ವಾರ್ಡ್ ನಂ17 ರಲ್ಲಿ ಸ್ವಚ್ಚಗೊಳ್ಳದ ಕಾಲುವೆಗಳು ನಗರಸಭೆ ದಿವ್ಯ ನಿರ್ಲಕ್ಷ್ಯ
ವಾರ್ಡ್ ನಂ.17 ರಲ್ಲಿ ಸ್ವಚ್ಚಗೊಳ್ಳದ ಕಾಲುವೆಗಳು ನಗರಸಭೆ ದಿವ್ಯ ನಿರ್ಲಕ್ಷ್ಯ ರಾಯಚೂರು,ಜೂ.18-ನಗರದ ವಾರ್ಡ್ ನಂ .17 ರಲ್ಲಿ ಕಾಲುವೆಗಳನ್ನು ಸ್ವಚ್ಚಗೊಳಿಸದೆ ದಿವ್ಯ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಚರಂಡಿಗಳು ಕಸದಿಂದ ತುಂಬಿ ಸರಾಗವಾಗಿ ನೀರು ಹರಿಯದೆ ಅಸ್ವಚ್ಚತೆ ಆಗರವಾಗಿದೆ .
ನಗರಸಭೆಯ ಈ ಅಲಕ್ಷ್ಯ ತನಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ನಗರಸಭೆಗೆ ಕೋಟಿಗಟ್ಟಲೆ ಅನುದಾನ ಬಂದರೂ ಸಾರ್ವಜನಿಕರು ಕರ ಕಟ್ಟಿದ್ದರು ನಗರಸಭೆ ಮಾತ್ರ ಸ್ವಚ್ಚತೆ ಕಡೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಸ್ವಚ್ಚ ನಗರಕ್ಕೆ ಮುಂದಾಗಬೇಕಿರುವ ನಗರಸಭೆ ವರ್ತನೆ ಅಸಹ್ಯ ಮೂಡಿಸಿದೆ ಇನ್ನಾದರು ನಗರಸಭೆ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲಿ ಎಂಬುದು ಜನರ ಒತ್ತಾಯವಾಗಿದೆ.
Comments
Post a Comment