ಯಾವುದೆ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನ: ಪ್ರಮಾಣ ಕಾಲೇಜು ವಿದ್ಯಾರ್ಥಿ ಅನುರಾಗ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ 127 ನೇ ರ‍್ಯಾಂಕ್- ಪಲ್ಲೇದ್
ಯಾವುದೆ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನ:
ಪ್ರಮಾಣ ಕಾಲೇಜು ವಿದ್ಯಾರ್ಥಿ ಅನುರಾಗ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ 127 ನೇ ರ‍್ಯಾಂಕ್- ಪಲ್ಲೇದ್
ರಾಯಚೂರು,ಜೂ.೧೫- ನಗರದ ಪ್ರಮಾಣ ಕಾಲೇಜಿನ ವಿದ್ಯಾರ್ಥಿ ಅನುರಾಗ್ ರಂಜನ್‌ಗೆ ನೀಟ್ ಪರೀಕ್ಷೆಯಲ್ಲಿ ೧೨೭ನೇ ಲಭಿಸಿದೆ ಎಂದು ಕಾಲೇಜಿನ ಉಪನ್ಯಾಸಕರಾದ ಬಸವರಾಜ ಪಲ್ಲೇದ್ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ವೈದ್ಯಾಕೀಯ ಪದವಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿ ಉತ್ತಮ ಸಾಧನೆ ತೋರಿದ್ದು ಉತ್ತರ ಕರ್ನಾಟಕದಲ್ಲೆ ಅತಿ ಹೆಚ್ಚಿನ ರ‍್ಯಾಂಕ್ ಪಡೆದಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ ಎಂದರು.
ಇವರು ೭೨೦ ಅಂಕಗಳಲ್ಲಿ ೭೦೫ ಅಂಕಗಳನ್ನು ಪಡೆದಿದ್ದು ಇಂದು ಪ್ರಕಟಗೊಂಡ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲೂ ಬಿಎಸ್ಸಿ ಕೃಷಿ ವಿಭಾಗಕ್ಕೆ ೨ನೇ ರ‍್ಯಾಂಕ್ ಪಡೆದಿದ್ದಾರೆ ಅಲ್ಲದೆ ನರ್ಸಿಂಗ್ , ಪಶುವೈದ್ಯಕೀಯ ಇನ್ನೀತರ ಪದವಿ ಅರ್ಹತಾ ಪರೀಕ್ಷೆಯಲ್ಲೂ ಉತ್ತಮ ರ‍್ಯಾಂಕ್ ಪಡೆದಿದ್ದಾರೆ ಎಂದರು.
ಇವರು ಯಾವುದೆ ಪ್ರತ್ಯೇಕ ಕೋಚಿಂಗ್ ಪಡೆಯದೆ ಕಾಲೇಜಿನಲ್ಲೆ ಆಯೋಜಿಸಲಾಗುತ್ತಿದ್ದ ತರಗತಿಗಳಿಗೆ ಹಾಜರಾಗಿ ಅವಿರತ ಆದ್ಯಯನ ಮತ್ತು ಶಿಕ್ಷಕರ ಸೂಚನೆ ಪಾಲಿಸಿ ಉತ್ತಮ ಸಾಧನೆ ಮೆರೆದಿದ್ದಾರೆ ಇವರು ಮೂಲತಃ ಓರಿಸ್ಸಾ ರಾಜ್ಯದಾವರಾಗಿದ್ದು ಬಾಲ್ಯದಿಂದಲೂ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದು ಇವರ ತಂದೆ ತಾಯಿ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿಯಲ್ಲಿದ್ದಾರೆ ಎಂದರು.
ಇವರಿಗೂ ವೈದ್ಯಕೀಯ ಪದವಿಯಲ್ಲಿ ವ್ಯಾಸಂಗ ಮಾಡುವ ಇಚ್ಚೆಯಿಂದ ನೀಟ್ ಪರೀಕ್ಷೆಗೆ ಹಾಜರಾಗಿದ್ದರು ಉತ್ತಮ ಸಾಧನೆ ತೋರಿದ ಇವರಿಗೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ನಿವಾಸ್ ಇದ್ದರು.
Comments
Post a Comment