ಗೌರೀಶ ಅಕ್ಕಿ ಸಾರಥ್ಯದ "ಅಲ್ಮಾ ಮೀಡಿಯಾ ಸ್ಕೂಲ್" ನಲ್ಲಿ ಜುಲೈ ತಿಂಗಳಿನಿಂದ ತರಗತಿಗಳು ಪ್ರಾರಂಭ



ಗೌರೀಶ ಅಕ್ಕಿ ಸಾರಥ್ಯದ "ಅಲ್ಮಾ ಮೀಡಿಯಾ ಸ್ಕೂಲ್" ನಲ್ಲಿ ಜುಲೈ ತಿಂಗಳಿನಿಂದ  ತರಗತಿಗಳು  ಪ್ರಾರಂಭ

 ರಾಯಚೂರು,ಜೂ.15- ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತನಾಗಿ-ಸುದ್ದಿ ನಿರೂಪಕನಾಗಿ ಈಟಿವಿ, ಸುವರ್ಣ ನ್ಯೂಸ್, ಟಿವಿ9 ಕನ್ನಡ ಮುಂತಾದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೌರೀಶ್ ಅಕ್ಕಿ ಇದೀಗ  ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಿಂದ 'ಆಲ್ಮಾ ಮೀಡಿಯಾ ಸ್ಕೂಲ್' ಎಂಬ ಪ್ರಾಯೋಗಿಕ ಪತ್ರಿಕೋದ್ಯಮ ತರಬೇತಿ ಸಂಸ್ಥೆಯೊಂದನ್ನು  ನಡೆಸುತ್ತಿದಾರೆ. 

ಬದಲಾದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದುಡಿಯಬೇಕಾದರೆ ಪತ್ರಕರ್ತರಿಗೆ ಪ್ರಾಯೋಗಿಕ ಶಿಕ್ಷಣ ಮತ್ತು ಟೆಕ್ನಿಕಲ್ ಸ್ಕಿಲ್ಸ್ ಅತ್ಯಗತ್ಯ. ಮಾಧ್ಯಮ ಕ್ಷೇತ್ರದ ಸುದೀರ್ಘ ಅನುಭವದಲ್ಲಿ ಇವುಗಳ ಮಹತ್ತ್ವ . ಪತ್ರಿಕೋದ್ಯಮದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಬೇಕೆಂಬ ಧ್ಯೇಯ ಹೊತ್ತು‌ -"ಆಲ್ಮಾ ಮೀಡಿಯಾ ಸ್ಕೂಲ್". 70% ಪ್ರಾಕ್ಟಿಕಲ್ ಮತ್ತು 30% ಥಿಯರಿ ಎಂಬ ಸೂತ್ರದಡಿಯಲ್ಲಿ ಆಲ್ಮಾ ಮೀಡಿಯಾ ಸ್ಕೂಲ್ ಕಾರ್ಯನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ ಅನುಭವವಿರುವ ಪರಿಣತರಿಂದ ತರಬೇತಿ, ವಿಶೇಷ ಅತಿಥಿಗಳಿಂದ ಉಪನ್ಯಾಸ, ಪ್ರತಿನಿತ್ಯ ಪ್ರಾಯೋಗಿಕ ತರಬೇತಿಗಳ ಮೂಲಕ ಸುದ್ದಿಮನೆಯ ನೇರ ಅನುಭವ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡಿದೆ. ಇಲ್ಲಿ ಕಲಿಯುವ ಪ್ರತಿಯೊಬ್ಬರೂ ಉತ್ತಮ ಪತ್ರಕರ್ತರಾಗಿ ಪತ್ರಿಕೋದ್ಯಮದಲ್ಲಿ ಒಂದು ಭದ್ರ ನೆಲೆ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ತರಬೇತಿಯ ಜೊತೆಗೆ ಇಂಟರ್ನ್‌ಶಿಪ್‌, ಪ್ಲೇಸ್‌ಮೆಂಟ್‌ ಸೌಲಭ್ಯವನ್ನೂ ʼಆಲ್ಮಾ ಮೀಡಿಯಾ ಸ್ಕೂಲ್‌ʼ ಒದಗಿಸುತ್ತದೆ.


ಆಲ್ಮಾ ಮೀಡಿಯಾ ಸ್ಕೂಲ್ ಸತತ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಮಹಾನಗರಗಳಷ್ಟೇ ಅಲ್ಲದೆ ಕರ್ನಾಟಕದ ಹಳ್ಳಿಹಳ್ಳಿಗಳಿಂದಲೂ ಬಂದು ಮಕ್ಕಳು ಇಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಮಾಧ್ಯಮ ಕ್ಷೇತ್ರದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. 


ಇದೀಗ ಆಲ್ಮಾ ಮೀಡಿಯಾ ಸ್ಕೂಲ್‌ನ ʼಡಿಪ್ಲೋಮ ಇನ್‌ ಪ್ರಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ʼನ 6 ತಿಂಗಳ ಕೋರ್ಸ್‌ಗೆ ಅಡ್ಮಿಶನ್‌ ಆರಂಭವಾಗಿದ್ದು, ಜುಲೈ 2023ರಿಂದ ಹೊಸ ಬ್ಯಾಚ್ ಶುರುವಾಗಲಿದೆ. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಪಿಯು ಮತ್ತು ಯಾವುದೇ ಪದವಿ ಪಡೆದಿರುವ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು :  https://forms.gle/uM5mTj6fTABs7Hkp6. ಹೆಚ್ಚಿನ ಮಾಹಿತಿಗೆ 74069 46667 / 74069 46668 ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್