ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ತೀರ್ವ ಸಂಕಷ್ಟ: ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಹೋರಾಟ- ತ್ರಿವಿಕ್ರಮ ಜೋಷಿ
ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳಿಗೆ ತೀರ್ವ ಸಂಕಷ್ಟ:
ಅವೈಜ್ಞಾನಿಕ ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯದಿದ್ದರೆ ಹೋರಾಟ- ತ್ರಿವಿಕ್ರಮ ಜೋಷಿ
ರಾಯಚೂರು,ಜೂ.೧೪- ಏಕಾಏಕಿ ಆವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿರುವ ಆದೇಶ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿದರು. ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಹೊಸದರಲ್ಲಿ ಕೈಗಾರಿಕೆಗಳಿಗೆ ವಿದ್ಯುತ್ ದರ ಏರಿಕೆಯ ಶಾಕ್ ನೀಡಿದ್ದು ಸ್ವಾಯತ್ತ ಸಂಸ್ಥೆಯಾದ ಕೆಇಅರ್‌ಸಿಯವರು ಅವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ ನಿಗದಿತ ಶುಲ್ಕ ೧ ಕೆವಿಎ ಗೆ ೨೬೫ ರೂ ಗಳಿಂದ ೩೫೦ ರೂಗೆ ಹೆಚ್ಚಿಸಿದ್ದು ಇದು ಹಗಲು ದರೋಡೆಯಾಗಿದೆ ಎಂದರು.
ಎಫ್‌ಸಿಎಸಿ ದರವನ್ನು ೫೫ ಪೈಸೆಯಿಂದ ೨.೬೪ ರೂಗೆ ಏರಿಸಿದ್ದು ಒಂದು ಯೂನಿಟ್‌ಗೆ ೨ ರೂ ಹೆಚ್ಚಿಸಿದಂತಾಗುತ್ತದೆ ಎಂದ ಅವರು ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವಿದ್ಯುತ್ ದರ ಅತಿ ಹೆಚ್ಚಿಗೆಯಿದ್ದು ಇದರಿಂದ ಕೈಗಾರಿಕೆಗಳಿಗೆ ಹೊರೆಯಾಗುತ್ತದೆ ಅದು ಪರೋಕ್ಷವಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಮತ್ತು ಲಕ್ಷಾಂತರ ಕಾರ್ಮಿಕರ ಬದುಕಿನ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಉದ್ಯಮಗಳ ಯಂತ್ರೋಪಕರಣ ಮತ್ತು ಬಿಡಿ ಭಾಗಗಳ ಮೇಲೂ ಶೇ.೫ ರಿಂದ ೧೮ ಶೇ ತೆರಿಗೆ ಹೆಚ್ಚಳವಾಗಿದ್ದು ಇದು ಸಹ ಗಾಯದ ಮೇಲೆ ಬgಯಳೆದಂತಾಗುತ್ತದೆ ಎಂದ ಅವರು ಯಾವುದೆ ಸರ್ಕಾರವಿರಲಿ ಗ್ರಾಹಕರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಬೇಕೆಂದರು.
ರೈಸ್ ಮಿಲ್ರ‍್ಸ್ ಅಸೋಸಿಯೇಷನ್‌ನ ಸಾವಿತ್ರಿ ಪುರುಷೋತ್ತಮ ಮಾತನಾಡಿ ಸರ್ಕಾರದ ಈ ನಿರ್ಧಾರದಿಂದ ಕೈಗಾರಿಕೋದ್ಯಮಿಗಳಯ ದಿಗ್ಬಾçಂತರಾಗಿದ್ದು ಕೈಗಾರಿಕೆ ನಡೆಸುವುದು ಹೇಗೆ ಎನ್ನುವ ಸಂದಿಗ್ದ ಪರಿಸ್ಥಿತಿಯಲ್ಲಿದ್ದೇವೆಂದ ಅವರು ಕೂಡಲೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದರು.
ಕೈಗಾರಿಕೆ ಒಕ್ಕೂಟದ ವಿ.ಲಕ್ಷ್ಮೀ ರೆಡ್ಡಿ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಸರ್ಕಾರವೆನ್ನದೆ ಯಾವ ಸರ್ಕಾರವೇ ಆಗಿರಲಿ ನಮ್ಮ ಮೇಲೆ ಗಧಾ ಪ್ರಹಾರ ಮಾಡಿರುವುದು ಸರಿಯಲ್ಲ ಒಟ್ಟಾರೆ ವಿದ್ಯುತ್ ದರ ಏರಿಕೆ ಹಿಂಪಡೆಯಬೇಕೆಂದ ಅವರು ನಮ್ಮ ಬೇಡಿಕೆ ಇಡೇರಿಸದಿದ್ದರೆ ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆಂದರು.
ಈ ಸಂದರ್ಭದಲ್ಲಿ ಮೈಲಾಪೂರು ಮೂರ್ತಿ, ವೀರಣ್ಣ,ಜಗದೀಶ ಗುಪ್ತಾ , ವೈ.ಜಂಬಣ್ಣ ಇತರರು ಇದ್ದರು.
Comments
Post a Comment