ಮುಂಗಾರು ಪ್ರವೇಶ: ನಗರದಲ್ಲಿ ತಂಪೆರದ ಮಳೆರಾಯ.
ಮುಂಗಾರು ಪ್ರವೇಶ: ನಗರದಲ್ಲಿ ತಂಪೆರದ ಮಳೆರಾಯ. ರಾಯಚೂರು ,ಮೇ.31- ನಗರದಲ್ಲಿ ಮುಂಗಾರು ಮಳೆ ಪ್ರವೇಶದಿಂದ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರದ ವಾತಾವರಣ ನಿರ್ಮಾಣವಾಗಿದೆ.
ಕಳೆದ ಒಂದು ತಿಂಗಳಿನಿಂದ ಮಳೆಯಾಗದೆ ಬೇಸಿಗೆ ಬೇಗೆಯಿಂದ ಬಳಲುತ್ತಿದ್ದ ಜನ, ಜಾನುವಾರುಗಳಿಗೆ ನಿಟ್ಟುಸಿರು ಬಿಡುವಂತಾಗಿದೆ. ಭಾರಿ ಗುಡುಗು, ಸಿಡಿಲು, ಗಾಳಿಯಿಂದ ಕೂಡಿದ್ದು ಮಳೆ ಒಂದೆಡೆ ತಂಪೆರೆಯುವ ಮತ್ತೊಂದೆಡೆ ರಸ್ತೆಗಳಲ್ಲಿ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸಕಾಲಕ್ಕೆ ಮುಂಗಾರು ಪ್ರವೇಶದಿಂದ ರೈತರಿಗೆ ಆಶಾದಾಯಕವಾಗಿದ್ದು ಕೃಷಿ ಚಟುವಟಿಕೆ ಗರಿಗೆದರಲಿದೆ.
Comments
Post a Comment