ಗ್ರಾಮೀಣ ಠಾಣೆಯಲ್ಲಿ ಸುಳ್ಳು ದೂರು ದಾಖಲು: ಪಿಎಸ್‌ಐ ಅಮಾನತ್ತಿಗೆ ಕೆಅರ್‌ಎಸ್ ಪಕ್ಷ ಆಗ್ರಹ- ಗೋಮರ್ಸಿ
ಗ್ರಾಮೀಣ ಠಾಣೆಯಲ್ಲಿ ಸುಳ್ಳು ದೂರು ದಾಖಲು:
ಪಿಎಸ್‌ಐ ಅಮಾನತ್ತಿಗೆ ಕೆಅರ್‌ಎಸ್ ಪಕ್ಷ ಆಗ್ರಹ-ಗೋಮರ್ಸಿ
ರಾಯಚೂರು,ಜೂ.೧೭-ನಮ್ಮ ಪಕ್ಷದ ಕಾರ್ಯಕರ್ತ ಆಂಜಿನೇಯ್ಯ ಎಂಬುವವರ ಮೇಲೆ ಸುಳ್ಳು ಕೇಸು ದಾಖಲಿಸಿದ ಗ್ರಾಮೀಣ ಠಾಣೆ ಪಿಎಸ್‌ಐ ಮಂಜುನಾಥರವರನ್ನು ಅಮಾನತ್ತು ಮಾಡಬೇಕೆಂದು ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ಆಗ್ರಹಿಸಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಆಂಜಿನೇಯ ಎಂಬುವವರು ಇಬ್ರಾಹಿಂ ದೊಡ್ಡಿಯ ಕುಂಬಾರ ಸಮುದಾಯದೊಂದಿಗೆ ಜಮೀನಿ ವ್ಯಾಜ್ಯ ಸಂಬ0ಧಿಸಿ ಪರಸ್ಪರ ದೂರು ದಾಖಲಿಸಿದ್ದು ಅದರನ್ವಯ ಸುಳ್ಳು ಕೇಸು ದಾಖಲಿಸಿ ಎಫ್‌ಐಅರ್ ದಾಖಲಿಸಿ ನ್ಯಾಯಂಗ ಬಂಧನಕ್ಕೆ ದೂಡಿ ಜೈಲಿಗೆ ಹಾಕಿಸಿದ್ದಾರೆ ಅಲ್ಲದೆ ಇದೆ ಪಿಎಸ್‌ಐ ಸದರ್ ಬಜಾರ್ ಠಾಣೆಯಲ್ಲಿರುವಾಗ ನಮ್ಮ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಕಂದೂರು ರಾಘವೇಂದ್ರ ರವರು ಬಾಡಿಗೆಯಿದ್ದ ಮಳಿಗೆಯ ಬೀಗ ಹಾಕಿದ ಸಂದರ್ಭದಲ್ಲಿ ಮಳಿಗೆ ಮಾಲಿಕ ಇತರರು ಸೇರಿಕೊಂಡು ಮಳಿಗೆಯಲ್ಲಿದ್ದ ಸಾಮಗ್ರಿ ತೆಗೆದುಕೊಂಡು ಹೋಗಿದ್ದಲ್ಲದೆ ಕನ್ನಕೊರೆದು ಸಾಮಗ್ರಿ ದೋಚಿದ್ದರು ದೂರು ಸ್ವೀಕರಿಸಿದೆ ರಾಜಿ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಿದ ಅವರು ಈ ಕೂಡಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್‌ಐರನ್ನು ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಂದೂರು ರಾಘವೇಂದ್ರ, ರಾಮಣ್ಣ ಅರ್ ಹೆಚ್ ಜೆ, ಗಂಗಾ.ಕೆ, ಕುಮಾರ್ ನಾಯಕ ಇತರರು ಇದ್ದರು.
Comments
Post a Comment