ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಯಕ್ಲಾಸಪೂರ, ರಾಮು ಗಿಲೇರಿ ಕಾಂಗ್ರೆಸ್ ಸರ‍್ಪಡೆ: ಕಾಂಗ್ರೆಸ್ ಪಕ್ಷ ಸಂಪರ‍್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ -ಎನ್.ಎಸ್.ಬೋಸರಾಜು
ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಯಕ್ಲಾಸಪೂರ, ರಾಮು ಗಿಲೇರಿ ಕಾಂಗ್ರೆಸ್ ಸರ‍್ಪಡೆ:
ಕಾಂಗ್ರೆಸ್ ಪಕ್ಷ ಸಂಪರ‍್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ -ಎನ್.ಎಸ್.ಬೋಸರಾಜು
ರಾಯಚೂರು, ಏ.೨೩-ಸುಮಾರು ೧೦ ರ‍್ಷಗಳಿಂದ ನಗರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ಆಗಿಲ್ಲ, ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ, ಈ ಬಾರಿ ೪೦% ಭ್ರಷ್ಟಾಚಾರದ ರ‍್ಕಾರವನ್ನು ಕಿತ್ತೊಗೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಯಚೂರಿನ ಅಭಿವೃದ್ದಿ ರ‍್ವ ಪ್ರಾರಂಭವಾಗಲಿದೆ ಎಂದು ಎಐಸಿಸಿ ಕರ‍್ಯರ‍್ಶಿ ಎನ್.ಎಸ್.ಬೋಸರಾಜು ಹೇಳಿದರು.
ನಗರದ ನಿಜಲಿಂಗಪ್ಪ ಕಾಲೋನಿ ಬಡಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರ‍್ಪಡೆ ಕರ‍್ಯಕ್ರಮದಲ್ಲಿ ನೂರಾರು ಕರ‍್ಯರ‍್ತರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದರು.
ಕಾಂಗ್ರೆಸ್ ಸಿದ್ಧಾಂತ ಹಾಗೂ ಎಐಸಿಸಿ ಕರ‍್ಯರ‍್ಶಿ ಎನ್.ಎಸ್.ಬೋಸರಾಜು ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಅಭ್ರ‍್ಥಿಯಾದ ಮೊಹಮ್ಮದ್ ಶಾಲಂ ಅವರ ಸರಳತೆ ಮೆಚ್ಚಿ ವರ‍್ಡ್ ನಂ. ೧೪, ೩೪ರ ಬಿಜೆಪಿಯ ಮಾಜಿ ನಗರಸಭೆ ಸದಸ್ಯರುಗಳಾದ ರಾಮು ಗಿಲೇರಿ ಹಾಗೂ ಯಕ್ಲಾಸಪೂರ ಆಂಜನೇಯ ಅವರು ನೂರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸರ‍್ಪಡೆಯಾದರು.
ನಂತರ ಸರ‍್ಪಡೆಯಾದ ಬಿಜೆಪಿ ಮಾಜಿ ನಗರಸಭೆ ಸದಸ್ಯ ಆಂಜನೇಯ ಮಾತನಾಡಿ, ರಾಯಚೂರು ನಗರ ಅಭಿವೃದ್ಧಿಯಾಗಬೇಕಾದರೆ ಶಿವರಾಜ ಪಾಟೀಲ್ ಹಟಾವೋ, ರಾಯಚೂರು ಬಚಾವೋ ಘೋಷಣೆ ಮೂಲಕ ಶಿವರಾಜ ಪಾಟೀಲ್ ಜನರಿಗೆ ನೀಡುವ ನೋಟನ್ನು ತೆಗೆದುಕೊಂಡು ಸರಳ ಸಜ್ಜನಿಕೆಯ ಕಾಂಗ್ರೆಸ್ ಅಭ್ರ‍್ಥಿಯಾದ ಮೊಹಮ್ಮದ್ ಶಾಲಂ ಅವರಿಗೆ ಮತ ಹಾಕುವ ಮೂಲಕ ಗೆಲ್ಲಿಸಿ, ಶಿವರಾಜ ಪಾಟೀಲ್‌ರಿಗೆ ತಕ್ಕ ಪಾಠ ಕಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
Comments
Post a Comment