ಸುಳ್ಳು ದೂರಿನ ಬಗ್ಗೆ ಕಿವಿಗೊಡಬೇಡಿ: ಬೋಸರಾಜುಗೆ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತೇವೆ- ನರಸಿಂಹಲು ಮಾಡಗಿರಿ

 


ಸುಳ್ಳು ದೂರಿನ ಬಗ್ಗೆ ಕಿವಿಗೊಡಬೇಡಿ:

ಬೋಸರಾಜುಗೆ ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತೇವೆ-ನರಸಿಂಹಲು ಮಾಡಗಿರಿ

ರಾಯಚೂರು,ಮೇ.೨೬-ನೂತನ ಮಂತ್ರಿ ಮಂಡಲ ವಿಸ್ತರಣೆ ವೇಳೆ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಕಾರ್ಯದರ್ಶಿಗಳಾದ ಎನ.ಎಸ್.ಬೋಸರಾಜರವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡರಾದ ನರಸಿಂಹಲು ಮಾಡಗಿರಿ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ೪೫ ವರ್ಷಗಳ ಸುಧೀರ್ಘ ರಾಜಕಾರಣದಲ್ಲಿರುವ ಬೋಸರಾಜುರವರಿಗೆ ಹೈಕಮಾಂಡ್ ಮನ್ನಣೆ ನೀಡಿ ಸಚಿವ ಸ್ಥಾನ ನೀಡಬೇಕೆಂದ ಅವರು ಮಾನ್ವಿ ಕ್ಷೇತ್ರದಿಂದ ಎರೆಡು ಬಾರಿ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸದ್ಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿರುವ ಬೋಸರಾಜುರವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.

ಪಕ್ಷ ಸಂಘಟನೆ ಬಗ್ಗೆ ತಮ್ಮದೆ ರೀತಿಯಲ್ಲಿ ಶ್ರಮಿಸಿರುವ ಅವರು ಇತ್ತೀಚೆಗೆ ರಾಹುಲ ಗಾಂಧಿಯವರ ನೇತೃತ್ವದಲ್ಲಿ ನಡೆದ ಭಾರತ ಜೋಡೊ ಪಾದಯಾತ್ರೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದ ಅವರು ಕೆಲವರು ಅವರ ರಾಜಕೀಯ ಏಳ್ಗೆ ಸಹಿಸದೆ ಇಲ್ಲ ಸಲ್ಲದ ಅರೋಪ ಮತ್ತು ದೂರು ನೀಡುವ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದು ಇದಕ್ಕೆ ಹೈಕಮಾಂಡ್ ಕಿವಿಗೊಡಬಾರದೆಂದರು.


ನಗರ ಕ್ಷೇತ್ರದಲ್ಲಿ ಟಿಕೆಟ್ ಅಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತು ಆದರೂ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಮೊಹಮ್ಮದ ಶಾಲಂ ಪರ ಚುನಾವಣೆಯಲ್ಲಿ ಶಕ್ತಿ ಮೀರಿ ಸಹಕಾರ ನೀಡಿದ್ದರ ಫಲವಾಗಿ ಅವರು ಅಲ್ಪಮತದ ಅಂತರದಿಂದ ಪರಭವಗೊಂಡರು ಕಳೆದ ಬಾರಿಗಿಂತ ಸುಮಾರು ೨೦ ಸಾವಿರಕ್ಕೂ  ಅಧಿಕ ಮತ ಪಡೆದು ಬಿಜೆಪಿಗೆ ತೀರ್ವ ಜಿದ್ದಾ ಜಿದ್ದಿ ಪೈಪೋಟಿ ನೀಡಿದರು ಎಂದರು.

ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲರಿಗೆ ಈ ಹಿಂದೆ ಗ್ರಾಮೀಣದಲ್ಲಿ ಟಿಕೆಟ್ ಕೊಡಿಸಿದವರೆ ಬೋಸರಾಜು ಅವರ ಮೇಲೆ ಹೈಕಮಾಂಡ್ ಗೆ ದೂರು ನೀಡುವುದು ಸರಿಯೇ ಎಂದು ಪ್ರಶ್ನಿಸಿದ ಅವರು ಜಿಲ್ಲೆಯಲ್ಲಿ ಅನೇಕರು ಸಚಿವ ಸ್ಥಾನದ ಅಕಾಂಕ್ಷಿಯಾಗಿದ್ದು ನಾವು ಬೋಸರಾಜುಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತೇವೆಂದರು.

ನಮ್ಮ ಮನವಿಯನ್ನು ಪರಿಗಣಿಸದೆ ಹೋದರೆ ನಾವೆಲ್ಲರೂ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುತ್ತೇವೆಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಷಿö್ಮರೆಡ್ಡಿ, ಜಿಂದಪ್ಪ,ತಿಮ್ಮಾರೆಡ್ಡಿ, ರಮೇಶ, ವಾಹಿದ್ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ