ನಾಳೆ ನಗರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನ-ವಿರುಪಾಕ್ಷಿ
ನಾಳೆ ನಗರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನ-ವಿರುಪಾಕ್ಷಿ
ರಾಯಚೂರು,ಏ.೩೦-ವಿಧಾನ ಸಭೆ ಚುನಾವಣೆ ಅಂಗವಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ವಿಧಾನ ಸಭೆ ಚುನಾವಣೆಗೆ ಸ್ಪರ್ದಿಸಿರುವ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಕಾರ್ಯ ಕೈಗೊಳ್ಳಲಿರುವ ಕುಮಾರಸ್ವಾಮಿಯವರು ಮೇ.೧ ರಂದು ಸಂಜೆ ೫ಕ್ಕೆ ದೇವದುರ್ಗಕ್ಕೆ ಆಗಮಿಸಿ ಕರೆಮ್ಮ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ನಂತರ ೬ ಗಂಟೆಗೆ ನಗರದ ವಾಲ್ಕಟ್ ಮೈದಾನದಲ್ಲಿ ಜೆಡಿಎಸ್ ಪಕ್ಷದ ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ಅಭ್ಯರ್ಥಿಗಳಾದ ಈ.ವಿನಯಕುಮಾರ್ ಮತ್ತು ಸಣ್ಣ ನರಸಿಂಹನಾಯಕ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ನಗರದಲ್ಲಿ ವಸ್ತವ್ಯ ಮಾಡಿ ನಂತರ ಮೇ.೨ ರಂದು ಮಾನ್ವಿ , ಲಿಂಗಸ್ಗೂರು ಮತ್ತು ಸಿಂಧನೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆಂದರು.
ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರು ಆಗಮಿಸುತ್ತಿದ್ದು ಏನು ಪರಿಣಾಮ ಬೀರುವುದಿಲ್ಲವೆಂದ ಅವರು ಉತ್ತರ ಪ್ರದೇಶದಲ್ಲಿ ಬಡತನ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಅತ್ಯಧಿಕಾವಗಿ ದಾಖಲಾಗುತ್ತವೆ ಅಂತಹ ರಾಜ್ಯದ ಸಿಎಂ ಇಲ್ಲಿಗೆ ಬಂದು ಪ್ರಚಾರ ಮಾಡಿದರೆ ಮತದಾರರು ಒಪ್ಪಲು ಸಾಧ್ಯವೆ ಎಂದರು.
ನಗರ ಶಾಸಕರು ಅಭಿವೃದ್ದಿ ಹೆಸರಲ್ಲಿ ಲೂಟಿ ಮಾಡಿದ್ದಾರೆ ಒಂದೆ ಮಳೆಗೆ ನಗರದಲ್ಲಿ ಕಳಪೆ ಗುಣಮಟ್ಟದಿಂದ ಕೂಡಿರುವ ರಸ್ತೆಗಳು ಕಿತ್ತು ಬಂದಿದ್ದು, ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ ನಗರದ ಅಭಿವೃದ್ದಿ ಬಗ್ಗೆ ನಿರ್ಲಕ್ಷö್ಯ ವಹಿಸಿರುವ ಅವರಿಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಪಾಟೀಲ ಅತ್ತನೂರು, ಈ.ವಿನಯ ಕುಮಾರ್, ಸಣ್ಣ ನರಸಿಂಹನಾಯಕ, ಎನ್.ಶಿವಶಂಕರ, ಯೂಸೂಫ್ ಖಾನ್,ಗಾಣಧಾಳ ಲಕ್ಷಿö್ಮÃಪತಿ, ತಿಮ್ಮಾರೆಡ್ಡಿ, ಯಲ್ಲಾ ರೆಡ್ಡಿ ಇದ್ದರು.
Comments
Post a Comment