ಉತ್ತರ ಪ್ರದೇಶ ಸಿಎಂ ರಿಂದ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆ: ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಈಗ ಅಸ್ತಿತ್ವವೆ ಇಲ್ಲದಂತಾಗಿದೆ - ಯೋಗಿ ಆದಿತ್ಯನಾಥ

 


ಉತ್ತರ ಪ್ರದೇಶ ಸಿಎಂ ರಿಂದ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆ:

ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಈಗ ಅಸ್ತಿತ್ವವೆ ಇಲ್ಲದಂತಾಗಿದೆ - ಯೋಗಿ ಆದಿತ್ಯನಾಥ

ರಾಯಚೂರು,ಏ.೩೦-ಶ್ರೀರಾಮನ ಅಸ್ತಿತ್ವ ಪ್ರಶ್ನಿಸಿದವರಿಗೆ ಇಂದು ದೇಶದಲ್ಲಿ ಅಸ್ತಿತ್ವವೆ ಇಲ್ಲದಂತಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದರು.

ಅವರಿಂದು ನಗರದ ಕೃಷಿ ವಿವಿ ಮೈದಾನದಲ್ಲಿ ಬಿಜೆಪಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಡಾ.ಶಿವರಾಜ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶ್ರೀ ರಾಮನ ಇರುವಿಕೆ ಬಗ್ಗೆ ಕುಹಕವಾಡಿದ್ದವರು ಇಂದು ತಮ್ಮ ಅಸ್ತಿತ್ವಕ್ಕೆ ಪರಿತಪಿಸುತ್ತಿದ್ದಾರೆ ಎಂದ ಅವರು ಈ ದೇಶದ ಪ್ರತಿಯೊಬ್ಬರ ಕಣ ಕಣದಲ್ಲಿಯೂ ಶ್ರೀರಾಮನು ನಲೆಸಿದ್ದಾನೆ ಎಂದರು.

 ಉತ್ತರ ಪ್ರದೇಶದ ರಾಮನ ಜನ್ಮ ಭೂಮಿ ಅಯೋಧ್ಯೆಗೂ ಕರ್ನಾಟಕದ ಕಿಷ್ಕಿಂದೆಗೂ ಅನ್ಯೋನ್ಯ ನಂಟಿದೆ ರಾಮನ ಜನ್ಮ ಭೂಮಿ ಉತ್ತರ ಪ್ರದೇಶವಾದರೆ ಹನುಮನ ಪುಣ್ಯ ಪಾವನ ಭೂಮಿ ಕರ್ನಾಟಕವಾಗಿದೆ ಎಂದರು.

ರಾಯಚೂರು ಹರಿದಾಸರ ನಾಡು, ಕೃಷ್ಣೆ- ತುಂಗೆಯ ಬೀಡು ಇಲ್ಲಿಯ ಜನರಿಗೆ ಕೋಟಿ ಕೋಟಿ ನಮನಗಳು ಎಂದು ಕನ್ನಡದಲ್ಲಿ ಮಾತು ಪ್ರಾರಂಭಿಸಿದ ಅವರು ಇಲ್ಲಿ ನೆಲೆಸಿದ್ದ ವಿಜಯ ದಾಸರ, ಗೋಪಾಲ ದಾಸರ ಮತ್ತು ಜಗನ್ನಾಥ ದಾಸರ ಬಗ್ಗೆ ಉಲ್ಲೇಖಿಸಿದ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ದೊರೆ  ರಾಜಾ ವೆಂಕಟಪ್ಪ ನಾಯಕರ ಬಗ್ಗೆ ಗುಣಗಾನ ಮಾಡಿದರು.


ಈ ಪ್ರದೇಶವು ನಿಜಾಮರ ಆಡಳಿತದಲ್ಲಿ ನಲುಗಿತ್ತು ಈದೀಗ ಕೇಂದ್ರದಲ್ಲಿ ಮೋದಿ ಮತ್ತು ಕರ್ನಾಟಕದಲ್ಲಿ ಬೊಮ್ಮಾಯಿ ಆಡಳಿತದಲ್ಲಿ  ಡಬಲ್ ಇಂಜನ್ ಸರ್ಕಾರದಿಂದ ಡಬಲ್ ಸ್ಪೀಡ್ ಪ್ರಗತಿ ಕಾಣುತ್ತಿದೇವೆಂದರು.

ಕೇ0ದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ರಾಯಚೂರಲ್ಲಿ ಅನೇಕ ಪ್ರಗತಿ ಕಾಣುತ್ತಿದ್ದೇವೆ ಐಐಐಟಿ ಸ್ಥಾಪನೆಯಾಗಿದೆ ವಿಮಾನ ನಿಲ್ದಾಣ ಮಂಜೂರಿಯಾಗಿದೆ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣವಾಗುತ್ತದೆ ಎರೆಡು ನದಿಗಳ ಫಲವತ್ತಾದ ಭೂಮಿ ಇದಾಗಿದ್ದು ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಡಬಲ್ ಇಂಜನ್ ಸರ್ಕಾರ ಅವಿರತ ಶ್ರಮ ಹಾಕುತ್ತಿದೆ ಎಂದರು.

ಭಾರತ ದೇಶವು ಜಿ.೨೦ ರಾಷ್ಟçಗಳ ಪಟ್ಟಿಯಲ್ಲಿದೆ ವಿಶ್ವದ ಯಾವುದೆ ರಾಷ್ಟçಕ್ಕೆ ಸಂಕಷ್ಟ ಎದುರಾದಾಗ ಭಾರತ ದೇಶದತ್ತ ನೋಡುತ್ತವೆ ಇಡಿ ವಿಶ್ವವನ್ನು ಮೋದಿ ನೇತೃತ್ವದ  ಭಾರತ ಸರ್ಕಾರ ಭ್ರಾತೃತ್ವದ ಅಡಿಯಲ್ಲಿ ನೋಡುತ್ತಿದೆ ಎಂದರು.

ಭವ್ಯ ಇತಿಹಾಸ ಹೊಂದಿರುವ ಭಾರತದಲ್ಲಿ ಇಡಿ ಪ್ರಪಂಚಕ್ಕೆ ಮಾದರಿಯಾಗಿದ್ದ ನಳಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳು ದೇಶದ ಪ್ರತೀಕವಾಗಿವೆ ಭಾರತವಿಂದು ವಿಶ್ವ ಗುರು ಆಗಲು ಹೊರಟಿದೆ ಎಂದ ಅವರು ಕರ್ನಾಟಕದಲ್ಲಿ ಸುಭದ್ರ ಆಡಳಿತ ನೀಡಲು ನಿಮ್ಮೆಲ್ಲರ ಆಶೀರ್ವಾದ ಬೇಕೆಂದರು.

ಉತ್ತರ ಪ್ರದೇಶವು ಒಂದು ಕಾಲದಲ್ಲಿ ಬಡತನ, ಗಲಭೆ ಮುಂತಾದ ಕಾರಣಕ್ಕೆ ಕುಖ್ಯಾತಿ ಪಡೆದಿತ್ತು ಆದರೀಗ ಮೋದಿ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶವು ಅಭಿವೃದ್ದಿ ಪಥದತ್ತ ಸಾಗುತ್ತಿದೆ ಅಲ್ಲಿ ತನ್ನ ಕಬಂಧ ಬಾಹು ಚಾಚಿದ್ದ ಮಾಫಿಯಾ ಡಾನ್ ಗಳು ಸಮಾಜ ಘಾತುಕ ಶಕ್ತಿಗಳನ್ನು ಸದೆ ಬಡೆಯಲಾಗಿದೆ ಉತ್ತರ ಪ್ರದೇಶದಲ್ಲಿ ವ್ಯಾಪಾರಸ್ಥರು ನಿರ್ಭೀತರಾಗಿ ತಮ್ಮ ವಹಿವಾಟು ಮಾಡುತ್ತಾರೆಂದರು.


ಈ ಹಿಂದೆ ಕಾಂಗ್ರೆಸ್ ರೈತರನ್ನು ಹೀನವಾಗಿ ಕಾಣುತ್ತಿತ್ತು ಎಂದು ದೂರಿದ ಅವರು ಇಂದು ಮೋದಿಯವರು ರೈತರಿಗೆ ಕಿಸಾನ್ ಸಮ್ಮಾನ ನಿಧಿ ನೀಡಿ ರೈತರು ಗೌರವದಿಂದ ಬಾಳಲು ಸಹಕಾರಿಯಾಗಿದ್ದಾರೆ ಎಂದ ಅವರು ಕರೋನಾ ಸಂದರ್ಭದಲ್ಲಿ ಯಾರು ಉಪವಾಸವಿರಬಾರದೆಂದು ಗರೀಬ ಕಲ್ಯಾಣ ಯೋಜನೆಯಡಿ ಧವಸ ಧಾನ್ಯ ಉಚಿತವಾಗಿ ನೀಡಲಾಯಿತು.

ಕರೋನಾ ವ್ಯಾಕ್ಸಿನ್ ಸಹ ಉಚಿತವಾಗಿ ನೀಡಿ ಮಹಾಮಾರಿ ಕರೋನಾ ಹಮ್ಮೆಟ್ಟಿಸಿದ ಕೀರ್ತಿ ಪ್ರಧಾನಿಗೆ ಸಲ್ಲುತ್ತದೆ ಎಂದ ಅವರು  ದೇಶದ ೫೦ ಕೋಟಿ ಜನರಿಗೆ ಆಯುಷ್ಮಾನ ಯೋಜನೆಯಡಿ ಆರೋಗ್ಯ ಸೇವೆ, ಪ್ರತಿ ನಾಗರೀಕನಿಗೂ ಜನ ಧನ ಖಾತೆ, ೧೫ ಕೋಟಿ ಯುವಕರಿಗೆ ಸ್ಟಾರ್ಟ ಅಪ್ ನೆರವು, ೧೨ ಕೋಟಿ ಶೌಚಾಲಯ, ೮ ಕೋಟಿ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ , ೪ ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ ನಿಧಿ ದೊರೆಯುತ್ತಿದೆ ಎಂದರು.

ಕಾ0ಗ್ರೆಸ್ ಪಕ್ಷ ಕೇವಲ ಘೋಷಣೆಗಳನ್ನು ಭರವಸೆಗಳನ್ನು ನೀಡುತ್ತದೆ ದೇಶದಲ್ಲಿ ಭೇಧ ಭಾವ ಮಾಡುವುದು ಕಾಂಗ್ರೆಸ್ ನೀತಿಯಾಗಿದೆ ಎಂದ ಅವರು ಟೀಂ ಇಂಡಿಯಾ ಮಾದರಿಯಲ್ಲಿ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರಿಸಿದೆ ಎಂದರು.

ದೇಶವಾಸಿಗಳ ಬಹುದಿನಗಳ ಕನಸು ಈಡೇರುತ್ತಿದ್ದು ೨೦೨೪ ನೇ ಇಸ್ವಿ ಜನೆವರಿಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲ್ಲಿದ್ದು ನೀವೆಲ್ಲ ಬರಬೇಕೆಂದು ಆಹ್ವಾನ ನೀಡುತ್ತೇನೆಂದ ಅವರು ಈಗಿರುವುದು ಹೊಸ ಉತ್ತರ ಪ್ರದೇಶವೆಂದರು.

ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ÷ ಶಕ್ತಿ ತುಂಬಬೇಕೆ0ದು ಕೋರಿದ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ ಉತ್ತರಪ್ರದೇಶದಲ್ಲಿ ದಕ್ಷ ಆಡಳಿತ ನಡೆಸುತ್ತಿರುವ ಯೋಗಿ ಆದಿತ್ಯನಾಥರವರು ನಗರಕ್ಕೆ ಆಗಮಿಸಿದ್ದು ನಮಗೆಲ್ಲ ಬಲ ಬಂದಿದ್ದು ಉತ್ತರ ಪ್ರದೇಶ ಮಾದರಿಯಲ್ಲಿ ಸುಭದ್ರ ಆಡಳಿತ ನೀಡಲು ತಾವೆಲ್ಲರು ಬಿಜೆಪಿಗೆ ಬೆಂಬಲಿಸಬೇಕೆ0ದು ಕೋರಿದರು.

ವೇದಿಕೆ ಮೇಲೆ ಸಂಸದ ಅಮರೇಶ್ವರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಮಾಜಿ ಶಾಸಕ ಎ.ಪಾಪರೆಡ್ಡಿ, ಮಾಜಿ ಎಂಎಲ್‌ಸಿ ಶಂಕ್ರಪ್ಪ, ಆರ್‌ಡಿಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ್ಯ, ತೆಲಂಗಾಣದ ಧರ್ಮರಾವ್, ಮುಖಂಡರಾದ ಶಿವಬಸಪ್ಪ ಮಾಲಿಪಾಟೀಲ, ಬಿ.ಗೋವಿಂದ , ತ್ರಿವಿಕ್ರಮ ಜೋಷಿ, ಶಂಕರ್‌ರೆಡ್ಡಿ ಇನ್ನಿತರರು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ