ಪ್ರಧಾನಿ ಮೋದಿಯವರ 9 ವರ್ಷದ ಆಡಳಿತದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ: ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ- ಅಮರೇಶ್ವರನಾಯಕ

 


ಪ್ರಧಾನಿ ಮೋದಿಯವರ 9 ವರ್ಷದ ಆಡಳಿತದಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ:

ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ-ಅಮರೇಶ್ವರನಾಯಕ

ರಾಯಚೂರು,ಮೇ.೩೦- ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅನೇಕ ಯೋಜನೆಗಳು ಬಂದಿವೆ ಎಂದು ಸಂಸದ ಅಮರೇಶ್ವರ ನಾಯಕ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ೯ ವರ್ಷದ ಆಡಳಿತದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದ ಅವರು ಬಡವರ ಪರ, ರೈತರ ಪರ ಹಾಗೂ ಮಹಿಳೆಯರ ಪರ ಮತ್ತು ಯುವಕರ ಪರ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರ ವಿಶೇಷ ಒತ್ತು ನೀಡಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ನೀಡಿದ್ದಾರೆ ಇಡಿ ದೇಶಕ್ಕೆ ಕೋವಿಡ್ ವ್ಯಾಕ್ಸಿನ್ ದೊರಕಿಸಿಕೊಟ್ಟಿದ್ದಾರೆ ಅಲ್ಲದೆ ವಿದೇಶಗಳಿಗೆ ವ್ಯಾಕ್ಸಿನ ನೀಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದರು.

ರಕ್ಷಣಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ ದೇಶದ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದಾರೆ ಭಾರತೀಯ ಸೈನಿಕರ ಮನೋಬಲ ವೃದ್ದಿಸಿದ್ದಾರೆ ಎಂದ ಅವರು ನೂತನ ಸಂಸತ್ತು ಭವನ ನಿರ್ಮಿಸಿ ಇಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.

ಬ್ರಿಟೀಷರ ಕಾಲದ ವ್ಯವಸ್ಥೆಯನ್ನು ಬದಲಿಸಿ ದೇಶಿ ಸಂಸ್ಕೃತಿಗೆ ಪ್ರಧಾನ್ಯತೆ ನೀಡುತ್ತದ್ದಾರೆಂದ ಅವರು ನೂತನ ಸಂಸತ್ತು ಭವನ ಈ ಹಿಂದಿನ ಅನುಭವ ಮಂಟಪದ ಕಲ್ಪನೆಗೆ ತಕ್ಕದ್ದಾಗಿದೆ ಬಸವಣ್ಣ ಸೇರಿದಂತೆ ನಾಡಿನ ಐತಿಹ್ಯ ನೂತನ ಸಂಸತ್ತಿನಲ್ಲಿ ಅಡಕಗೊಳಿಸಲಾಗಿದೆ ಎಂದರು.


ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಪರಿಕಲ್ಪನೆಯಡಿ ಬಡವರ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ ಎಂದ ಅವರು ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ, ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ರೈತರ ಖಾತೆಗೆ ಕೃಷಿ ಸಮ್ಮಾನ ನಿಧಿ ನೇರ ಹಣ ಜಮಾವಣೆ , ಅಗ್ಗದ ದರಗಳಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ, ರೈತರ ನೆರವಿಗೆ ಫಸಲ್ ಬಿಮಾ ಯೋಜನೆ, ಗರೀಬ್ ಕಲ್ಯಾಣ ಯೋಜನೆಯಲ್ಲಿ ಉಚಿತ ಆಹಾರ ಧಾನ್ಯ ವಿತರಣೆ, ಸಿರಿ ಧಾನ್ಯಗಳ ಉತ್ಪಾದನೆಗೆ ಪ್ರೋತ್ಸಾಹ ಹೀಗೆ ಅನೇಕ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಭಾರತ ಮಾಲಾ ಯೋಜನೆಯಡಿ ದೇಶದ ಉದ್ದಗಲಕ್ಕು ಹೆದ್ದಾರಿಗಳ ನಿರ್ಮಾಣ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ದಿ, ದೇಶದ ಎರಡನೆ ದರ್ಜೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲು ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಸ್ಥಾಪನೆ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ, ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಭದ್ರ ಮೇಲ್ದಂಡೆ ಯೋಜೆಗೆ ಹೆಚ್ಚಿನ ಆರ್ಥೀಕ ನೆರವು ನೀಡಲಾಗಿದೆ, ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸಲಾಗಿದ್ದು ಕೇಂದ್ರೀಯ ಶಾಲೆಗಳು, ಏಕಲವ್ಯ ಮಾದರಿ ಶಾಲೆಗಳು ಇನ್ನಿತರ ವಸತಿ ಶಾಲೆಗಳು, ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ ಎಂದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಜಿಲ್ಲೆಗಳಾದ ರಾಯಚೂರು, ಯಾದಗೀರಿಯ ಸಮಗ್ರ ಅಭೀವೃದ್ದಿಗೆ ಕಂಕಣ ಬದ್ದರಾಗಿದ್ದೇವೆಂದ ಅವರು ಕಲಬುರ್ಗಿಯಲ್ಲಿ ಮೆಗಾ ಟೆಕ್ಸಟೈಲ್ ಪಾರ್ಕ ಸ್ಥಾಪನೆ ಮಾಡಲಾಗುತ್ತಿದೆ ಎಂದ ಅವರು ಭಾರತ ಮಾಲಾ ಯೋಜನೆಯಡಿ ಹೆದ್ದಾರಿಗಳ ನಿರ್ಮಾಣದಿಂದ ಸುಗಮ ಸರಕು ಸಾಗಾಟಕ್ಕೆ ಅನುಕೂಲವಾಗಲಿದೆ ಎಂದರು.

ಈ ವರ್ಷದಲ್ಲಿ ಕೃಷ್ಣಾ ನದಿ ನೂತನ ಸೇತುವೆ ಕಾಮಗಾರಿ ಮುಗಿಯಲಿದೆ ಎಂದ ಅವರು ಮೆಹಬೂಬು ನಗರ ಮುನಿರಾಬಾದ್ ರೈಲ್ವೆ ಸಂಪರ್ಕ ಕಾಮಗಾರಿಗೆ ವೇಗ ನೀಡಲಾಗಿದೆ ಎಂದರು.

ನಾರಾಯಣಪೂರು ಸ್ಕಾಡಾ ಯೋಜನೆ ಮೂಲಕ ನೀರಾವರಿಗೆ ಅದ್ಯತೆ ನೀಡಲಾಗಿದೆ, ಜಲ ಜೀವನ್ ಮಿಷನ್ ಅಡಿ ಮನೆ ಮೆನೆಗೆ ಶುದ್ದ ಕುಡಿಯುವ ನೀರಿನ ಸಂಪರ್ಕಕ್ಕೆ ಸಂಕಲ್ಪಿಸಲಾಗಿದೆ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿರುವ ಆಶುದ್ದ ಕುಡಿಯುವ ನೀರು ಕುಡಿದು ಸಾವು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಲಾಗಿದ್ದು ಅದಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನಗಳಲ್ಲಿ ಗೆಲುವು ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಜನರ ತೀರ್ಪಿಗೆ ತೆಲೆ ಬಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕೆ.ಎಂ.ಪಾಟೀಲ,ಶ0ಕರರೆಡ್ಡಿ, ಬಾಬುರಾವ್, ಕೊಟ್ರೇಶಪ್ಪ ಕೋರಿ, ರಾಮಚಂದ್ರ ಕಡಗೋಲ, ಬಿ.ಗೋವಿಂದ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್