ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಪರ ಪ್ರಚಾರ ಸಭೆ : ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆ- ಸಿದ್ದರಾಮಯ್ಯ
ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಶಾಲಂ ಪರ ಪ್ರಚಾರ ಸಭೆ :
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆ- ಸಿದ್ದರಾಮಯ್ಯ
ರಾಯಚೂರು,ಏ.೨೭-ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯಕ್ಕೆ ಮನ್ನಣೆಯಿದ್ದು ಎಲ್ಲ ಸಮುದಾಯಕ್ಕೂ ಚುನಾವಣೆಯಲ್ಲಿ ಸ್ಪರ್ದಿಸಲು ಟಿಕೆಟ್ ನೀಡಲಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಅವರಿಂದು ನಗರದ ವಾಲಕಟ್ ಮೈದಾನದಲ್ಲಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ ಶಾಲಂ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಸ್ವಾತಂತ್ರö್ಯ ಪೂರ್ವದಿಂದಲು ಇರುವ ಪಕ್ಷ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಡುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಯಿದ್ದು ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಹಿರಿಯ ಮುಖಂಡರು ಇದ್ದಾರೆ ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕಾರ್ಯ ಮಾಡಿದೆ ಎಂದ ಅವರು ಅರ್‌ಎಸ್‌ಎಸ್ ೧೯೨೫ರಲ್ಲಿ ಸ್ಥಾಪನೆಯಾಯಿತು ೧೯೫೧ ರಲ್ಲಿ ಜನಸಂಘ ಸ್ಥಾಪನೆಯಾಯಿತು ೧೯೮೦ ರಲ್ಲಿ ಜನತಾ ಪಕ್ಷದಿಂದ ಹೊರಬಂದು ಬಿಜೆಪಿಯಾಯಿತು ಎಂದರು.
ಸ0ಘ ಪರಿವಾರ ಸಮಾಜವನ್ನು ಒಡಿಯುತ್ತಿದೆ ಒಂದು ಕೋಮು ಮತೊಂದು ಕೋಮಿನ ನಡುವೆ ಸಂಘರ್ಷ ಏರ್ಪಡಿಸುತ್ತಿದೆ ಎಂದು ದೂರಿದ ಅವರು ಬಿಜೆಪಿಗೆ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ನಂಬಿಕೆಯಿಲ್ಲ ಅರ್‌ಎಸ್‌ಎಸ್ ಎರಡನೆ ಸರ ಸಂಘ ಚಾಲಕ ಗೋಲ್ವಾಲಕರ್ ತಮ್ಮ ಪುಸ್ತಕ ಚಿಂತನ ಗಂಗಾದಲ್ಲಿ ಉಲ್ಲೇಖಿಸಿದ್ದಾರೆ ಅರ್‌ಎಸ್‌ಎಸ್ ಮುಖವಾಣಿ ಆರ್ಗನೈಜರ್‌ನಲ್ಲಿಯೂ ಅದನ್ನೆ ಪ್ರತಿಪಾದಿಸಲಾಗಿದೆ ಎಂದರು.
ಬಿಜೆಪಿ ಶೋಷಣೆಗೆ ಪ್ರಚೋದನೆ ನೀಡುತ್ತದೆ ಸಮಾನ ಅವಕಾಶಕ್ಕೆ ಅಲ್ಲಿ ಅವಕಾಶವಿಲ್ಲ ಸಾಮಾಜಿಕ ನ್ಯಾಯದ ವಿರುದ್ದ ಅಲ್ಲಿ ನಡುವಳಿಕೆಯಿದೆ ಎಂದ ಅವರು ಬಿಜೆಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸಲು ಒಬ್ಬ ಮುಸ್ಲಿಂ, ಕ್ರಿಶ್ಚಿಯನ್ ವ್ಯಕ್ತಿಗೆ ಟಿಕೆಟ್ ನೀಡಿಲ್ಲ ಆದರೆ ನಾವು ೧೫ ಜನ ಮುಸ್ಲಿಂ , ೩ ಕ್ರಿಶ್ಚಿಯನ್ನರಿಗೆ ಟಿಕೆಟ್ ನೀಡಿದ್ದೇವೆ ಪ್ರಧಾನಿ ನರೇಂದ್ರ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಎಂದು ಹೇಳುತ್ತಾರೆ ಇದೆನಾ ಅವರ ಸಂಸ್ಕೃತಿ ಎಂದರು.
ಮೋದಿಯವರು ಅಚ್ಛೆ ದಿನ ಬರುತ್ತದೆ ಎನ್ನುತ್ತಾರೆ ಆದರೆ ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದಾಗ ಗ್ಯಾಸ್ ಬೆಲೆ ೪೦೦ ರೂ ಇತ್ತು ಇದೀಗ ಗ್ಯಾಸ್ ಬೆಲೆ ೧೨೦೦ ರೂ ಆಗಿದೆ ರಸ ಗೊಬ್ಬರ ಬೆಲೆ ಮೂರು ಪಟ್ಟು ಹೆಚ್ಚಾಗಿದೆ ಎಂದರು.
ಮೋದಿಯವರು ನಾ ಖಾವೂಂಗಾ ನಾ ಖಾನೆ ದೂಂಗಾ ಎಂದು ಹೇಳುತ್ತಾರೆ ರಾಜ್ಯ ಸರ್ಕಾರದ ವಿರುದ್ದ ಕಾಂಟ್ರಾಕ್ಟರ್ ಅಸೋಸಿಯೇಷನ್ ಇನ್ನಿತರ ಖಾಸಗಿ ಸಂಘಗಳು ಶೇ.೪೦ ರಷ್ಟು ಕಮೀಷನ್ ಬಗ್ಗೆ ಮೋದಿಯವರಿಗೆ ಪತ್ರ ಬರೆದು ದೂರು ನೀಡದರು ಕ್ರಮವಾಗಿಲ್ಲವೆಂದರು.
ಬಡವರಿಗೆ ನೀಡುವ ಅಕ್ಕಿ ಕಡಿಮೆ ಮಾಡಿದ್ದಾರೆ ನಾವು ಅಧಿಕಾರಕ್ಕೆ ಬಂದರೆ ೧೦ ಕೆ.ಜಿ ಅಕ್ಕಿ ಉಚಿತವಾಗಿ ನೀಡುತ್ತೇವೆಂದ ಅವರು ನಾನು ಸಿಎಂ ಆಗಿದ್ದಾಗ ಬಡವರಿಗೆ ೧೫ ಲಕ್ಷ ಮನೆ ನಿರ್ಮಿಸಿದ್ದೇನೆ ಬಿಜೆಪಿ ಒಂದೆ ಒಂದು ಮನೆ ಕಟ್ಟಿಲ್ಲವೆಂದು ಅರೋಪಿಸಿದ ಅವರು ಮುಸ್ಲಿಂರಿಗೆ ಇದ್ದ ಶೇ.೪ ರಷ್ಟು ಮೀಸಲಾತಿ ರದ್ದು ಮಾಡಿದ್ದಾರೆ ದ್ವೇಷದ ರಾಜಕಾರಣ ಮಾಡುತ್ತಾರೆ ಎಂದರು.
ಸಿಟಿ ರವಿ ನನ್ನನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ ಅವರಿಗೆ ಅವರ ಕ್ಷೇತ್ರದಲ್ಲಿ ಲೂಟಿ ರವಿ ಎನ್ನಾತ್ತಾರೆ ಎಂದು ಟೀಕಿಸಿದ ಅವರು ಇಲ್ಲಿನ ಶಾಸಕ ಡಾ.ಶಿವರಾಜ ಪಾಟೀಲ ಕೋಟ್ಯಾಂತರ ರೂ ಲೂಟಿ ಮಾಡಿದ್ದಾರೆ ಈ ಹಿಂದೆ ಜೆಡಿಎಸ್ ನಿಂದ ಗೆದ್ದು ನಂತರ ಬಿಜೆಪಿಗೆ ಹೋಗಿ ಅಲ್ಲಿಂದ ಮತ್ತೆ ಶಾಸಕನಾಗಿ ನಗರದ ಅಭಿವೃದ್ದಿ ಮಾಡದೆ ಸ್ವಂತಕ್ಕೆ ಸಾಕಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುತ್ತೇವೆಂದ ಅವರು ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಅನೇಕ ಯೋಜನೆಗಳು ಜಿಲ್ಲೆಗೆ ನೀಡಲಾಗಿದೆ ಎಂದರು.
ಚುನಾವಣೆಯಲ್ಲಿ ದುಡ್ಡಿನ ಆಸೆಗೆ ಮರಳಾಗಿ ಬಿಜೆಪಿಗೆ ಓಟು ಹಾಕಬೇಡಿ ಎಂದ ಅವರು ಜೆಡಿಎಸ್ ಪಕ್ಷ ತತ್ವ ಸಿದ್ದಾಂತವಿಲ್ಲದ ಪಕ್ಷ ಅವರು ಗೆದ್ದಿತ್ತಿನ ಬಾಲ ಹಿಡಿಯುವವರು ಎಂದ ಅವರು ಹಿಂಬಾಗಿಲನಿ0ದ ಅಧಿಕಾರಕ್ಕೆ ಬರವವರಿಗೆ ನೀವು ಸರಿಯಾಗಿ ಪಾಠ ಕಲಿಸಿರಿ ಎಂದರು.
ಕಾ0ಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರುವ ಮೊಹಮ್ಮದ ಶಾಲಂಗೆ ಎಲ್ಲರೂ ಬೆಂಬಲಿಸಿ ಎಂದರು.
ಮಾಜಿ ಸಚಿವೆ ಉಮಾಶ್ರಿ ಮಾತನಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು ಇದಕ್ಕೆ ತಮ್ಮೆಲ್ಲರ ಬೆಂಬಲ ಬೇಕೆಂದರು. ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಮಾತನಾಡಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದು ನಮ್ಮ ಪಕ್ಷ ಎಲ್ಲರ ಅಭಿಪ್ರಾಯ ಆಲಿಸಿ ಸರ್ವ ಸಮ್ಮತವಾದ ಅಭ್ಯರ್ಥಿಯಾಗಿ ಮೊಹಮ್ಮದ ಶಾಲಂ ನಗರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದು ಎಲ್ಲರೂ ಅವರನ್ನು ವಿಧಾನಸಭೆಗೆ ಆರಿಸಿ ಕಳುಹಿಸಿ ಎಂದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ ಹತ್ತು ವರ್ಷದ ಅವಧಿಯಲ್ಲಿ ನೂರಾರು ಕೋಟಿ ರೂ. ಅಸ್ತಿ ಸಂಪಾದಿಸಿದ್ದು ನಗರಕ್ಕೆ ಹೆಚ್ಚಿನ ಸೌಲಭ್ಯ ನೀಡದೆ ವಂಚಿಸಿದ್ದು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದರು.
ಕಾ0ಗ್ರೆಸ್ ಅಭ್ಯರ್ಥಿ ಮೊಹಮ್ಮದ ಶಾಲಂ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ ಹೈಕಮಾಂಡ್ ಗುರುತಿಸಿ ಟಿಕೆಟ್ ನೀಡಿದೆ ತಾವೆಲ್ಲರೂ ನನಗೆ ಆಶೀರ್ವಾದ ಮಾಬೇಕೆಂದು ಕೋರಿದರು.
ಮುಖಂಡರಾದ ಪ್ರಕಾಶ ರಾಥೋಡ, ಪರಸಮಲ್ ಸುಖಾಣೀ, ಕೆ.ಶಾಂತಪ್ಪ ಮತ್ತಿತರರು ಮಾತನಾಡಿದರು.
ಇದೇ ವೇಳೆ ಪಕ್ಷಕ್ಕೆ ಎಂ.ಪವನ್ ಕುಮಾರ್ ಮತ್ತಿತರರನ್ನು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ವೇದಿಕೆ ಮೇಲೆ ಎಐಸಿಸಿ ಕಾರ್ಯದರ್ಶಿ ಸೆಲಂ, ಬಷೀರುದ್ದಿನ್, ಅಸ್ಲಂ ಪಾಷಾ, ಜಿ.ಬಸವರಾಜ ರಡ್ಡಿ,ರವಿ ಬೋಸರಾಜು, ಎಂ.ಕೆ.ಬಾಬರ್, ಈಶಪ್ಪ, ಕಡಗೋಲ ಶರಣಪ್ಪ, ಸಾಜಿದ ಸಮೀರ, ರುದ್ರಪ್ಪ ಅಂಗಡಿ,ಅಮರೇಗೌಡ ಹಂಚಿನಾಳ,ರಮೇಶ, ರಾಮು ಗಿಲೇರಿ ಸೇರಿದಂತೆ ನಗರಸಭೆ ಸದಸ್ಯರು, ಮುಖಂಡರು ಇದ್ದರು.
Comments
Post a Comment