೀಡುತ್ತಿರುವುದಾಗಿ ತಿಳಿದು ಬಂದಿದೆ. ಅಲೆಮಾರಿ ಕೋಶಕ್ಕೆ ಆರ್ ಎಸ್ ಎಸ್ ಮೂಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದರಿಂದ ಈ ಜನಾಂಗದ ಅಭಿವೃದ್ಧಿ ಸಾಧ್ಯವೇ? ಅಲ್ಲದೇ ಅಲೆಮಾರಿ ಸಮುದಾಯಗಳಿಗೆ ಸರ್ಕಾರದ ಯಾವುದೇ ಸೌಕರ್ಯವನ್ನು ಕಲ್ಪಿಸದೇ ಸುಮಾರು ೮೯ ಜಾತಿಗಳಿಗೆ ಕೇವಲ ಶೇ.೧ ರಷ್ಟು ಮೀಸಲಾತಿ ನೀಡಿ ರಾಜಕೀಯವಾಗಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅನ್ಯಾಯ ಮಾಡಲಾಗುತ್ತಿದೆ. ಇದೇ ಅನ್ಯಾಯವನ್ನು ಮತ್ತೆ ಮಾಡುವಲ್ಲಿ ರಾಜಕೀಯ ಪ್ರಜ್ಞೆ ಇಲ್ಲದೆ ಸಮುದಾಯಗಳಿಗೆ ಹಣದ ಆಮೀಶ ತೋರಿಸಿ ಮತ ಕೇಳಲು ಮುಂದಾಗಿರುವ ಬಿಜೆಪಿ ಪಕ್ಷದ ಅನ್ಯಾವನ್ನು ಸಮುದಾಯಗಳಿಗೆ ಮನವರಿಕೆ ಮಾಡಿ ಬಿಜೆಪಿ ಪಕ್ಷ ಮತಹಾಕದೇ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಜಾಗೃತ ಮೂಡಿಸುವ ನಿಟ್ಟಿನಲ್ಲಿ ತುಮಕೂರು, ಚಿತ್ರದುರ್ಗ, ಸೇರಿದಂತೆ ಕಲ್ಯಾಣ ಕರ್ನಾಟಕದ ಕೊಪ್ಪಳ, ಬಾಗಲಕೋಟೆ, ವಿಜಯಪುರ , ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾವಡಿ ಲೋಕೇಶ, ಸಣ್ಣ ಮಾರೆಪ್ಪ ಉಪಾಧ್ಯಕ್ಷರು , ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಚಮನ್ ಪರಸಾಲ, ಶಿವರಾಜ ರುದ್ರಾಕ್ಷಿ, ಬಿ.ಎಲ್ ಹನುಮಂತಪ್ಪ , ಜಿಲ್ಲಾ ಅಧ್ಯಕ್ಷರಾದ ನಾಗರಾಜ, ರಂಗಮುನಿ ದಾಸ , ಕಾಂಗ್ರೆಸ್ ಮುಖಂಡರಾದ ರುದ್ರಪ್ಪ ಅಂಗಡಿ ಮತ್ತು ಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Comments
Post a Comment