ಪ್ರಜಾವಾಣಿ ಜಿಲ್ಲಾ ವರದಿಗಾರರಿಗೆ ಬೀಳ್ಕೊಡುಗೆ ಸಮಾರಂಭ: ಜಿಲ್ಲೆಯ ಜನರು ವಿಶಾಲ ಮನೋಭಾವದವರು- ನಾಗರಾಜ ಚಿನಗುಂಡಿ

 


ಪ್ರಜಾವಾಣಿ ಜಿಲ್ಲಾ ವರದಿಗಾರರಿಗೆ ಬೀಳ್ಕೊಡುಗೆ ಸಮಾರಂಭ:

ಜಿಲ್ಲೆಯ ಜನರು ವಿಶಾಲ ಮನೋಭಾವದವರು- ನಾಗರಾಜ ಚಿನಗುಂಡಿ

ರಾಯಚೂರು,ಮೇ.೨೬-ಜಿಲ್ಲೆಯ ಜನರು ವಿಶಾಲ ಮನೋಭಾವದವರು ಎಂದು ಪ್ರಜಾವಾಣಿ ನಿರ್ಗಮಿತ ಜಿಲ್ಲಾ ವರದಿಗಾರರಾದ ನಾಗರಾಜ ಚಿನಗುಂಡಿ ಹೇಳಿದರು.

ಅವರಿಂದು ನಗರದ ಪತ್ರಿಕಾ ಭವನದಲ್ಲಿ ರಾಯಚೂರು ರಿಪೋರ‍್ಟರ‍್ಸ್ ಗಿಲ್ಡ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡ ಬೀಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಾನು ಸುಮಾರು ೬ ವರ್ಷ ಅವಧಿ ಸೇವೆ ಸಲ್ಲಿಸಿದ್ದು ಇಲ್ಲಿನ ಜನರು ಅತ್ಯಂತ ಸ್ನೇಹ ಶೀಲರು ,ಹೃದಯ ವೈಶಾಲ್ಯ ಉಳ್ಳವರು ಆಗಿದ್ದು ಪತ್ರಕರ್ತರಿಗೆ ಗೌರವ ನೀಡುವವರಾಗಿದ್ದಾರೆ ಎಂದ ಅವರು ಹತ್ತು ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಇಲ್ಲಿನ ಜನರ ಸಹಕಾರ ಮುಖ್ಯವಾಗಿತ್ತು ಎಂದರು.

ಅಧಿಕಾರಿಗಳು ಸಹ ಸುದ್ದಿ ಮಾಡಲು ಮಾಹಿತಿ ಕೇಳಿದಾಗ ಮಾಹಿತಿ ನೀಡಿ ಸಮಸ್ಯೆಗಳ ನಿವಾರಣೆಗೆ ಸಹಕರಿಸಿದ್ದರು ಎಂದ ಅವರು ಇಲ್ಲಿಂದ ಬೇರೆಡೆ ವರ್ಗಾವಣೆಯಾಗಿ ಹೋಗುವುದು ಹೃದಯ ಭಾರವಾಗಿದೆ ಇಲ್ಲಿಯ ಜನರ ಸರಳತೆ ಬಗ್ಗೆ ಕೊಂಡಾಡಿದರು.


ಪತ್ರಕರ್ತ ಮಿತ್ರರು ಸಹ ನನಗೆ ಅತ್ಯಂತ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದ ಅವರು ಸಹದ್ಯೋಗಿಗಳ ಒಡನಾಟ ಮೆಲಕು ಹಾಕಿದರು.

ರಾಯಚೂರು ರಿಪೋರ‍್ಟ್ರ‍್ಸ್ ಗಿಲ್ಡ್ ಅಧ್ಯಕ್ಷ ಚೆನ್ನಬಸವಣ್ಣ ಮಾತನಾಡಿ ಪತ್ರಕರ್ತರ ಕೆಲಸ ಅನಿಶ್ಚಿತತೆಯಿಂದ ಕೂಡಿದ ವೃತ್ತಿಯಾಗಿದೆ ಪ್ರಮಾಣಿಕ ಪತ್ರಕರ್ತರಾದವರು ಸಾಲಗಾರರಾಗಿರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಇಂದಿನ ದುಬಾರಿ ಕಾಲದಲ್ಲಿ ಸಂಸಾರ ತೂಗಿಸುವುದು ಜಿತೆಗೆ ಮಕ್ಕಳ ವಿದ್ಯಾಭ್ಯಾಸ ವರ್ಷದಿಂದ ವರ್ಷಕ್ಕೆ ಶುಲ್ಕ ಹೆಚ್ಚಳ ಇನ್ನಿತರ ಆರ್ಥಿಕ ಹೊರೆಯಿಂದ ಪತ್ರಕರ್ತರು ಜರ್ಜರಿತರಗಬೇಕಾಗುತ್ತದೆ ಎಂದ ಅವರು ದಿಡೀರನೆ ಪತ್ರಕರ್ತರನ್ನು ವರ್ಗಾವಣೆ ಮಾಡಿದರೆ ಅವರಿಗೆ ಸಂಸ್ಥೆ  ಸೂಕ್ತ ವೇತನ ನೀಡಬೇಕೆಂದು ಹೇಳಿದರು.


ರಾಯಚೂರು ರಿಪೋರ‍್ಟ್ರ‍್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯ ಜಾಗಟಗಲ್ ಮಾತನಾಡಿ ಪತ್ರಕರ್ತ ವೃತ್ತಿ ಅತ್ಯಂತ ಜವಾಬ್ದಾರಿಯುತ ವೃತ್ತಿ ಅದನ್ನು ನಾಗರಾಜ ಚಿನಗುಂಡಿ ಪ್ರಮಾಣಿಕವಾಗಿ ಮಾಡಿ ಎಲ್ಲರೊಂದಿಗೆ ಬೆರೆತು ಉತ್ತಮವಾಗಿ ಕಾರ್ಯನಿರ್ವಹಿಸಿ ಬೆರೆಡೆ ವರ್ಗಾವಣೆಗೊಂಡು ಹೋಗುತ್ತಿದ್ದು ಅವರಿಗೆ ಶುಭ ಕೋರಿದರು.


ಹಿರಿಯ ಪತ್ರಕರ್ತ ದತ್ತು ಸರ್ಕಿಲ್ ಮಾತನಾಡಿ ನಾಗರಾಜ ಚಿನಗುಂಡಿ ವೃತ್ತಿ ಪರತೆಯನ್ನು ಅತ್ಯಂತ ಉತ್ತಮವಾಗಿ ನಿಭಾಯಿಸಿ ಜಿಲ್ಲೆಯ ಸಮಸ್ಯೆಗಳ ಮೇಲೆ ಬೆಳಕು ಚಿಲ್ಲಿದ್ದರು ಎಂದ ಅವರಿಗೆ ಶುಭ ಹಾರೈಸಿದರು.

ಇನ್ನೋರ್ವ ಹಿರಿಯ ಪರ್ತಕರ್ತ ಕೆಯುಡ್ಬೂ÷್ಲಜೆ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ ಮಾತನಾಡಿ ಜಿಲ್ಲೆಗೆ ಆಗಮಿಸಿದ ವೇಳೆ ನಾಗರಾಜ ಚಿನಗುಂಡಿ ಬಗ್ಗೆ ಒಡನಾಟ ಹೆಚ್ಚಿತು ಅವರು ಅತ್ಯಂತ ಸಹೃದಯಿ ಪತ್ರಕರ್ತ ತಮ್ಮ ಕೆಲಸವನ್ನು ಚಾಕಚಕ್ಯತೆಯಿಂದ ಮಾಡುತ್ತಿದ್ದರು ಎಲ್ಲರೊಂದಿಗೆ ಸ್ನೇಹಯುತವಾಗಿ ನಡೆದುಕೊಳ್ಳುತ್ತಿದ್ದರು ಎಂದರು.


ಪತ್ರಕರ್ತ ಜಯಕುಮಾರ್ ದೇಸಾಯಿ ಕಾಡ್ಲೂರು ಮಾತನಾಡಿ ನಾಗರಾಜ ಚಿನಗುಂಡಿಯವರು ಹಿರಿಯ ಕಿರಿಯ ಪತ್ರಕರ್ತರು ಎಂಬ ಬೇಧ ಭಾವ ಮಾಡದೆ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ಸರ್ಕಾರದ ಯೋಜನೆಗಳ ಮೇಲೆ ಬೆಳಕು ಚೆಲ್ಲಿ ತಮ್ಮ ಬರವಣಿಗೆ ಮೂಲಕ ಅವುಗಳ ಜಾರಿಗೆ ಅವಿರತ ಶ್ರಮ ವಹಿಸುತ್ತಿದ್ದರು ಭಾರತ ಮಾಲಾ ಸೇರಿದಂತೆ ಜಿಲ್ಲೆಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು ಇನ್ನಿತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದರು ಎಂದರು.


ಪತ್ರಕರ್ತರಾದ ಭೀಮಸೇನಾಚಾರ್ ಕಲ್ಲೂರು, ವಿಶ್ವನಾಥ ಹೂಗಾರ್, ಜಗನ್ನಾಥ ಪೂಜಾರಿ, ಬಾವಾಸ್ ಅಲಿ, ರಾಚಯ್ಯ ಸ್ವಾಮಿ, ಈರಣ್ಣ ಕರ್ಲಿ ಸೇರಿದಂತೆ ಅನೇಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪತ್ರಕರ್ತ ಈರಣ್ಣ ಕರ್ಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವೇದಿಕೆ ಮೇಲೆ ಕೆಯುಡ್ಬೂ÷್ಲಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಶಾ ಹಟ್ಟಿ ಇದ್ದರು.


ಕಾರ್ಯಕ್ರಮದಲ್ಲಿ  ಉಭಯ ಪರ್ತಕರ್ತ ಸಂಘಟನೆಗಳ ಪದಾಧಿಕಾರಿಗಳು, ಹಿರಿಯ ಕಿರಿಯ ಪತ್ರಕರ್ತರು, ಛಾಯಾಗ್ರಹಕರು, ಕ್ಯಾಮರಾಮೆನ್‌ಗಳು ಇದ್ದರು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ