ಎಪ್ಪತ್ತು ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು: ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅವಿರತ ಪ್ರಯತ್ನ-ಅರ್ಜುನ್ ಮುಂಡಾ

 


ಎಪ್ಪತ್ತು ವರ್ಷದಲ್ಲಿ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು:

ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಅವಿರತ ಪ್ರಯತ್ನ- ಅರ್ಜುನ್ ಮುಂಡಾ

ರಾಯಚೂರು,ಏ.೨೫-ದೇಶದಲ್ಲಿರುವ ಬುಡುಕಟ್ಟು ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಅವಿರತ ಪ್ರಯತ್ನ ಮಾಡುತ್ತಿದ್ದಾರೆಂದು ಕೇಂದ್ರ ಬುಡಕಟ್ಟು ಖಾತೆ ಸಚಿವ ಹಾಗೂ ಜಾರ್ಖಂಡ್ ಮಾಜಿ ಸಿಎಂ ಅರ್ಜುನ್ ಮುಂಡಾ ಹೇಳಿದರು.

ಅವರಿಂದು ಬಿಜೆಪಿ ಕಾರ್ಯಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ಮೋದಿಯವರ ನೇತೃತ್ವದಲ್ಲಿ ದೇಶವು ಪ್ರಗತಿ ಸಾಧಿಸುತ್ತಿದೆ ದಲಿತ, ಬುಡಕಟ್ಟು ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದ ಅವರು ಕಳೆದ ೧೦ ವರ್ಷದಲ್ಲಿ ಮೋದಿಯವರ ನೇತೃತ್ವದಲ್ಲಿ ಸರ್ಕಾರ ಅನೇಕ ಅಭಿವೃದ್ದಿ ಮಾಡಿದೆ ಎಪ್ಪತ್ತು ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರ ದೇಶಕ್ಕೆ ನೀಡಿದ ಕೊಡುಗೆ ಏನು ಅವರ ದುರಾಡಳಿತದಿಂದ ದೇಶವು ದುಸ್ಥಿಗೆ ಇಳಿದಿತ್ತು ಮೋದಿಯವರು ದೇಶವನ್ನು ವಿಶ್ವಗುರು  ಮಾಡಲು ಹೊರಟಿದ್ದಾರೆ ಎಂದರು.


ನಿರ್ಲಕ್ಷಿತ ಸಮುದಾಯಗಳ ವ್ಯಕ್ತಿಗಳನ್ನು ಇಂದು ರಾಷ್ಟçಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ದೇಶದ ಎಲ್ಲ ವರ್ಗದ ಜನರಿಗೆ ಸೌಲಭ್ಯ ನೀಡಲಾಗುತ್ತಿದೆ ದೇಶದ ಸುಮಾರು ೨೫ ಕೋಟಿಗೂ ಅಧಿಕ ಸಂಖ್ಯೆಯ ಜನರು ಪ್ರಧಾನಿಯ ಮನ ಕಿ ಬಾತ್ ಕೇಳುತ್ತಿದ್ದಾರೆ ಮನ ಕಿ ಬಾತ್ ೧೦೦ ಕಂತುಗಳು ಸಮೀಪಿಸುತ್ತಿವೆ ಎಂದ ಅವರು  ಮೋದಿಯವರು ಸಮಾನ್ಯರೊಂದಿಗೆ ಬೆರೆಯುವ ಮನಸ್ಥಿತಿ ಹೊಂದಿದ್ದಾರೆ ಎಂದರು.

ಬುಡುಕಟ್ಟು ಇಲಾಖೆಯಿಂದ ಆದರ್ಶ ಗ್ರಾಮ ಯೋಜನೆ ಕೈಗೊಳ್ಳಲಾಗಿದೆ ಗ್ರಾಮಗಳ ಅಭಿವೃದ್ದಿ ಹೇಗೆ ಎಂಬ ನೀಲ ನಕ್ಷೆ ಸಿದ್ದಪಡಿಸಲಾಗುತ್ತಿದೆ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುತ್ತದೆ ಎಂದ ಅವರು 

ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಜನರಿಗೆ ಭರವಸೆ ಮೂಡಿಸಿದೆ ಇಲ್ಲಿ ಅಭಿವೃದ್ದಿ ಕಾಣುತ್ತಿದ್ದೇವೆ ಕೆಲವರು ರಾಜಕೀಯ ಪ್ರೇರಿತರಾಗಿ ಭ್ರಷ್ಟಾಚಾರ್ ಆರೋಪ ಮಾಡುತಿದ್ದಾರೆ ನಗರದಲ್ಲಿ ಶಾಸಕರು ಉತ್ತಮ ಕಾರ್ಯ ಮಾಡಿದ್ದಾರೆ ಸ್ವತಃ ನಾನು ಇಂದು ವೀಕ್ಷಸಿದೆ ಎಂದರು.


ಬಡವರಿಗೆ ಉಚಿತ ಗ್ಯಾಸ್ ಸಂಪರ್ಕ, ಆಯುಷ್ಮಾನ ಭಾರತ ಮೂಲಕ ಉಚಿತ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ, ಅಂತ್ಯೋದಯ ಅನ್ನ ಯೋಜನೆ ಮೂಲಕ ಬಡವರಿಗೆ ಧವಸ ಧಾನ್ಯ ನೀಡಲಾಗುತ್ತಿದೆ,  ಶೋಷಣೆಗೆ ಒಳಗಾದವರಿಗೆ ಸಮಾಜದ ಮುಖ್ಯ ವಾಹಿನಿಗೆ ತರಲಾಗುತ್ತಿದೆ ರಾಜ್ಯ ಸರ್ಕಾgದಿಂದÀ ಎಸ್ಸಿ , ಎಸ್ಟಿ ಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ ದಲಿತರಿಗೆ ಒಳ ಮೀಸಲಾತಿ ಘೋಷಣೆ ಮಾಡಲಾಗಿದೆ ರಾಜ್ಯ ಸರ್ಕಾರ ಮುಸ್ಲಿಂರಿಗೆ ನೀಡಿದ ಮೀಸಲಾತಿ ರದ್ದು ಸಮರ್ಥಿಸಿಕೊಂಡ ಅವರು ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕತೆ ಆಧಾರದ ಮೇಲೆ ಮೀಸಲಾತಿ ಇರಬೇಕೆ ವಿನಃ ಧರ್ಮಾಧಾರಿತ ಮೀಸಲಾತಿ ತರವಲ್ಲ ವೆಂದರು.

ತಾವು ಇಲ್ಲಿಂದ ನೇರವಾಗಿ ಅಂಡಮಾನ ನಿಕೋಬಾರ್ ಗೆ ತೆರಳುತ್ತೇನೆ ಅಲ್ಲಿ ಬುಡಕಟ್ಟಿ ಜನರಿಗೆ ಸ್ವಉದ್ಯೋಗ ಕಲ್ಪಿಸುವ ಬಗ್ಗೆ ಮತ್ತು ಬುಡಕಟ್ಟು ಸಮುದಾಯವು ಸ್ವಾಭಿಮಾನದ ಬದಕು ಸಾಗಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಸAಸದ ಅಮರೇಶ್ವರ ನಾಯಕ ಮಾತನಾಡಿ ಕೇಂದ್ರ ಸರ್ಕಾರ ಅನೇಕ ಮಹತ್ತರ ಯೋಜನೆಗಳನ್ನು ಜನರ ಕಲ್ಯಾಣಕ್ಕಾಗಿ ನೀಡಿದೆ ಮೋದಿಯವರ ದೂರದೃಷ್ಟಿ ದೇಶವನ್ನು ಅಗ್ರ ಸ್ಥಾನಕ್ಕೆ ಕೊಂಡ್ಯೊಯುತ್ತಿದೆ ಎಂದ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರ ಅನೇಕ ಜನ ಪರ ಕಾರ್ಯ ಮಾಡಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಮಾತನಾಡಿ ವಿಧಾನಸಭೆ ಚುನಾವಣೆ ಅಂಗವಾಗಿ ಜಿಲ್ಲೆಯಾದ್ಯಂತ ವಿಶೇಷ ಪ್ರಚಾರ ಆಂದೋಲನೆ ಮಾಡಲಾಗುತ್ತಿದೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ದಿನಾಂಕ ನಿಗದಿಯಾಗಿದೆ ಸುಮಾರು ೯೮ ಪ್ರಮುಖರು ಪ್ರಚಾರ ಕಾರ್ಯಕ್ಕೆ ಬರಲಿದ್ದಾರೆ  ಕೇಂದ್ರ ಸಚಿವರು, ಸ್ಟಾರ್ ಪ್ರಚಾರಕರು ಆಗಮಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಗರ ಚುನಾವಣಾ ಉಸ್ತುವಾರಿ ಧರ್ಮರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ, ಜಿಲ್ಲಾ ಮಾಧ್ಯಮ ವಕ್ತಾರ ಕೊಟ್ರೇಶಪ್ಪ ಕೋರಿ, ನಗರಾಧ್ಯಕ್ಷ ಬಿ.ಗೋವಿಂದ, ಮುಖಂಡರಾದ ಗಿರೀಶ ಕನಕವೀಡು ಇತರರು ಇದ್ದರು.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ