ಮೋದಿಯವರು ಪ್ರವಾಹ ಸಂದರ್ಭದಲ್ಲಿ ಏಕೆ ಕರ್ನಾಟಕಕ್ಕೆ ಬರಲಿಲ್ಲ- ಸಿದ್ದರಾಮಯ್ಯ

 


ಮೋದಿಯವರು ಪ್ರವಾಹ ಸಂದರ್ಭದಲ್ಲಿ ಏಕೆ ಕರ್ನಾಟಕಕ್ಕೆ ಬರಲಿಲ್ಲ- ಸಿದ್ದರಾಮಯ್ಯ

ರಾಯಚೂರು,ಏ.೨೮-ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹ ಬಂದಾಗ ಕರ್ನಾಟಕಕ್ಕೆ ಏಕೆ ಬರಲಿಲ್ಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜ್ಯದ ಜನರು ಅವರಿಗೆ ನೆನಪಿಗೆ ಬರುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರಿಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಮೋದಿಯವರು ಮೇಲಿಂದ ಮೇಲೆ ರಾಜ್ಯಕ್ಕೆ ಬರುತ್ತಿದ್ದಾರೆ ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತತ್ತರಿಸಿದಾಗ ಅವರಿಗೆ ಸಾಂತ್ವಾನ ಹೇಳಲು ಏಕೆ ಬರಲಿಲ್ಲವೆಂದು ಪ್ರಶ್ನಿಸಿದ ಅವರು  ಸಾಮಾನ್ಯ ಜನರು , ರೈತರು ಸಂಕಷ್ಟಕ್ಕೆ ಸಿಲುಕಿದಾಗ ಬಾರದೆ ಈಗ ಚುನಾವಣೆ ಕಾರಣದಿಂದ ಬರುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಗ್ಯಾರಂಟಿ ನೀಡಿರುವ ಗೃಹ ಲಕ್ಷಿö್ಮÃ, ಉಚಿತ ವಿದ್ಯುತ್, ನಿರುದ್ಯೋಗ ಭತ್ಯೆ ಮುಂತಾದ ಭರವಸೆಗಳನ್ನು ಲೇವಡಿ ಮಾಡಿದ ಪ್ರಧಾನಿಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇಲ್ಲಿನ ಜನರ ಮೇಲೆ ಸಾಲದ ಭಾರ ಹೊರಿಸಿದ್ದಾರೆ ಎಂದರು.

ಬಿಜೆಪಿ ಪಕ್ಷದವರು ಕೇವಲ ಭರವಸೆಗಳನ್ನು ನೀಡುತ್ತಾರೆ ಅವುಗಳನ್ನು ಈಡೇರಿಸುವುದಿಲ್ಲ ನಾನು ಸಿಎಂ ಆಗಿದ್ದಾಗೆ ನೀಡಿದ ಎಲ್ಲ ಭರವಸೆಗಖನ್ನು ಆದ್ಯತೆ ಮೇರೆಗೆ ಈಡೇರಿಸಿದ್ದೇನೆ ಎಂದ ಅವರು ಬೊಮ್ಮಾಯಿಯವರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದರು.


ಮೀಸಲಾತಿ ಹೆಚ್ಚಳ ಕೇವಲ ಕಣ್ಣೊರೆಸುವ ತಂತ್ರ ಅದಕ್ಕೆ ಯಾರು ಮರಳಾಗಬಾರದೆಂದ ಅವರು ಜಾತಿ ಜಾತಿಗಳ ನಡುವೆ ಸಂಘರ್ಷ ಏರ್ಪಡಿಸುವ ಬಿಜೆಪಿ ಅದರಲ್ಲಿ ರಾಜಕೀಯ ಬೇಳೆ ಬೇಯಿಸಕೊಳ್ಳುತ್ತದೆ ಸಿದ್ದರಾಮನ ಹುಂಡಿಯಲ್ಲಿ ನಡೆದ ಗದ್ದಲದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾತ್ರವಿಲ್ಲ ಬಿಜೆಪಿಯವರೆ ಅದನ್ನು ಮಾಡಿಸಿದ್ದಾರೆ ಚುನಾವಣೆಯಲ್ಲಿ ಯಾರಾದರೂ ಎಲ್ಲಿಯಾದರೂ ಪ್ರಚಾರ ಮಾಡಬಹುದು ಬಿಜೆಪಿ ರಾಜಕೀಯವಾಗಿ ತಮಗೆ ಅನುಕೂಲವಾಗಲೆಂದು  ಹೀಗೆ ಮಾಡಿದೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಬ್ರಷ್ಟಾಚಾರ ಮಿತಿ ಮೀರಿದೆ ಶೇ.೪೦ ಕಮೀಷನ್ ಆರೋಪ ಮಾಡಿದ್ದು ನಾವಲ್ಲ ಬದಲಾಗಿ ಕೆಂಪಣ್ಣನವರು ಪ್ರದಾನಿಗೆ ಪತ್ರ ಬರೆದಿದ್ದರು ಆದರೂ ಅದಕ್ಕೆ ಯಾವ ಕ್ರಮನು ಆಗಲಿಲ್ಲವೆಂದರು.

ಈ ಬಾರಿ ಚುನಾವಣೆಯಲ್ಲಿ ನಾವು ೧೩೦ ಕ್ಕೂ ಹೆಚ್ಚು ಸೀಟು ಪಡೆದು ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆಂದ ಅವರು ಎಲ್ಲಡೆ ಕಾಂಗ್ರೆಸ್ ಪರ ಅಲೆಯಿದ್ದು ನಮ್ಮ ಅಭ್ಯರ್ಥೀಗಳಿಗೆ ಮತದಾರರು ಆಶೀರ್ವದಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಪ್ರಕಾಶ ರಾಥೋಡ, ಬಸನಗೌಡ ದದ್ದಲ, ಮೊಹಮ್ಮದ ಶಾಲಂ, ಕೆ.ಶಾಂತಪ್ಪ, ಜಿ.ಬಸವರಾಜ ರೆಡ್ಡಿ, ನರಸಿಂಹಲು ಮಾಡಗಿರಿ ಸೇರಿದಂತೆ ಅನೇಕರಿದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ