ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ - ಸಿದ್ಧರಾಮಯ್ಯ

 


ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ - ಸಿದ್ಧರಾಮಯ್ಯ


ರಾಯಚೂರು,ಏ.28- ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಬರುವ ಹುಣಸಿಹಾಳ ಹುಡಾ ಗ್ರಾಮದಲ್ಲಿ   ಆಯೋಜಿಸಲಾಗಿದ್ದ  ರಾಯಚೂರು ಗ್ರಾಮೀಣ ಮತಕ್ಷೇತ್ರದ ಬೃಹತ್ ಸಮಾವೇಶ ಕಾರ್ಯಕ್ರಮವನ್ನು ಉದ್ದೇಶಿಸಿ  ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ   ಸಿದ್ದರಾಮಯ್ಯ ರುವರು ಮಾತನಾಡಿ 

ರಾಯಚೂರು ಗ್ರಾಮೀಣ ಕ್ಷೇತ್ರದದಲ್ಲಿ  ಬಸನಗೌಡ ದದ್ದಲ್ ರವರು ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು *ಕ್ರಮ ಸಂಖ್ಯೆ 3 ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಬಸನಗೌಡ ದದ್ದಲ್* ರವರಿಗೆ ನೀಡಿ.

ಬಸನಗೌಡ ಗದ್ದಲ್ ಅವರಿಗೆ ಹಾಕೋ ಪ್ರತಿ ಮತವು ನನಗೆ ಹಾಕಿದಂತೆ ಎಂದರು.


ರಾಜ್ಯದಲ್ಲಿ ಜನವಿರೋಧಿ ಬಿಜೆಪಿ ಸರ್ಕಾರ ಜನಪರ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಬಿಜೆಪಿ ಪಕ್ಷ ಸರ್ಕಾರ ಜನ ಆಶೀರ್ವಾದ ಪಡೆದ ಸರ್ಕಾರವಲ್ಲ ಹಿಂಬಾಗಿಲಿನಿಂದ ಬಂದು ಅಧಿಕಾರಕ್ಕೆ ಬಂದಿದ್ದಾರೆ.



ಸನ್ಮಾನ್ಯ ಪ್ರಧಾನಿ ಮೋದಿ ಜಿ ಅವರು ಹೇಳುತ್ತಾರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಆದರೆ ಅವರ ಬಿಜೆಪಿಯವರು ಎಷ್ಟು ಜನ ಮುಸ್ಲಿಮರಿಗೆ ಮತ್ತು ಕೃಷಿಯನರಿಗೆ ಒಂದಾದರೂ ಟಿಕೆಟ್ ನೀಡಿದ್ದಾರೆ ಕ್ರಿಶ್ಚಿಯನರು ಮತ್ತು ಮುಸ್ಲಿಮರನ್ನು ಹೊರಗಿಟ್ಟು ಸಬ್ಕ ವಿಕಾಸ್ ಅಂದರೆ ಹೇಗೆ ಇದೆ ದ್ವೇಷದ ರಾಜಕಾರಣ ಕಾಂಗ್ರೆಸ್ ಪಕ್ಷ ದ್ವೇಷದ ರಾಜಕಾರಣ ಮಾಡೋದಿಲ್ಲ ಯಾವುದಾದರೂ ರಾಜಕೀಯ ಪಕ್ಷ ಸರ್ವಧರ್ಮಗಳನ್ನು ಒಟ್ಟಿಗೆ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ.

ಹೋಗ್ಲಿ ಬಿಜೆಪಿ ಪಕ್ಷ ಬಡವರ ಪರವಾಗಿ ಇದೆಯಾ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಡವರಿಗೆ ಚೂರು ಇಲ್ಲದವರಿಗೆ 15 ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದೆ ಈಗ ಈ ಸರ್ಕಾರ ಈ ಕ್ಷೇತ್ರದಲ್ಲಿ ಬರೀ 40 ಮನೆ ಕೊಟ್ಟಿದೆ ನಾನು ಇದ್ದಾಗ ಹತ್ತರಿಂದ ಹದಿನೈದು ಸಾವಿರ ಮನೆ ಕೊಟ್ಟಿದ್ದೆ ಈ ಬಿಜೆಪಿ ಸ


ರ್ಕಾರಕ್ಕೆ ನಾಚಿಕೆ ಆಗಬೇಕು.ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಬಡವರಿಗಾಗಿ ತಲಾ 7 ಕೆಜಿ ಅಕ್ಕಿ ಕೊಟ್ಟಿದ್ದೆ. ದದ್ದಲ್ ಹೇಳಿದಹಾಗೆ ಕರೋನಾ ಸಂದರ್ಭದಲ್ಲಿ ಅನ್ನ ಭಾಗ್ಯ ಯೋಜನೆ ಅಕ್ಕಿ ಇಲ್ಲ ಅಂದ್ರೆ ಬಡವರು ತುತ್ತು ಅನ್ನಕ್ಕೂ  ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.                                ಬಡವರಿಗೆ ಅಕ್ಕಿ ಕೊಟ್ಟಿರುವುದು ಮನಮೋಹನ್ ಸಿಂಗ್ ಜಿ ಅವರ ಸರ್ಕಾರ ಕೊಟ್ಟಿದೆ ಆ ಸಂದರ್ಭದಲ್ಲಿ ಅವರು ಪ್ರಧಾನಿಗಳಾಗಿದ್ದರು, ಕಾಂಗ್ರೆಸ್ ಪಕ್ಷ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಜನರು ಇನ್ನೂ ನೆನೆಸುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದು ನೂರಕ್ಕೆ ನೂರು ಸತ್ಯ ದದ್ದಲ್ ಗೆಲ್ಲೋದು ಕೂಡ ನೂರಕ್ಕೆ ನೂರರಷ್ಟು ಗ್ಯಾರೆಂಟಿ. 

ನಾನು ಮುಖ್ಯಮಂತ್ರಿ ಆಗಿದ್ದಾಗ ದದ್ದಲ್ ಶಾಸಕರಾಗಿದ್ದರೆ ಮೂರು ನಾಲ್ಕು ಸಾವಿರ ಕೋಟಿ ಅನುದಾನ ಕ್ಷೇತ್ರಕ್ಕೆ ಕೊಡುತ್ತಿದ್ದೆ ಪಕ್ಷಭೇದ ಮಾಡದೆ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದೇ ಮುಂದೆನೂ ಮಾಡುತ್ತೇನೆ.

ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ಕೊಡಲಾಗುತ್ತೇವೆ 10 ಕೆಜಿ ಅಕ್ಕಿ ಕೊಡ್ತೀವಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಕೊಡ್ತೀವಿ ವರ್ಷಕ್ಕೆ 24000 ಕೊಡ್ತೀವಿ.200 ಯೂನಿಟ್ ವಿದ್ಯುತ್ ಫ್ರೀ ಕೊಡ್ತೀವಿ.ನಿರೂದ್ಯೋಗ ಯುವಕ ಯುವತಿಯರಿಗೆ ತಿಂಗಳಿಗೆ ಮೂರು ಸಾವಿರ ಕೊಡ್ತೀವಿ,  ಅದಕ್ಕಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಬಸವರಾಜ್ ಬೊಮ್ಮಾಯಿ ಅವರ ಸಿಎಂ ಆಗಿದ್ದಾರೆ ಬಿ ಎಲ್ ಸಂತೋಷ್ ಅವರು ಕೈಯಲ್ಲಿ ಏನೂ ಇಲ್ಲ

ಪಕ್ಷಕ್ಕಾಗಿ ದುಡಿದ ಲಕ್ಷ್ಮಣ್ ಸವದಿಗೆ ಟಿಕೆಟ್ ನೀಡಲಿಲ್ಲ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಕೂಡ ಟಿಕೆಟ್ ನೀಡಲಿಲ್ಲ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಕಣ್ಣೀರು ತರಿಸಿ ಅಧಿಕಾರದಿಂದ ಮುಖ್ಯಮಂತ್ರಿ ಪದದಿಂದ ತೆಗೆದರು ಬಿಜೆಪಿ ಸರ್ಕಾರ ಲಿಂಗಾಯತ ವಿರೋಧಿ ಸರ್ಕಾರ ಕೈಯಲ್ಲಿದೆ.

ಈಗ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ನೇಮಕಾತಿಯಲ್ಲಿ ಲಂಚ ವರ್ಗಾವಣೆಯಲ್ಲಿ ಲಂಚ ಕೋಟಿಂಗ್ ಯಾವುದೇ ಇಲಾಖೆ ಹೊಡೆಯುತ್ತಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಇದಕ್ಕೆಲ್ಲ ಕಡಿವಾಣ ಹಾಕುತ್ತೇವೆ.

ನರೇಂದ್ರ ಮೋದಿಜಿ ಅವರು ನಾ ಕಾವ್ಯ ದೇವಂಗ ಎಂದು ಸುಳ್ಳು ಹೇಳುತ್ತಿದ್ದಾರೆ ಗುತ್ತಿಗೆದಾರರು ಪತ್ರ ಬರೆದು ಒಂದೂವರೆ ವರ್ಷ ಆಯ್ತು ಯಾವುದೇ ಕ್ರಮ ಕೈಗೊಂಡಿಲ್ಲ ಮುಖ್ಯಮಂತ್ರಿಗಳಿಗೆ ಮತ್ತು ಸಚಿವರುಗಳಿಗೆ ತಿನ್ನಲು ಬಿಟ್ಟಿದ್ದಾರಾ ಇದು ಡೋಂಗಿತನ ನವಲ್ಲವಾ ಎಂದರು.

ಇನ್ನು ಸುಳ್ಳು ಹೇಳುತ್ತಿದ್ದಾರೆ ಅಚ್ಚೆ ದಿನ್ ಆಯೇಗಾ ಅಂದ್ರು,  ಬಂತಾ ಒಳ್ಳೆಯ ದಿನ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ

ಗಗನಕ್ಕೆ ಮುಟ್ಟುತ್ತಿದೆ ಮನಮೋಹನ್ ಸಿಂಗ್ ಜಿ ರವರು ಇದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ 404 ರೂಪಾಯಿ ಇತ್ತು ಇಂದು 1200 ರೂಪಾಯಿ ಆಗಿದೆ. ಗೊಬ್ಬರದ ಬೆಲೆ 450ರಿಂದ 500 ರೂಪಾಯಿ ಇಂದು 1600 ಆಗಿದೆ ರೈತರ ಆದಾಯ ದುಪ್ಪಟ್ಟು ಆಗುತ್ತೆ ಅಂತ ಹೇಳಿ ಇಂದು ರೈತರು ಮಾಡಿದ ಸಾಲ ದುಪ್ಪಟ್ಟು ಆಯ್ತು ಇಂದು ಜನಸಾಮಾನ್ಯರು ಜೀವನ ನಡೆಸಲು ಬಹಳ ಕಷ್ಟವಾಗುತ್ತದೆ ನಾವೆಲ್ಲ ಹಳ್ಳಿಯವರು ನಿಮಗೆ ಜೀವನದ ಬದುಕು ಗೊತ್ತಿದೆ. ಪೆಟ್ರೋಲ್ ಡೀಸೆಲ್ ಬೆಲೆ ಜನರ ಜೀವನ ದೃಶ್ಯ ಮಾಡಿರುವ ಬಿಜೆಪಿಗೆ ವೋಟ್ ಹಾಕಬೇಕಾ ಪ್ರತಿಯೊಂದಕ್ಕೂ ಜಿಎಸ್ ಟಿ ಹಾಕುತ್ತಿದ್ದಾರೆ.


ನಾವು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ 20 ಲಕ್ಷ ಮನೆಗಳನ್ನು ಕೊಡಲಾಗುತ್ತೇವೆ 10 ಕೆಜಿ ಅಕ್ಕಿ ಕೊಡ್ತೀವಿ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ಕೊಡ್ತೀವಿ ವರ್ಷಕ್ಕೆ 24000 ಕೊಡ್ತೀವಿ.200 ಯೂನಿಟ್ ವಿದ್ಯುತ್ ಫ್ರೀ ಕೊಡ್ತೀವಿ.

ನಿರೂದ್ಯೋಗ ಯುವಕ ಯುವತಿಯರಿಗೆ ತಿಂಗಳಿಗೆ ಮೂರು ಸಾವಿರ ಕೊಡ್ತೀವಿ,  ಅದಕ್ಕಾಗಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ, ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುತ್ತೇವೆ.


ಈ ಹಿಂದೆ ಶ್ರೀ ಬಸವಣ್ಣನವರ ತತ್ವದಂತೆ ನಡೆದಿದ್ದೇವೆ. ನಾನು ಮುಖ್ಯಮಂತ್ರಿಯಾದಂತಹ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಪೋಟೋ ಅಳವಡಿಸಿದ್ದೆ.


 ಜನವಿರೋಧಿ ಬಿಜೆಪಿ ಸರ್ಕಾರ ಬಂದ ಮೇಲೆ ಮೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಇವರು ನಮಗೆ ಬೇಕು, ರಾಜ್ಯ ಅಭಿವೃದ್ಧಿ ಯಾಗಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ.

ಬಸನಗೌಡ ಗದ್ದೆಲ್ಲವರು ಜನಪದ ಕಾಳಜಿ ಇರುವ ವ್ಯಕ್ತಿ ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂದವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಕೂಡ ಎಲ್ಲಾ ಹಳ್ಳಿಗಳಲ್ಲೂ ಒಂದಲ್ಲ ಒಂದು ಕೆಲಸ ಮಾಡಿದ್ದಾರೆ ನಾವು ಅಧಿಕಾರಕ್ಕೆ ಬಂದಮೇಲೆ ರಾಯಚೂರು ಗ್ರಾಮೀಣ ಕ್ಷೇತ್ರಕ್ಕೆ ಏನು ಕೇಳುತ್ತಾರೆ ಎಲ್ಲವೂ ಕೊಡುತ್ತೇವೆ,


ರಾಯಚೂರು ಗ್ರಾಮೀಣ ಪ್ರದೇಶ ಮಳೆ ಆಶ್ರಯಿತ ಒಣ ಭೂಮಿ ಆಗಿದ್ದು, ಈ ಕ್ಷೇತ್ರದ ನೀರಾವರಿಗಾಗಿ ಕೆರೆಗಳನ್ನು ತುಂಬಿಸುವ ಲಿಫ್ಟ ಇರಿಗೇಶನ್ ಮಾಡಲು ಅನುವು ಮಾಡಿಕೊಡುತ್ತೇವೆ.

ಮಾಜಿ ಶಾಸಕ ತಿಪ್ಪರಾಜ್ ರವರಿಗೆ ಈಗಾಗಲೇ ಅವರಿಗೆ ಸೋಲಿನ ಭಯ ಶುರುವಾಗಿದೆ.

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ರವರನ್ನು ಗೆಲ್ಲಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ಪ್ರಕಾಶ ರಾಥೋಡ, ಎ.ವಸಂತ ಕುಮಾರ, ಬಸವರಾಜ ಪಾಟೀಲ ಇಟಗಿ ಸೇರಿದಂತೆ ಅನೇಕ ಮುಖಂಡರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ