ನಗರದಲ್ಲಿ ಮುಂಗಾರು ಪೂರ್ವ ಗುಡುಗು , ಸಿಡಿಲಿನೊಂದಿಗೆ ಭಾರಿ ಮಳೆ.
ನಗರದಲ್ಲಿ ಮುಂಗಾರು ಪೂರ್ವ ಗುಡುಗು , ಸಿಡಿಲಿನೊಂದಿಗೆ ಭಾರಿ ಮಳೆ. ರಾಯಚೂರು,ಏ.28-ನಗರದಲ್ಲಿ ಮುಂಗಾರು ಪೂರ್ವ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ಕಂಗೆಟ್ಟ ಇಳೆಗೆ ತಂಪೆರೆಯಾತು. ಮಿಂಚು, ಸಿಡಿಲಿನ ಆರ್ಭಟ ಜೋರಾಗಿತ್ತು ಬಿರುಗಾಳಿಯಿಂದ ಮರ ಗಿಡಗಳು ಧರೆಗೆ ಉರಳುತ್ತವೆಯೋ ಎನ್ನುವ ಆತಂಕ ಮೂಡಿತ್ತು.
ಅಲ್ಲಲ್ಲಿ ಮಳೆ ನೀರು ನಿಂತು ರಸ್ತೆಗಳು ಜಲಾವೃತವಾದವು. ವಾಹನ ಸವಾರರು ಪರದಾಡಿದರು. ಚುನಾವಣೆ ಪ್ರಚಾರ ಕಾರ್ಯಕ್ಕೂ ಮಳೆ ಅಡಚಣೆ ಉಂಟು ಮಾಡಿತು. ಬಿಸಿಲಿನ ತಾಪಕ್ಕೆ ಕಾದು ಕಬ್ಬಿಣದಂತಾದ ಭೂಮಿಗೆ ಮಳೆ ನೀರು ತಂಪಾಗಿಸಿತು.
Comments
Post a Comment