ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಅಗತ್ಯ
ಬಲಿಷ್ಟ ಪ್ರಜಾಪ್ರಭುತ್ವಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ ತಿದ್ದುಪಡಿ ಅಗತ್ಯ ದೇಶ ಸ್ವಾತಂತ್ರö್ಯಗೊಂಡು ೭೫ ವರ್ಷಗಳು ಸಂದಿವೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಸದಾಶಯಗಳ ‘ನಮ್ಮ ಸಂವಿಧಾನ’ವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಅಳವಡಿಸಿಕೊಂಡು ಇಲ್ಲಿಗೆ ೭೩ ವರ್ಷಗಳು ಕಳೆದಿವೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವೈಜ್ಞಾನಿಕವಾಗಿ
ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಜಗತ್ತಿನಲ್ಲಿಯೇ ಭಾರತವು ಒಂದು ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟçವಾಗಿ
ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ. ಆದರೆ, ಇನ್ನೂ ಪರಿಣಾಮಕಾರಿಯಾಗಿ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ.
ವೈವಿಧ್ಯಮಯವಾಗಿರುವ ಭಾರತ ದೇಶ ಅನೇಕ ವೈಶಿಷ್ಠತೆಗಳಿಂದ ಜಗತ್ತಿನ ಗಮನವನ್ನು ಸೂಜಿಗಲ್ಲಿನಂತೆ
ಸೆಳೆಯುತ್ತಿದೆ. ಸ್ವಾತಂತ್ರö್ಯ ಪೂರ್ವದಲ್ಲಿ ಭಾರತದ ಹಲವಾರು ಪ್ರದೇಶಗಳನ್ನು ಅನೇಕ ರಾಜರು ವಂಶಪಾರಂಪರ್ಯವಾಗಿ
ಆಳ್ವಿಕೆ ಮಾಡುತ್ತಾ ಬಂದಿದ್ದರು. ಅವರಲ್ಲಿ ಮೊಘಲರು, ಡಚ್ಚರು, ಪೋರ್ಚುಗೀಸರು ಮತ್ತು ಬ್ರೀಟಿಷರು ಇದ್ದರು. ಆಗ ಈ ದೇಶದಲ್ಲಿ ಏಕಸ್ವರೂಪದ ಸರ್ಕಾರವಾಗಲಿ, ಆಳ್ವಿಕೆಗಳಾಗಲಿ ಇರಲಿಲ್ಲ. ಸ್ವಾತಂತ್ರö್ಯದ ಸಂಭ್ರಮದಲ್ಲಿರುವಾಗಲೇ ದೇಶದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣೀಕ, ರಾಜಕೀಯ, ಅಸ್ಪçಶ್ಯತೆ, ಕಂದಾಚಾರ, ಮೌಢ್ಯಗಳು, ಅಸಮಾನತೆಗಳು
ಅಂದಿನ ರಾಜಕೀಯ ನೇತಾರರಿಗೆ ಬಹು ದೊಡ್ಡ ಸವಾಲಾಗಿದ್ದವು. ಆಗ ದೇಶದಲ್ಲಿ ಸೂರ್ಯ ಪ್ರಭೆಯಂತೆ ಉದಯಿಸಿದ ಶಕ್ತಿ, ಯುಕ್ತಿ, ಬಲಗಳಲ್ಲಿ ಭೀಮನಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪವಿತ್ರ ಗ್ರಂಥವಾದ ಸಂವಿಧಾನವನ್ನು ರಚಿಸಿದ್ದು ಭಾರತೀಯರೆಂದು ಮರೆಯಬಾರದು. ಅವರು ಜನರಿಗೆ ಮೂಲಭೂತ ಹಕ್ಕುಗಳನ್ನು, ಕರ್ತವ್ಯಗಳನ್ನು, ರಾಜ ನಿರ್ದೇಶಕ
ತತ್ವಗಳ ಅಡಿಯಲ್ಲಿ ಬರೆದರು. ಇದರಿಂದಾಗಿ ಕಳೆದ ೭೩ ವರ್ಷಗಳ ಅವಧಿಯಲ್ಲಿ ಶೇ. ೮೦ ರಷ್ಟು ಅವ್ಯವಸ್ಥೆಗಳು
ಸುವ್ಯವಸ್ಥೆಯಾಗಿ ಪರಿವರ್ತನೆಯಾಗಿವೆ. ಇವು ಕಾನೂನು ವ್ಯವಸ್ಥೆಯಲ್ಲಿನ ಬಹುದೊಡ್ಡ ಸಾಮಾಜಿಕ ಕ್ರಾಂತಿಗಳಾದವು. ಈ
ದೇಶದಲ್ಲಿ ಸತ್ಯ, ಅಹಿಂಸೆ, ಶಾಂತಿ ಸಂದೇಶಗಳನ್ನು ಸಾರಿದ ಗೌತಮ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ೧೨ನೇ
ಶತಮಾನದ ವಿಶ್ವಗುರು ಬಸವಣ್ಣ ಅವರು ಸಾಮಾಜಿಕ ತಳಹದಿಯ ಮೇಲೆ ಬಹುದೊಡ್ಡ ಕ್ರಾಂತಿಯನ್ನು ಮಾಡಿದರು.
ಆದರೆ ಅವು ಆಗಿನ ವ್ಯವಸ್ಥೆಗೆ ಮಾತ್ರ ಸೈ ಎನಿಸಿಕೊಂಡವು. ಏಕೆಂದರೆ ಆ ಕ್ರಾಂತಿ ಪುರುಷರ ವಿಚಾರಧಾರೆಗಳಿಗೆ ಕಾನೂನುಗಳ ಬಲವಿರಲಿಲ್ಲ. ಹೀಗಾಗಿ ಮತ್ತೇ ಮತ್ತೇ ಅಂಬೇಡ್ಕರ್ ನಮಗೆಲ್ಲಾ ನೆನಪಾಗುತ್ತಾರೆ. ಅವರ ನೇತೃತ್ವದಲ್ಲಿ ಉಳಿದೆಲ್ಲಾ ಸದಸ್ಯರು ಭವ್ಯ ಭಾರತದ ಭವಿಷ್ಯದ ನಿರ್ಮಾಣಕ್ಕಾಗಿ ರಚಿಸಿದ ಸಂವಿಧಾನ ದೇಶವನ್ನು ಈಗಲೂ ಅಭಿವೃದ್ಧಿ
ಪಥದತ್ತ ಕೊಂಡೊಯ್ಯುತ್ತಿರುವುದು ಎಲ್ಲರಿಗೂ ವೇದ್ಯವಾಗಿದೆ.
ದಾಸ ಸಾಹಿತ್ಯದ ಖ್ಯಾತ ದಿಗ್ದರ್ಶಕರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಹೇಳುವಂತೆ
‘ಮಹತ್ತನ್ನು ಚಿಂತಿಸು, ಬೃಹತ್ತನ್ನು ಸಾಧಿಸು’ ಎಂಬ ನುಡಿಗಟ್ಟಿನಂತೆ ಭಾರತದಲ್ಲಿನ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ
ಯೋಚಿಸಿ ಸಾಧಿಸಬೇಕಾಗಿದೆ. ಇದರಲ್ಲಿ ಮುಖ್ಯವಾಗಿ ಜನ ಪ್ರತಿನಿಧಿಗಳು ಈಚಿನ ದಿನಮಾನಗಳಲ್ಲಿ ಜಾತಿ-ಮತ,
ಪಂಥ, ಧರ್ಮ, ಹಣ-ತೋಳ್ಬಲಗಳ ಮಾನದಂಡಗಳನ್ನಿಟ್ಟುಕೊಂಡು ಚುನಾವಣೆಗಳನ್ನು ನಡೆಸುತ್ತಿದ್ದಾರೆ. ಚುನಾವಣೆಗೆ
ನಿಲ್ಲುವಾಗ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಮೀರಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ಹುಸಿ
ನಂಬಿಸಿ ಆಯ್ಕೆಯಾಗುತ್ತಿದ್ದಾರೆ. ಇದು ಒಂದು ಹಂತದಲ್ಲಿ ಪ್ರಜಾ ಪ್ರಭುತ್ವದ ಅಣಕ, ವಿಕೃತ ರೂಪವಾಗಿದೆ. ಹೀಗೆಯೇ
ಮುಂದುವರೆದರೆ ದೇಶದ ಜನ ವ್ಯವಸ್ಥೆಯ ಮೇಲಿನ ನಂಬಿಕೆಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಈ
ಪರಿಸ್ಥಿತಿಯಿಂದ ಹೊರಬರಬೇಕೆಂದರೆ, ಬಲಿಷ್ಠ ಪಾರದರ್ಶಕ ಪ್ರಜಾಪ್ರಭುತ್ವ ಉಳಿಯಬೇಕೆಂದರೆ ‘ಪ್ರಜಾಪ್ರತಿನಿಧಿ ಕಾಯ್ದೆ’
ತಿದ್ದುಪಡಿ ಅಗತ್ಯವಾಗಿದೆ.
ಸುಳ್ಳು ಆಶ್ವಾಸನೆಗಳನ್ನು, ಭರವಸೆಗಳನ್ನು ನೀಡಿ ಚುನಾಯಿತರಾದ ಜನಪ್ರತಿನಿಧಿಗಳಿಂದ ಅಭಿವೃದ್ಧಿಯ ವೇಗ
ಕಡಿಮೆಯಾಗುತ್ತಿದ್ದು, ಅವರನ್ನು ನಿಯಂತ್ರಿಸಲು ಪ್ರಸ್ತುತ ಇರುವ ಕಾನೂನುಗಳಲ್ಲಿ ಯಾವುದೇ ಅಸ್ತçಗಳಿಲ್ಲ. ಅವರು ತಾವು
ನೀಡಿದ ಭರವಸೆಗಳನ್ನು ಈಡೇರಿಸದಿದ್ದಾಗ ಅವರನ್ನು ಪ್ರಶ್ನಿಸಲು ಸಹ ಕಾನೂನಿನಲ್ಲಿ ಯಾವುದೇ ನಿಯಮಗಳು ಇಲ್ಲ. ಆದ್ದರಿಂದ ಇವರನ್ನು ನಿಯಂತ್ರಿಸಲು, ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ‘ಪ್ರಜಾಪ್ರತಿನಿಧಿ ಕಾಯ್ದೆ’ ಗೆ ಈ ಕೆಳಗಿನ
ತಿದ್ದುಪಡಿಗಳು ಅವಶ್ಯಕವೆಂಬುದು ನನ್ನ ಭಾವನೆಯಾಗಿದೆ.
ತಿದ್ದುಪಡಿ ಮಾಡಬೇಕಾದ ಅಂಶಗಳು :
೧. ನಮ್ಮ ದೇಶದ ಜನ ಪ್ರತಿನಿಧಿಗಳು ನಮ್ಮ ದೇಶದಲ್ಲಿ ನಡೆಯುವ ಯಾವುದೇ ಚುನಾವಣೆಗೆ ಸ್ಪರ್ಧಿಸುವಾಗ ಸುಳ್ಳು ಆಶ್ವಾಸನೆಗಳ ಮಹಾಪೂರವನ್ನು ಹರಿಸುತ್ತಾರೆ. ಆದರೆ ಆ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವೆ
ಅಥವಾ ಇಲ್ಲವೆ ಅನ್ನುವ ಪ್ರಭುದ್ಧತೆ ನಮ್ಮ ಬಹಳಷ್ಟು ನಾಗರಿಕರಿಗೆ ಗೊತ್ತಿಲ್ಲ. ಹಾಗೂ ಆಶ್ವಾಸನೆ ನೀಡುವಂತವವರಿಗೂ ತಿಳಿದಿಲ್ಲ. ಕಾರಣ ಈ ಪರಿಸ್ಥಿತಿಯಿಂದ ಹೊರ ಬರಲು ಪ್ರತಿ ಚುನಾವಣೆಯಲ್ಲಿ
ಸ್ಪರ್ಧಿಸುವಾಗ ನಾಮಪತ್ರದೊಂದಿಗೆ ಅಭ್ಯರ್ಥಿಗಳು ತಾವು ನೀಡುವ ಆಶ್ವಾಸನೆಗಳ ಕುರಿತು ತಮ್ಮ ‘ಅಫಿಡವಿಟ್ (ಪ್ರಮಾಣಪತ್ರ) ಕಡ್ಡಾಯವಾಗಿ ನೀಡಬೇಕು’. ಎಂಬ ಬಗ್ಗೆಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.
೨. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಹೇಳಿರುವ ಆಶ್ವಾಸನೆಗಳನ್ನು ಸಹ ಈಡೇರಿಸಲು ಆರ್ಥಿಕ ಮತ್ತು ನೈಸರ್ಗಿಕ ಸಂಪನ್ಮೂಲದ ಕ್ರೋಢಿಕರಣದ ಬಗ್ಗೆ ಮಾಹಿತಿಯನ್ನು ‘ಪಕ್ಷದ ಅಧ್ಯಕ್ಷರು ಪ್ರಮಾಣ ಪತ್ರದ ಮೂಲಕ ಚುನಾವಣಾ ಆಯೋಗಕ್ಕೆ ನೀಡಬೇಕು ಮತ್ತು ಸಾರ್ವಜನಿಕ ಪ್ರಕಟಣೆಯನ್ನು ಮಾಡಬೇಕು’ ಎಂಬ ತಿದ್ದುಪಡಿ ಸಹ ಅಗತ್ಯ.
೩. ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೊ ‘ಆ ಪಕ್ಷದ ಅಧ್ಯಕ್ಷರು ಪ್ರಣಾಳಿಕೆಯ ಶೇ.೫೦ ಅಂಶಗಳನ್ನು ತಮ್ಮ ಪಕ್ಷ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಈಡೇರಿಸಿರಬೇಕು’. ಅದೇ ರೀತಿ ‘ಪ್ರಜಾಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ನೀಡಿರುವಂತಹ ಆಶ್ವಾಸನೆಗಳ ಪೈಕಿ ಶೇ. ೫೦ ರಷ್ಟು ನಾಲ್ಕು ವರ್ಷಗಳಲ್ಲಿ ಈಡೇರಿಸತಕ್ಕದ್ದು’.
ಒಂದು ವೇಳೆ ಈಡೇರಿಸದಿದ್ದಲ್ಲಿ ಅಂತಹ ಜನಪ್ರತಿನಿಧಿಯನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅನರ್ಹನೆಂದು ಘೋಷಿಸುವಂತಹ ತಿದ್ದುಪಡಿಯ ಅವಶ್ಯಕತೆ ಇದೆ.
೪. ಅದೇ ರೀತಿ ‘ರಾಜಕೀಯ ಪಕ್ಷಗಳ ಅಧ್ಯಕ್ಷರು ಸಹ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹನಾಗತಕ್ಕದ್ದು ಮತ್ತು ದಂಡನೆಗೆ ಗುರಿಯಾಗತಕ್ಕದ್ದು’ ಎಂಬ ತಿದ್ದುಪಡಿ ಸಹ ಅವಶ್ಯಕವಿದೆ. ಇಂತಹ ತಿದ್ದುಪಡಿಗಳು ತಂದಲ್ಲಿ ಮಾತ್ರ ರಾಜಕೀಯ ಪಕ್ಷದವರು ಮತ್ತು ಜನಪ್ರತಿನಿಧಿಗಳಾಗ ಬಯಸುವವರು
ಸುಳ್ಳು ಭರವಸೆಯನ್ನು ನೀಡುವುದನ್ನು ನಿಲ್ಲಿಸುತ್ತಾರೆ. ತಾವು ಮಾಡಬಹುದಾದ ಕೆಲಸಗಳ ಬಗ್ಗೆ ಮಾತ್ರ
ಆಶ್ವಾಸನೆ ನೀಡಿ ಅರ್ಹತೆಯ ಮೇಲೆ ಆಯ್ಕೆಯಾಗುತ್ತಾರೆ.
೫. ಪ್ರತಿ ಶಾಸಕ ಮತ್ತು ಸಂಸದ ಚುನಾವಣೆ ನಡೆದ ನಾಲ್ಕು ವರ್ಷಗಳ ನಂತರ ತಾನು ನೀಡಿದ ಆಶ್ವಾಸನೆಗಳಲ್ಲಿ
ಶೇ. ೫೦ ರಷ್ಟಾದರು ನೆರವೇರಿಸದಿದ್ದ ಪಕ್ಷದಲ್ಲಿ ಆ ಕ್ಷೇತ್ರದ ಸಾಮಾನ್ಯ ಪ್ರಜೆಯು ಅದನ್ನು ಪ್ರಶ್ನಿಸುವ ಅಧಿಕಾರ ನೀಡತಕ್ಕದ್ದು. ಆ ಪ್ರಜೆ ದೂರು ನೀಡುವುದಕ್ಕಾಗಿ ಸರ್ಕಾರವು ಎರಡು ಅಥವಾ ಮೂರು ಜಿಲ್ಲೆಗಳು ನಡುವೆ ಒಂದು ವಿಶೇಷ ಜಿಲ್ಲಾ ನ್ಯಾಯಧೀಶರ ನ್ಯಾಯಾಲಯವನ್ನು ಸ್ಥಾಪಿಸಿ ಆ ನ್ಯಾಯಾಲಯಕ್ಕೆ ಜನಪ್ರತಿನಿಧಿಗಳ ವಿರುದ್ಧ ಅಥವಾ ರಾಜಕೀಯ ಪಕ್ಷಗಳ ವಿರುದ್ಧ ಸಾರ್ವಜನಿಕರಿಗೆ ದೂರು ನೀಡುವ ಅಧಿಕಾರವನ್ನು ನೀಡಬೇಕು. ದೂರುಗಳನ್ನು ನೀಡಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲವಕಾಶ ನೀಡಬೇಕು. ನಂತರ
ದೂರುಗಳನ್ನು ಕೇವಲ ಪ್ರಮಾಣ ಪತ್ರದಲ್ಲಿ ನೀಡಿದ ಭರವಸೆಗಳ ಕುರಿತಾಗಿ ಪರಿಗಣಿಸಿ ಆ ವಿಷಯವಾಗಿ
ನ್ಯಾಯಧೀಶರು ಸಂಬoಧ ಪಟ್ಟ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಇವರಿಗೆ ನಿರ್ದಿಷ್ಟ ಜನ ಪ್ರತಿನಿಧಿ ತಾನು ಕೊಟ್ಟ ಆಶ್ವಾಸನೆ ಪೂರೈಸಿದ ಬಗ್ಗೆ ಪರಿಶೀಲನಾ ವರದಿ ತರಸಿಕೊಳ್ಳತಕ್ಕದ್ದು.
ವರದಿ ಕೊಡಲು ಒಂದು ತಿಂಗಳು ಮಾತ್ರ ಕಾಲವಕಾಶ ನೀಡತಕ್ಕದ್ದು. ನಂತರ ವರದಿಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ಅವಶ್ಯವಿದ್ದಲ್ಲಿ ಜನಪ್ರತಿನಿಧಿಗೆ ತಿಳುವಳಿಕೆ ನೋಟಿಸು ನೀಡಿ ಸಮಜಾಯಿಸಿ ಕೇಳತಕ್ಕದ್ದು.
ನಂತರ ವಿಚಾರಣೆ ಮಾಡಿ ‘ಅರ್ಹ ಅಥವಾ ಅನರ್ಹ’ ಎಂದು ಆರು ತಿಂಗಳೊಳಗೆ ತೀರ್ಪು ನೀಡಬೇಕು. ಆತೀರ್ಪಿನ ಮೇಲೆ ಸರ್ವೊಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಬೇಕು. ಮೇಲ್ಮನವಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಿ ಇತ್ಯರ್ಥ ಮಾಡಲೇಬೇಕು. ಈ ಪ್ರಕ್ರೀಯೆ ನಾಲ್ಕು ವರ್ಷ ಒಂಬತ್ತು ತಿಂಗಳಗಳಲ್ಲಿ ಮುಕ್ತಾಯವಾಗತಕ್ಕದ್ದು. ಈ ಅವಧಿಯಲ್ಲಿ ಅನರ್ಹಗೊಂಡ ಜನಪ್ರತಿನಿಧಿ ಮುಂದಿನ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ ಎಂದು ತಿದ್ದುಪಡಿಗಳನ್ನು ಕಾಯ್ದೆಗೆತರುವುದು ಅವಶ್ಯಕ.
ಭಾರತದಲ್ಲಿ ಮತದಾರರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುವ ಅಧಿಕಾರವನ್ನು ಕೇವಲ ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಅವರ ಅರ್ಹತೆಯನ್ನು ತೀರ್ಮಾನಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಾರೆ.
ಆದರೆ ಜನಪ್ರತಿನಿಧಿಯಿಂದ ಮೋಸವಾದಾಗ ಅದನ್ನು ಪ್ರಶ್ನಿಸುವ ಹಕ್ಕನ್ನು ಪ್ರಜೆಗಳು ಹೊಂದಿರುವುದಿಲ್ಲ. ಪ್ರಶ್ನಿಸುವ ಹಕ್ಕನ್ನು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಮೇಲೆ ಹೇಳಿದ ತಿದ್ದುಪಡಿಗಳನ್ನು ಅನುಷ್ಠಾನಕ್ಕೆ ತಂದರೆ, ದೇಶದ ಪ್ರಜಾಪ್ರಭುತ್ವದ
ವ್ಯವಸ್ಥೆ ತನ್ನಿಂದ ತಾನೆ ಬಲಿಷ್ಟ ಹಾಗೂ ಪಾರದರ್ಶಕವಾಗುತ್ತ ಹೋಗುತ್ತದೆ. ಈ ಹಿಂದೆಯು ಸಹ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರಿಸಿಕೊಳ್ಳುವ ಹಕ್ಕಿನ ಬಗ್ಗೆ ಅನೇಕ ರಾಜಕೀಯ ನೇತಾರರು ಪ್ರತಿಪಾದಿಸುತ್ತ ಬಂದಿದ್ದರು. ಆದರೇ ಈ ದೇಶದ
ಜನರ ಆರ್ಥಿಕ, ಶೈಕ್ಷಣಿಕ ಹಾಗೂ ಜಾತಿ ವ್ಯವಸೆÀ್ಥಯನ್ನು ಗಮನಿಸಿದಾಗ ಅದರ ಉಪಯೋಗಕ್ಕಿಂತ ದುರುಪಯೋಗವೆ
ಹೆಚ್ಚಾಗಿದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮರೆತು ಈ
ದೇಶದ ಮುಂದಿನ ಭವಿಷ್ಯದ ಬಗ್ಗೆ ಕೂಲಂಕೂಷವಾಗಿ ಪರಿಶೀಲಿಸಿ, ರಾಜಕೀಯ, ಕಾನೂನು, ಸಂವಿಧಾನ ತಜ್ಞರೊಂದಿಗೆ
ಸುದೀರ್ಘವಾಗಿ ಸಕಾರಾತ್ಮಕವಾಗಿ ಚರ್ಚಿಸಿ ಸೂಕ್ತ ತಿದ್ದುಪಡಿ ತರಬೇಕೆಂಬುದು ನನ್ನ ಆಶಯವಾಗಿದೆ. ನನಗೆ ತೋಚಿದ
ವಿಚಾರಗಳನ್ನು ಮುಕ್ತವಾಗಿ, ಉತ್ಸುಕತೆಯಿಂದ ಹಂಚಿಕೊಂಡಿದ್ದೇನೆ. ಈ ಕುರಿತು ನಾಡಿನ ಪ್ರಜ್ಞಾವಂತ ಪ್ರಜೆಗಳು,
ಬುದ್ಧಿಜೀವಿಗಳು, ಕಾನೂನು ತಜ್ಞರು, ತಿದ್ದುಪಡಿಯ ಸಾಧಕ-ಬಾಧಕಗಳನ್ನು ಅವಲೋಕಿಸಿ ಸೂಕ್ತ ನಿರ್ಣಯ ಕೈಗೊಂಡು
ಪ್ರಜಾಪ್ರಭುತ್ವದ ಮೌಲ್ಯ, ಆಶಯಗಳನ್ನು ಎತ್ತಿ ಹಿಡಿಯಲು ಮುಂದಾಗಬೇಕೆoಬುದು ನನ್ನ ಅಭಿಪ್ಸೆ. ಈ ವಿಚಾರವಾಗಿ ಚರ್ಚೆಗಳು ನಡೆದರೆ ಇನ್ನಷ್ಟು ಚುನಾವಣೆಗಳಲ್ಲಿನ ಸುಳ್ಳು ಆಶ್ವಾಸನೆ, ಭರವಸೆಗಳಿಗೆ ಕಾನೂನಿನ ಅಂಕೆ ಹಾಕಲು ಸಾಧ್ಯ. ನೀವೆನಂತಿರಿ.......
-ಲೇಖಕರು: ಶಶಿಧರಗೌಡ ಕೇಲೂರು, ವಕೀಲರು ರಾಯಚೂರು. ಮೋ .9448633726
Comments
Post a Comment