ಹೋರಾಟಗಾರರಿಗೆ ಬೊಗಳು ಎಂದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ: ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಜಿಲ್ಲೆಗೆ ಏಮ್ಸ್ ತರುತ್ತೇನೆ-ಕಳಸ
ಹೋರಾಟಗಾರರಿಗೆ ಬೊಗಳು ಎಂದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ:
ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದಲ್ಲಿ ಜಿಲ್ಲೆಗೆ ಏಮ್ಸ್ ತರುತ್ತೇನೆ-ಕಳಸ
ರಾಯಚೂರು,ಏ.೨೭- ನನ್ನನ್ನು ನಗರದ ಮತದಾರರು ಶಾಸಕನಾಗಿ ಆಯ್ಕೆ ಮಾಡಿದಲ್ಲಿ ನಾನು ಜಿಲ್ಲೆಗೆ ಏಮ್ಸ್ ತರುವುದಾಗಿ ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕರು ಮತ್ತು ಪಕ್ಷೇತರ ಅಭ್ಯರ್ಥಿಯಾಗಿರುವ ಬಸವರಾಜ ಕಳಸ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಪಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ ಸತತ ಒಂದು ವರ್ಷದಿಂದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲೆಗೆ ಮಂಜೂರಿ ಮಾಡಬೇಕೆಂದು ಹೋರಾಟ ನಡೆಸಿದ್ದು ಇದಕ್ಕೆ ಜಿಲ್ಲೆಯ ಶಾಸಕರು , ಸಂಸದರು ಸ್ಪಂದಿಸದೆ ಸರ್ಕಾರದ ಮೇಲೆ ಒತ್ತಡ ತರದೆ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡುವಲ್ಲಿ ವಿಫಲವಾಗಿದ್ದರಿಂದ ಹೋರಾಟಗಾರರ ಎಲ್ಲರ ಅಪೇಕ್ಷೆಯಂತೆ ತಾವು ನಗರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಚುನಾವಣೆ ಆಯೋಗ ತಮಗೆ "ಕುಕ್ಕರ್" ಗುರುತು ನೀಡಿದ್ದು ಮತದಾರರು ತಮಗೆ ಬೆಂಬಲಿಸಬೇಕೆAದು ಕೋರಿದರು.
ಏಮ್ಸ್ ಹೋರಾಟಗಾಗರನ್ನು ಸ್ಥಳಿಯ ಶಾಸಕ ಡಾ.ಶಿವರಾಜ ಪಾಟೀಲ ತುಚ್ಚವಾಗಿ ಕಂಡಿದ್ದು ನಮಗೆ ಕೀಳು ಮಟ್ಟದ ಭಾಷೆಯಲ್ಲಿ ಬೊಗಳು ಎಂದು ಸಂಬೋಧಿಸಿದ್ದಾರೆ ಅವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಎಲ್ಲರು ತಲೆ ತಗ್ಗಿಸಬೇಕಾದ ಸಂಗತಿ ಎಂದರು.
ನಗರವನ್ನು ಅಭೀವೃದ್ದಿ ಮಾಡದೆ ಹಣ ಲೂಟಿ ಮಾಡಿದ್ದಾರೆ ಅಶುದ್ಧ ಕುಡಿಯುವ ನೀರು ಕುಡಿದು ಸುಮಾರು ೭ ಜನ ಸಾವನಪ್ಪಿದ ದುರ್ಘಟನೆ ನಡೆಯಿತು ಜನತೆಗೆ ಶುದ್ದ ಕುಡಿಯುವ ನೀರು ನೀಡದ ಅವರು ನಗರವನ್ನು ನರಕ ಮಾಡಿದ್ದಾರೆ ಅವರನ್ನು ಮತದಾರರು ಸೋಲಿಸಬೇಕೆಂದು ಕರೆ ನೀಡಿದರು.
ಏಮ್ಸ್ ಹೋರಾಟ ಸಮಿತಿಯ ಅಶೋಕ ಕುಮಾರ್ ಜೈನ್ ಮಾತನಾಡಿ ಡಾ.ಶಿವರಾಜ ಪಾಟೀಲರು ಏಮ್ಸ್ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸಿಲ್ಲ ಬದಲಾಗಿ ನಮಗೆ ಅಗೌರವ ತೋರಿಸಿದ್ದಾರೆ ಅವರನ್ನು ಸೋಲಿಸುವ ಪಣ ತೊಟ್ಟಿದ್ದೇವೆ ಪಕ್ಷೇತg ಅಭ್ಯರ್ಥಿ ಬಸವರಾಜ ಕಳಸರವರನ್ನು ಗೆಲ್ಲಿಸಿದರೆ ಜಿಲ್ಲೆ ಏಮ್ಸ್ ತರುವ ಇಚ್ಚಾಶಕ್ತಿ ಅವರಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಬಷೀರ ಅಹ್ಮದ್, ಎನ್.ಮಹಾವೀರ, ಪ್ರಸನ್ನ ಆಲಂಪಲ್ಲಿ, ಪ್ರಭುನಾಯಕ ಇದ್ದರು.
Comments
Post a Comment