ಸಂಭ್ರಮ ಸಡಗರದಿಂದ ರಂಜಾನ್ ಹಬ್ಬ ಆಚರಣೆ
ಸಂಭ್ರಮ ಸಡಗರದಿಂದ ರಂಜಾನ್ ಹಬ್ಬ ಆಚರಣೆ
ರಾಯಚೂರು,ಏ.೨೨-ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಬೆಳಿಗ್ಗೆ ನಗರದ ಜಿಲ್ಲಾ ನ್ಯಾಯಾಲಯ ಬಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿ ಪರಸ್ಪರ ಆಲಂಗಿಸಿ ಶುಭಾಷಯ ವಿನಿಮಯ ಮಾಡಿ ಹಬ್ಬವನ್ನು ಆಚರಿಸಿದರು.
ಸಾಲಾಗಿ ಕುಳಿತು ಪ್ರಾರ್ಥನೆ ಮಾಡಿ ಹಬ್ಬವನ್ನು ಆಚರಿಸಿದರು. ಒಂದು ತಿಂಗಳ ಪರ್ಯಂತರ ರಂಜಾನ್ ಹಬ್ಬದಂಗವಾಗಿ ರೋಜಾ ಯಿರುವ ಮುಸ್ಲಿಂ ಬಾಂಧವರು ಇಂದು ಹೊಸ ಬಟ್ಟೆ ಧರಿಸಿ ಗುರುಹಿರಿಯರಿಗೆ ನಮಿಸಿ ಹಬ್ಬವನ್ನು ಆಚರಿಸಿದರು.
ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಸೈಯದ್ ಯಾಸೀನ್, ಯುವ ಮುಖಂಡರಾದ ರವಿ ಬೋಸರಾಜು, ನಗರಸಭೆ ಮಾಜಿ ಅಧ್ಯಕ್ಷ ಈ.ವಿನಯ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮುಖಂಡರಾದ ದೇವಣ್ಣ ನಾಯಕ, ಕೆ.ಶಾಂತಪ್ಪ, ವೈ.ಗೋಪಾಲ ರೆಡ್ಡಿ, ಎನ್.ಶಿವಶಂಕರ, ಡಿ.ವಿರೇಶ, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಅನೇಕರಿದ್ದು ಶುಭಾಷಯ ಕೋರಿದರು.
Comments
Post a Comment