ನಗರ ಕ್ಷೇತ್ರ ತಿರಸ್ಕೃತ ನಾಮಪತ್ರಗಳ ಸ್ವೀಕೃತಿ : ಚುನಾವಣಾಧಿಕಾರಿ ರಜನಿಕಾಂತ್ ವಿರುದ್ಧ ದೂರು - ವಿರುಪಾಕ್ಷಿ


 ನಗರ ಕ್ಷೇತ್ರ ತಿರಸ್ಕೃತ ನಾಮಪತ್ರಗಳ  ಸ್ವೀಕೃತಿ :  

ಚುನಾವಣಾಧಿಕಾರಿ ರಜನಿಕಾಂತ್ ವಿರುದ್ಧ ದೂರು - ವಿರುಪಾಕ್ಷಿ

ರಾಯಚೂರು,ಏ.೨೪-ತಿರಸ್ಕೃತಗೊಂಡ ನಾಮಪತ್ರಗಳನ್ನು ಏಕಾಏಕಿ ಸ್ವೀಕೃತಿ ಮಾಡಿರುವ ಸಹಾಯಕ ಆಯುಕ್ತ ಮತ್ತು ಚುನಾವಣಾಧಿಕಾರಿ ರಜನಿಕಾಂತ್ ಚೌಹಾಣ ವಿರುದ್ಧ ಕೇಂದ್ರ ಮತ್ತು ರಾಜ್ಯ ಚುನಾವಣಾ ಅಯೋಗಕ್ಕೆ ದೂರು ನೀಡಲಾಗುತ್ತದೆ ಮತ್ತು ಹೈಕೋರ್ಟ್ನಲ್ಲಿ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಧಾನಸಭೆ ಚುನಾವಣೆ ಅಂಗವಾಗಿ ನಗರಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ನಂತರ ನಾಮಪತ್ರ ಪರಿಶೀಲನೆ ಸಭೆಯಲ್ಲಿ ತಿರಸ್ಕೃತಗೊಂಡ ರಾಮನಗೌಡ ಸೇರಿದಂತೆ ಮೂರು ನಾಮಪತ್ರಗಳನ್ನು  ಮರು ಸ್ವೀಕೃತಿ ಮಾಡಿಕೊಳ್ಳಲಾಗಿದೆ ಇದೆ ವೇಳೆ ಸೈಯದ ಯಾಸೀನ್, ಬಷೀರುದ್ದೀನ್ ಮತ್ತಿತರರ ನಾಮಪತ್ರಗಳನ್ನು ಅಪೂರ್ಣ ಮಾಹಿತಿ ಮತ್ತು ದಾಖಲೆಗಳ ಕೊರತೆ ಕಾರಣ ನೀಡಿ ತಿರಸ್ಕಾರ ಮಾಡಲಾಗಿದ್ದು ಚುನಾವಣಾಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದು ಇದರಲ್ಲಿ ಆಕ್ರಮ ನಡೆದಿದೆ ಎಂದು ದೂರಿದರು.


ರಜನಿಕಾಂತ್ ರವರು ಸಹಾಯಕ ಆಯುಕ್ತರಾಗಿ ಈ ಹಿಂದೆ ಅನೇಕ ಅರ್ ಅರ್ ಟಿ ಪ್ರಕರಣಗಳಲ್ಲಿ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಪ್ರಕರಣ ಇತ್ಯರ್ಥ ಮಾಡಿದ್ದಾರೆಂದು ವಕೀಲರ ಸಂಘದಿAದ ಜಿಲ್ಲಾಧಿಕಾರಿಗÀಳಿಗೆ ದೂರು ನೀಡಲಾಗಿತ್ತು ಅದರಂತೆ ಇಲ್ಲಿಯೂ ಅವರು ಅದೆ ಧೋರಣೆ ಅನುಸರಿಸುತ್ತಿದ್ದು ಅವರನ್ನು ಈ ಕೂಡಲೆ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಅಭ್ಯರ್ಥಿ ಈ.ವಿನಯ್ ಕುಮಾರ್ ಮಾತನಾಡಿ ನಾನು ಎರೆಡು ಪ್ರತಿ ನಾಮಪತ್ರ ಸಲ್ಲಿಸಿದ್ದೆ ಅದರಲ್ಲಿ ಒಂದನ್ನು ಸ್ವೀಕೃತಿ ಮಾಡಲಾಗಿದೆ ಮತ್ತೊಂದನ್ನು ನನಗೆ ನೋಟೀಸ್  ನೀಡದೆ ತಿರಸ್ಕಾರ ಮಾಡಿದ್ದಾರೆ ಇದರಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತದೆ ಎಂದರು.

ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸದೆ ಪಕ್ಷಪಾತವಾಗಿ ನಾಮಪತ್ರ ತಿರಸ್ಕಾರ ಮಾಡಲಾಗುತ್ತಿದೆ ಕೆಲ ಸಣ್ಣ ಪುಟ್ಟ ದೋಷಗಳಿರುವ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಮತ್ತೊಂದೆಡೆ ದೋಷ ಪೂರಿತ ನಾಮಪತ್ರಗಳನ್ನು ಮೊದಲು ತಿರಸ್ಕಾರ ಮಾಡಿ ನಂತರ ಅವುಗಳನ್ನು ಪುರಸ್ಕಾರ ಮಾಡಲಾಗಿದೆ ಎಂದು ದೂರಿದ ಅವರು ಈ ಕುರಿತು ನಮ್ಮ ಪಕ್ಷದಿಂದ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದರು.

ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಎನ್.ಶಿವಶಂಕರ ಮಾತನಾಡಿ ಚುನಾವಣಾ ನಾಮಪತ್ರ ಸ್ವೀಕೃತಿ ಕಾಯ್ದೆಯನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಸ್ವೀಕೃತಿ ಮತ್ತು ತಿರಸ್ಕಾರ ಮಾಡಲಾಗಿದೆ ಚುನಾವಣಾಧಿಕಾರಿ ರಜನಿಕಾಂತ್ ಅಕ್ಷಮ್ಯ ಮಾಡಿದ್ದು ಅವರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಯೂಸೂಫ್ ಖಾನ್, ಗಾಣಧಾಳ ಲಕ್ಷಿö್ಮÃಪತಿ, ವಿಶ್ವನಾಥ ಪಟ್ಟಿ, ತಿಮ್ಮಾರೆಡ್ಡಿ ಇತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್