ಎಸ್. ಬಿ . ಐ ಫೌಂಡೇಶನ್ ಮತ್ತು ಎ.ಪಿ.ಡಿ ವತಿಯಿಂದ ಜೀವನಚಕ್ರ ವಿಧಾನ ಯೋಜನೆ ಉದ್ಘಾಟನೆ .
ರಾಯಚೂರು,ಮೇ.31- ಎಸ್. ಬಿ. ಐ ಫೌಂಡೇಶನ್, ಎ.ಪಿ.ಡಿ ಮತ್ತು ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಸಂಯೋಜನೆ ಇಂದ ಜೀವನಾಚಕ್ರ ವಿಧಾನ ಯೋಜನೆಯನ್ನು ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಉದ್ಘಾಟಕರಾಗಿ ಆಗಮಿಸಿರುವ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳು ಆಗಿರುವ ಲಲಿತ್ ಮೋಹನ ಎಸ್. ಬಿ. ಐ ಫೌಂಡೇಶನ್ ಮುಂಬೈ ಯೋಜನೆಯನ್ನು ಉದ್ಘಾಟನೆ ಮಾಡಿದರು. ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿಗಳಾದ ಶ್ರೀ ಶರಣ ಗೌಡ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ 20 ಜನ ವಿಶೇಷ ಚೇತನ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು15 ಜನರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು ಮತ್ತು ಇಬ್ಬರಿಗೆ ತಮ್ಮ ಜೀವನೋಪಾಯಕ್ಕಾಗಿ ಹಣಕಾಸಿನ ನೆರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಕೇಶ್ ಜಾ, ಎ.ಪಿ.ಡಿ ಸಂಸ್ಥೆಯ ಸಿ.ಇ.ಒ ಆದ ಡಾ. ಸೆಂದಿಲ್, ಸುನಿಲ್ ಕುಮಾರ್, ಜ್ಯೋತಿಕಾ, ಪ್ರೇರಣಾ ರಮೇಶ್ ಗೊಂಗಿಡಿ, ವಿ.ಆರ್. ಡೆಬ್ಲುಗಳು ಮತ್ತು ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು, ರಮೇಶ್ ಅವರು ಪ್ರಾಸ್ತಾವಿಕ ನುಡಿ ಆಡಿದರು . ಸುನೀಲ ಕುಮಾರ್ ಸ್ವಾಗತ ಕೋರಿದರು, ಚಂದ್ರಕಲಾ ವಂದಿಸಿದರು, ಧನಲಕ್ಷ್ಮಿ ನಿರೂಪಿಸಿದರು.
Comments
Post a Comment