ರಿಮ್ಸ್ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಅಮಾನತ್ತುಗೊಳಿಸಲು ಆಗ್ರಹಿಸಿ: ಜೂ.19 ರಂದು ದಲಿತ ಸಂಘರ್ಷ ಸಮಿತಿಯಿಂದ ಧರಣಿ- ನರಸಿಂಹಲು
ರಿಮ್ಸ್ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ಅಮಾನತ್ತುಗೊಳಿಸಲು ಆಗ್ರಹಿಸಿ:
ಜೂ.19 ರಂದು ದಲಿತ ಸಂಘರ್ಷ ಸಮಿತಿಯಿಂದ ಧರಣಿ- ನರಸಿಂಹಲು
ರಾಯಚೂರು,ಜೂ.೧೭-ಅವ್ಯಸ್ಥೆಯ ಆಗರವಾಗಿರುವ ರಿಮ್ಸ್ ನಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ದೊರಕಿಸಿಕೊಡುವಲ್ಲಿ ವಿಫಲರಾದ ರಿಮ್ಸ್ ನಿರ್ದೇಶಕ ಮತ್ತು ಆಡಳೀತಾಧಿಕಾರಿಯನ್ನು ಅಮಾನತ್ತುಗೊಳಿಸಲು ಆಗ್ರಹಿಸಿ ಜೂ.19 ರಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ಮಾಡಲಾಗುತ್ತದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರಿಮ್ಸ್ ನಲ್ಲಿ 700 ಹಾಸಿಗೆ ವ್ಯವಸ್ಥೆಯಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಬಡವರ ಬಗ್ಗೆ ನಿಶ್ಕಾಳಜಿ ವಹಿಸಲಾಗಿದೆ ಎಂದು ದೂರಿದ ಅವರು ವೈದ್ಯರು ನಿಯಮಗಳನ್ನು ಗಾಳಿಗೆ ತೂರಿ ಆಸ್ಪತ್ರೆಯಲ್ಲಿರದೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಔಷಧಿಗಳನ್ನು ಮೆಡಿಕಲ್ ಶಾಪ್ ಗಳಿಗೆ ಮಾರಾಟ ಮಾಡಿ ಬಡ ರೋಗಿಗಳಿಗೆ ಬೇರೆಡೆ ಔಷಧಿ ಖರೀದಿಗೆ ಚೀಟಿ ಬರೆದುಕೊಡುತ್ತಾರೆ ಎಂದ ಅವರು ರೋಗಿಗಳೀಗೆ ಉತ್ತಮ ಆಹಾರ ನೀಡದೆ ಹಳಿಸಿದ ಆಹಾರ ನೀಡುತ್ತಾರೆ ಆಸ್ಪತ್ರೆಯಲ್ಲಿ ಶುಚಿತ್ವಯಿಲ್ಲದೆ ಹಂದಿ ನಾಯಿಗಳ ವಾಸ ಸ್ಥಾನದಂತಿದೆ ಇತ್ತೀಚೆಗೆ ಕೋತಿ ಕಾಟದ ಬಗ್ಗೆ ವರದಿಯಾಗಿದ್ದರೂ ಯಾವುದೆ ಕ್ರಮವಾಗಿಲ್ಲವೆಂದ ಅವರು ಈ ಕೂಡಲೆ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪೂರು ಮತ್ತು ರಿಮ್ಸ್ ಆಡಳೀತಾಧೀಕಾರಿ ಹಂಪಣ್ಣ ಸಜ್ಜನ್‌ರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು. ಈಸಂದರ್ಭದಲ್ಲಿ ಹನುಮೇಶ ಅರೋಲಿ,ಜಂಬಯ್ಯ, ತಿಮ್ಮಪ್ಪ,ಜಲಾಲ,ಸೈಯದ್ ವಾಹಿದ , ಫಕ್ರುದ್ದೀನ್ ಅಲಿ ಇತರರು ಇದ್ದರು.
Comments
Post a Comment