ದಶಕಗಳ ನಂತರ ಜಿಲ್ಲೆಗೆ ದೊರೆತ ಮಂತ್ರಿ ಸ್ಥಾನ: ಕ್ಯಾಬಿನೆಟ್ ಸಚಿವರಾಗಿ ಬೋಸರಾಜು ಪ್ರಮಾಣ ವಚನ ಸ್ವೀಕಾರ: ಪ್ರವಾಸೋದ್ಯಮ ,ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಂಚಿಕೆ


ದಶಕಗಳ ನಂತರ ಜಿಲ್ಲೆಗೆ ದೊರೆತ ಮಂತ್ರಿ ಸ್ಥಾನ: 
                                                       ಕ್ಯಾಬಿನೆಟ್ ಸಚಿವರಾಗಿ ಬೋಸರಾಜು ಪ್ರಮಾಣ ವಚನ ಸ್ವೀಕಾರ: ಪ್ರವಾಸೋದ್ಯಮ ,ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಹಂಚಿಕೆ

 ರಾಯಚೂರು,ಮೇ.27 - ಅದೃಷ್ಟ ಖುಲಾಯಿಸಿತು ಎಂದರೆ ಯಾವ ಅಡೆತಡೆಯು ನಿಲ್ಲುವುದಿಲ್ಲವೆಂಬುದಕ್ಕೆ ಸಾಕ್ಷಿ   ಎನ್ ಎಸ್ ಬೋಸರಾಜು ರವರಿಗೆ ದೊರೆತ ಮಂತ್ರಿ ಸ್ಥಾನ .             

ರಾಜಕೀಯದಲ್ಲಿ ಹೀಗೆ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಇದಕ್ಕೆಲ್ಲ ಸಾಕ್ಷಿ ಎಂಬಂತೆ  ಪ್ರಸ್ತುತ ಎಐಸಿಸಿ ಕಾರ್ಯದರ್ಶಿ, ತೆಲಂಗಾಣ ಕಾಂಗ್ರೆಸ್  ಉಸ್ತುವಾರಿ ಆಗಿರುವ ಎನ್. ಎಸ್ ಬೋಸರಾಜು, ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ ಅವರಿಗೆ ಪ್ರವಾಸೋದ್ಯಮ , ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ನೀಡಲಾಗಿದ್ದು ಹಲವು ದಶಕಗಳ ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಲಭಿಸಿದೆ.  


ಹಿಂದುಳಿದ ವರ್ಗಕ್ಕೆ ಸೇರಿರುವ ಅವರನ್ನು ಹೈಕಮಾಂಡ್ ಅವರ ಪಕ್ಷ ನಿಷ್ಠೆ ,ಸಂಘಟನೆ ಮನಗೊಂಡು ಸಚಿವ ಸ್ಥಾನ ನೀಡಿದ್ದು ಜಿಲ್ಲೆಯಲ್ಲಿ ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಲಾಗಿದೆ.



 ಬೋಸರಾಜು ರಾಜಕೀಯ ಹೆಜ್ಜೆ ಗುರುತುಗಳು:

1972-1976 ರಾಯಚೂರು ಜಿಲ್ಲೆ, ಯುವ ಕಾಂಗ್ರೆಸ್ ಅಧ್ಯಕ್ಷ, 

1976-1980  ರಾಯಚೂರು ತಾಲೂಕು ಕಾಂಗ್ರೆಸ್ ಕಮಿಟಿ ಅಧ್ಯಕ್ಷ,

1980-1991 ರಾಯಚೂರು ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ,

1991-2002 ರಾಯಚೂರು ಕಾಂಗ್ರೆಸ್ ಸಮಿತಿ ಅಧ್ಯಕ್ಷ,

2009-2017 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, 2017-2018 ಕೆಪಿಸಿಸಿ ಉಪಾಧ್ಯಕ್ಷ, 2018 ರಲ್ಲಿ ಎಐಸಿಸಿ ಕಾರ್ಯದರ್ಶಿಯಾಗಿ ನೇಮಕ

ಶಾಸಕರಾಗಿ ಆಯ್ಕೆ: 1999 ರಲ್ಲಿ ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಶಾಸಕ, 2004ರಲ್ಲಿ ಎರಡನೇ ಬಾರಿಗೆ ಮಾನ್ವಿ ಕ್ಷೇತ್ರದ  ಶಾಸಕರಾಗಿ ಆಯ್ಕೆ ,2014 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ

ವಿವಿಧ ಹುದ್ದೆಗಳ ಜವಾಬ್ದಾರಿ:                               ಸಿಎಂ ಎಸ್.ಬಂಗಾರಪ್ಪ ಅವಧಿಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷರಾಗಿ ಜವಾಬ್ದಾರಿ,ಸಿಎಂ ವೀರಪ್ಪಮೋಯ್ಲಿ ಅವಧಿಯಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷರು,ಎಸ್.ಎಂ.ಕೃಷ್ಣಾ ಅವಧಿಯಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರು,ಧರಂ ಸಿಂಗ್ ಅವಧಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್