ಏಮ್ಸ್ ಹೋರಾಟದ 401 ನೇ ದಿನಕ್ಕೆ ಶಿಫಾರಸ್ಸು ಪತ್ರದ ಬಲ: ಏಮ್ಸ್ ಸ್ಥಾಪಿಸಲು ರಾಯಚೂರು ಏಕೈಕ ಹೆಸರು ಕೇಂದ್ರಕ್ಕೆ ಸಿಎಂ ಶಿಫಾರಸ್ಸು
ಏಮ್ಸ್ ಹೋರಾಟದ 401 ನೇ ದಿನಕ್ಕೆ ಶಿಫಾರಸ್ಸು ಪತ್ರದ ಬಲ: ಏಮ್ಸ್ ಸ್ಥಾಪಿಸಲು ರಾಯಚೂರು ಏಕೈಕ ಹೆಸರು ಕೇಂದ್ರಕ್ಕೆ ಸಿಎಂ ಶಿಫಾರಸ್ಸು ರಾಯಚೂರು,ಜೂ.17- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪಿಸಲು ರಾಯಚೂರಿನ ಏಕೈಕ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸ್ಸು ಮಾಡಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ ಮಾಂಡವೀಯಾ ರವರಿಗೆ ಬರೆದ ಶಿಫಾರಸ್ಸು ಪಾತ್ರದಲ್ಲಿ ರಾಯಚೂರು ಜಿಲ್ಲೆ ನೀತಿ ಆಯೋಗದ ಮಹಾತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ರಾಜ್ಯದ ರಾಯಚೂರು ಮತ್ತು ಯಾದಗಿರಿ ಇದ್ದು ರಾಯಚೂರಿನಲ್ಲಿ ಆರೋಗ್ಯ, ಶಿಕ್ಷಣ ಮಟ್ಟ ಹೆಚ್ಚಿಸಲು ಈ ಭಾಗದಲ್ಲಿ ಉತ್ತಮ ಆರೋಗ್ಯ ಕಲ್ಪಿಸಲು
ಏಮ್ಸ್ ಅನಿವಾರ್ಯವೆಂದು ಉಲ್ಲೇಖಿಸಿದ್ದು ತಮ್ಮ ಸಚಿವ ಸಂಪುಟ ಸಹೋದ್ಯೋಗಿ ಜಿಲ್ಲೆಯವರೇ ಆದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೆಸರನ್ನು ಉಲ್ಲೇಖಿಸಿ ಅವರು ಸಹ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿದ್ದನ್ನು ಶಿಫಾರಸ್ಸು ಪತ್ರದಲ್ಲಿ ಬರೆದಿದ್ದು ಸುಮಾರು 400 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಇದರಿಂದ ಕೊಂಚ ಮಟ್ಟಿನ ಯಶಸ್ಸು ಲಭಿಸಿದಂತಾಗಿದೆ ಎಂದರೆ ತಪ್ಪಾಗಲಾರದು . ಈ ಶಿಫಾರಸ್ಸು ಪತ್ರವನ್ನು ಕೇಂದ್ರ ಸರ್ಕಾರ ಆದಷ್ಟು ಬೇಗನೆ ಪುರಸ್ಕರಿಸಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಬೇಕೆನ್ನುವುದು ಎಲ್ಲರ ಕಳಕಳಿಯಾಗಿದೆ.
Comments
Post a Comment