ಜಿಲ್ಲಾ ಉಸ್ತುವಾರಿ ಸಚಿವರ ಪ್ರಥಮ ಕೆಡಿಪಿ ಸಭೆಯಲ್ಲಿ ಖಡಕ್ ಸೂಚನೆ: ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಭ್ರಷ್ಠಾಚಾರ ಮುಂತಾದವುಗಳನ್ನು ಸಹಿಸುವುದಿಲ್ಲ-ಡಾ.ಶರಣ ಪ್ರಕಾಶ ಪಾಟೀಲ

 


ಜಿಲ್ಲಾ ಉಸ್ತುವಾರಿ ಸಚಿವರ ಪ್ರಥಮ ಕೆಡಿಪಿ ಸಭೆಯಲ್ಲಿ ಖಡಕ್ ಸೂಚನೆ:

ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಭ್ರಷ್ಠಾಚಾರ ಮುಂತಾದವುಗಳನ್ನು ಸಹಿಸುವುದಿಲ್ಲ- ಡಾ.ಶರಣ ಪ್ರಕಾಶ ಪಾಟೀಲ

ರಾಯಚೂರು,ಜೂ.೧೯-ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಜನರಿಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಭರವಸೆ ನೀಡಲಾಗಿದ್ದು ಅವುಗಳನ್ನು ಈಡೇರಿಸಲು ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕಳಪೆ ಕಾಮಗಾರಿ, ಲಂಚಗುಳಿತನ, ಬೆಟ್ಟಿಂಗ್ ಮುಂತಾದವುಗಳನ್ನು ಸಹಿಸುವುದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಅವರಿಂದು ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಅಧಿಕಾರಿಗಳು ಸರ್ಕಾರದ ಕೆಲಸ ದೇವರ ಕೆಲಸವೆಂದು ಭಾವಿಸಿ ಮಾಡಬೇಕು ಕಳಪೆ ಕಾಮಗಾರಿ, ಭ್ರಷ್ಟಾಚಾರ ಕಂಡುಬ0ದರೆ ಅಂತಹ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದ ಅವರು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಸುವವರು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಸೂಚನೆ ನೀಡಿದರು.


ಮುಂಗಾರು ಕ್ಷಿಣೀಸಿದ್ದು ನದೀ ಮೂಲದ ಕುಡಿಯುವ ನೀರು ಮಾತ್ರ ಅವಲಂಬಿಸದೆ ಲಭ್ಯವಿರುವ ಬೋರವೆಲ್ ಇನ್ನಿತರ ಮೂಲಗಳಿಂದ ಕುಡಿಯುವ ನೀರನ್ನು ಜನರಿಗೆ ಒದಗಿಸುವ ಕಾರ್ಯ ಮಾಡಬೇಕೆಂದರು ಇದಕ್ಕೆ ಸಭೆಯಲ್ಲಿದ್ದು ಎಲ್ಲ ಶಾಸಕರು ಧ್ವನಿಗೂಡಿಸಿದರು.

ಶಾಸಕರಾದ ಡಾ.ಶಿವರಾಜ ಪಾಟೀಲ ಮಾತನಾಡಿ ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಅಧಿಕಾರಿಗಳು ನಿಗಾವಹಿಸಬೇಕೆಂದ ಅವರು ತುಂಗಭದ್ರ ಎಡದಂಡೆ ನಾಲೆ ಮುಖಾಂತರ ಗಣೇಕಲ್ ಜಲಾಶಯಕ್ಕೆ ನೀರು ಬಿಡುಗಡೆ ಮಾಡಿ ತದನಂತರ ರಾಂಪೂರು ಜಲಾಶಯ ಭರ್ತಿಗೆ ಕ್ರಮವಹಿಸಬೇಕೆಂದರು ಇದಕ್ಕೆ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಮಾತನಾಡಿ ಈಗಾಗಲೆ ಕಾಲುವೆಗೆ ನೀರು ಬಿಡಗಡೆ ಮಾಡಲಾಗಿದ್ದು ಶುಕ್ರವಾರಕ್ಕೆ ಗಣೆಕಲ್ ಜಲಾಶಯಕ್ಕೆ ನೀರು ಬರುತ್ತದೆ ನಂತರ ರಾಂಪುರ ಜಲಾಶಯಕ್ಕೆ ಹರಿಸಲಾಗುತ್ತದೆ ಎಂದರು.

ದೇವದುರ್ಗ ಶಾಸಕಿ ಕರೆಮ್ಮ ನಾಯಕ ಮಾತನಾಡಿ ದೇವದುರ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ತಮಗೂ ಬೆದರಿಕೆ ಒಡ್ಡಲಾಗಿದೆ ಅಲ್ಲದೆ  ಇತ್ತೀಚೆಗೆ ಅಕ್ರಮ ಮರಳುಗಾರಿಕೆ ದಂಧೆಕೋರರು ಮೂರು ಜೀವಗಳನ್ನು ಬಲಿ ಪಡೆದಿದ್ದಾರೆ ಮಲಗಿದ್ದವರ ಮೇಲೆ ಜೆಸಿಬಿ ಹರಿದು ಸಾವನಪ್ಪಿದಾರೆ ಎಂದರು ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖಾ ವರದಿ ಸಲ್ಲಿಸಬೇಕು ಮತ್ತು ಅಕ್ರಮ ಮರಳುಗಾರಿಕೆ ತಡೆಯಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಟಾಸ್ಕ್ ಫೋರ್ಸ್ ತಂಡ ರಚಿಸಲಾಗಿದ್ದು ಪ್ರತಿಯೊಂದು ತಾಲೂಕಿನಲ್ಲಿ ಅದು ಕಾರ್ಯ ನಿರ್ವಹಿಸುತ್ತಿದೆ ಅಕ್ರಮ ಮರಳುಗಾರಿಕೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ಈ ಹಿಂದೆಯೂ ಮಾನ್ವಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆಗೆ ಗ್ರಾಮ ಲೆಕ್ಕಾಧಿಕಾರಿಯ ಬಲಿಯಾಗಿದೆ ಈಗಿನ ಅಕ್ರಮ ಮರಳುಗಾರಿಕೆ ತಡೆಯುವದರ ಜೊತೆಗೆ ಹಿಂದಿನ ಅಕ್ರಮ ಮರಳುಗಾರಿಕೆ ಪ್ರಕರಣಗಳನ್ನು ತನಿಖೆ ಮಾಡಿಸಬೇಕೆಂದ ಅವರು ಪೊಲೀಸ್ ಇಲಾಖೆಯಿಂದ ಕೆಲವರು ಸ್ವಯಂ ನಿವೃತ್ತಿ ಪಡೆದು ಅಕ್ರಮ ಮರಳುಗಾರಿಕೆ ದಂಧೆ ನಡೆಸುತ್ತಿದ್ದಾರೆ ಟಿಪ್ಪರ್ ಖರೀದಿಸಿ ರಾಜಾರೋಷವಾಗಿ ಮರಳುಗಾರಿಕೆ ಮಾಡುತ್ತಿದ್ದಾರೆಂದರು.

ಶಾಸಕರಾದ ಬಸನಗೌಡ ತುರವಿಹಾಳ ಮತ್ತು ಹಂಪನಗೌಡ ಬಾದರ್ಲಿ ಮಾತನಾಡಿ ನಮ್ಮ ತಾಲೂಕಿನಲ್ಲಿಯೂ ಅಕ್ರಮ ಮರಳುಗಾರಿಕೆ ಇದೆ ಗಣ್ಯ ವಕ್ತಿಗಳೆ ಅದರ ಹಿಂದೆ ಇದ್ದಾರೆ  ಎಂದರು.

ಸಚಿವ ಡಾ.ಶರಣಪ್ರಕಾಶ ಮಾತನಾಡಿ ಎಸ್ಪಿಯವರು ಅಕ್ರಮ ಮರಳುಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಪೊಲೀಸ್ ಇಲಾಖೆ ಮಾಜಿ ಉದ್ಯೋಗಿಗಳು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕೆಂದರು.

ಜಿಲ್ಲೆಯಲ್ಲಿ ಅಕ್ರಮ ಮಧ್ಯ, ಸಿಎಚ್ ಪೌಡರ್, ನಕಲಿ ಮದ್ಯೆ ಹಾವಳಿ ತಡೆಗಟ್ಟಬೇಕೆಂದ ಅವರು ಅಬಕಾರಿ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ನೀವು ಕಾಟಾಚಾರಕ್ಕೆ ಕೆಲಸ ಮಾಡಬೇಡಿ ನಿಮ್ಮ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


ಕೃಷಿ ಇಲಾಖೆ ಮಾಹಿತಿ ಪೆಡದ ಸಚಿವರು ಮುಂಗಾರು ವಿಳಂಬವಾದರು ಮುಂದೆ ಮಳೆ ಬಂದ ಸಂದರ್ಭದಲ್ಲಿ ರೈತರಿಂದ ಬೀಜ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತದೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ಗೊಬ್ಬರದ ಅಗತ್ಯ ದಾಸ್ತಾನು ಇರಿಸಬೇಕೆಂದ ಅವರು ಕಳಪೆ ಬೀಜ ಮಾರಾಟ ಮಾಡಿದವರ ಅಂಗಡಿ ಲೈಸನ್ಸ್ ರದ್ದು ಮಾಡಬೇಕು ಅಂಗಡಿಗಳಲ್ಲಿ ದಾಸ್ತಾನು ಮತ್ತು ದರ ಪಟ್ಟಿ ಬರೆಯಬೇಕೆಂದರು. ಜಿಲ್ಲಾಧಿಕಾರಿಗಳು ಬೀಜ , ಗೊಬ್ಬರ ಮಾರಾಟಗಾರರ ಸಭೆ ಮಾಡಿ ಕಟ್ಟು ನಿಟ್ಟಿನ ಸೂಚನೆ ನೀಡಬೇಕೆಂದರು.

 ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತವಾಗಿ ಸುಮಾರು ೫ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು ಭತ್ತ, ತೊಗರಿ, ಹತ್ತಿ ಪ್ರಮುಖ ಬೆಳೆಯಾಗಿದ್ದು ಸಜ್ಜೆ, ಜೋಳ ಸಹ ಬೆಳೆಯಲಾಗುತ್ತದೆ ಎಂದರು. ಸಚಿವರು ಮಾತನಾಡಿ ರೈತ ಸಂಪರ್ಕ ಕೇಂದ್ರಗಳ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದು ಸ್ವಂತ ಕಟ್ಟಡ ಇರದ ಕಡೆಗಳಳ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಕಟ್ಟಲು ಸ್ಥಳ ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.

ತೋಟಗಾರಿಕೆ ಇಲಾಖೆ ಮಹಿತಿ ಪಡೆದ ಸಚಿವರು ತೋಟಗಾರಿಕೆ ಪ್ರದೇಶಗಳ ವಿಸ್ತರ್ಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು ಜಿಲ್ಲೆಯ ಯಾವ ತಾಲೂಕಿನಲ್ಲಿ ಹೆಚ್ಚು ವಿಸ್ತರಣೆ ಮತ್ತು ಕಡಿಮೆ ವಿಸ್ತರಣೆ  ಬಗ್ಗೆ ಮಾಹಿತಿ ಕಲೆ ಹಾಕಿದರು. ಅಧಿಕಾರಿಗಳು ಮಾಹಿತಿ ನೀಡಿ  ಲಿಂಗಸಗೂರಿನಲ್ಲಿ ಹೆಚ್ಚು ದೇವದುರ್ಗ ದಲ್ಲಿ ಕಡಿಮೆ ವಿಸ್ತೀರ್ಣವಾಗಿದೆ ಎಂದಾಗ ದೇವದುರ್ಗದಲ್ಲಿ ಅನುದಾನ ಹೆಚ್ಚು ಬಳಿಸಲಾಗಿದೆ ಅದರೂ ಕಡಿಮೆ ವಿಸ್ತೀರ್ಣವಾಗಿದೆ ಎಂದರೆ ಏನು ಅರ್ಥ ಇದರಲ್ಲಿ ಅಕ್ರಮ ನಡೆದಿದೆ ಎಂದು ಸಾಬೀತಾಗುತ್ತದೆ ಎಂದ ಅವರು ಜಿಲ್ಲಾಧಿಕಾರಿಗಳಿಗೆ ತನಿಖೆಗೆ ಆದೇಶಿಸಿದರು.

ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ ಅನುದಾನ ಸದ್ಬಳಿಕೆಯಾಗಬೇಕು ಸಬಸಿಡಿ ದೊರೆಯುತ್ತದೆ ಎಂದು ಬೇಕಾಬಿಟಿ ಕಟ್ಟಡ ನಿರ್ಮಾಣದಿಂದ ಉಪಯೋಗವಿಲ್ಲವೆಂದರು.

ನಗರಕ್ಕೆ ಕುಡಿಯುವ ನೀರು ಸರಬರಾಜು ಬಗ್ಗೆ ಮಾಹಿತಿ ಪಡೆದರು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿ ನಗರದ ೨೧ ವಾರ್ಡ್ಗಳಿಗೆ ಕೃಷ್ಣಾ ನದಿ ನೀರು ಸರಬರಾಜು ಆಗುತ್ತದೆ ಮತ್ತು ೧೪ ವಾರ್ಡ್ಗಳೀಗೆ ತುಂಗಭದ್ರ ನದಿ ನೀರು ಸರಬರಾಜು ಆಗುತ್ತದೆ ಎಂದರು. ಕೆಲ ವಾರ್ಡುಗಳು ಟೆಲ್ ಎಂಡ್  ಆಗಿರುವುದರಿಂದ ಬೇಸಿಗೆಯಲ್ಲಿ ಟ್ಯಾಂಕರ್ ಇನ್ನಿತರ ಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಡಾ.ಶಿವರಾಜ ಪಾಟೀಲ ಮಾತನಾಡಿ ಕೃಷ್ಣ ನದಿ ನೀರಿನ ಶುದ್ದಿಕರಣ ಘಟಕದಲ್ಲಿ ಒಂದೆ ಪಂಪ್ ಸೆಟ್ ಇದ್ದು ಅದು ಕೆಟ್ಟರೆ ನಗರಕ್ಕೆ ನೀರು ಬರದ ಸ್ಥಿತಿ ಎದುರಾಗುತ್ತದೆ ಮತ್ತೊಂದು ಹೆಚ್ಚುವರಿ ಪಂಪ್ ವ್ಯವಸ್ಥೆಯಾಗಬೇಕೆಂದರು.

ಸಚಿವ ದ್ವಯರು ಮಾತಾಡಿ ಕುಡಿಯುವ ನೀರಿನ ವಿಷಯದಲ್ಲಿ ಗಂಭೀರತೆಯಿರಬೇಕೆ0ದ ಅವರು ನಗರಸಭೆ ಪೌರಾಯುಕ್ತರನ್ನು ತರಾಟೆಗೆ ತೆಗದುಕೊಂಡು  ನಗರದಲ್ಲಿ ಮತ್ತು ಗ್ರಾಮೀಣದಲ್ಲಿ  ಅಂತರಜಲ ಮಟ್ಟದ ಬಗ್ಗೆ ಮಾಹಿತಿ ಪಡೆದು ಎಂಟು ದಿನದಲ್ಲಿ ವರದಿ ನೀಡಬೇಕೆಂದರು. ಪರಿಸರ ಇಲಾಖೆ ಅಧಿಕಾರಿ ಮಾಹಿತಿ ನೀಡಿ ನಗರ ಸುತ್ತಮುತ್ತಲಿನ ಕೈಗಾರಿಕೆಗಳ ಕಾರ್ಯನಿರ್ವಹಣೆ ಮೇಲೆ ನಿಗಾಇಡಲಾಗಿದ್ದು ಪರಿಸರಕ್ಕೆ ಹಾನಿ ಮಾಡದಿರುವಂತೆ ಸೂಚಿಸಲಾಗಿದೆ ಎಂದರು.

ಶಾಸಕರಾದ ಡಾ.ಶಿವರಾಜ ಪಾಟೀಲ ಮತ್ತು ಬಸನಗೌಡ ದದ್ದಲ ಮಾತನಾಡಿ ರಾತೋರಾತ್ರಿ ಅಕ್ರಮವಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಮನ್ಸಲಾಪೂರು ಕರೆ ಸೇರಿದಂತೆ  ಇನ್ನಿತರ ಹಳ್ಳಿಗಳ ಹೊಲಗಳಲ್ಲಿ , ಹಳ್ಳಗಳಲ್ಲಿ ಸುರಿಯಲಾಗುತ್ತದೆ ಎಂದ ಅವರು ಕೃಷ್ಣಾ ನದಿಯಿಂದ ಅಕ್ರಮವಾಗಿ ಕೈಗಾರಿಕೆಗಳೀಗೆ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದರು.

ಪರಸರ ಅಧಿಕಾರಿಯನ್ನು ನಾನ್ ಸೆನ್ಸ್ ಮಾತನಾಡಬೇಡಿ ಎಂದು  ತರಾಟೆ ತಗೆದುಕೊಂಡ ಸಚಿವರು ರಾಸಾಯನಿಕ ಕೈಗಾರಿಕೆಗಳಿಗೆ ತತಕ್ಷಣ ನೋಟೀಸ್ ನೀಡಿ ಹಾಗೂ ಅಕ್ರಮ ನೀರು ಸಂಪರ್ಕ ಹೊಂದಿದ ಕೈಗಾರಿಕೆಗಳ ನೀರಿನ ಸಂಪರ್ಕ ಕಡಿತಗೊಳಿಸಿ ಎಂದರು.

ದೇವದುರ್ಗ ಶಾಸಕಿ ಕರೆಮ್ಮ ಮಧ್ಯ ಪ್ರವೇಶಿಸಿ ದೇವದುರ್ಗ ಪಟ್ಟಣ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಬಗೆಹರಿಸುವಂತೆ ಕೋರಿದರು.

ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಇಲಾಖೆಗಳ ಮಾಹಿತಿ ಪಡೆದರು ಜೆಸ್ಕಾಂ ಹಿರಿಯ ಅಧೀಕಾರಿ ಮಾಹಿತಿ ನೀಡಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲವೆಂದರು, ನಗರ ಶಾಸಕ ಡಾ.ಶಿವರಾಜ ಪಾಟೀಲ ಮಧ್ಯ ಪ್ರವೇಶಿಸಿ ನಗರದಲ್ಲಿ ದಿನ ನಿತ್ಯ ಅನೇಕ ಬಾರಿ ವಿದ್ಯುತ್ ನಿಲುಗಡೆಯಾಗುತ್ತದೆ ಎಂದು ಕಿಡಿ ಕಾರಿದರು, ಶಾಸಕ ದದ್ದಲ್ ಬಸನಗೌಡ ಅಸಮಾಧಾನ ವ್ಯಕ್ತಪಡಿಸಿ ನೀವು ಕರ್ನಾಟಕ ಸರ್ಕಾರ ಅಧೀನದಲ್ಲಿ ಕೆಲಸ ಮಾಡುತ್ತೀರೋ ಅಥವಾ ಬೇರೆ ದೇಶದ ಸರ್ಕಾರದಡಿ ಕಾಯನಿರ್ವಹಿಸುತ್ತಿರೋ ಎಂದು ಕಿಡಿ ಕಾರಿದರು ಗ್ರಾಮೀಣ ಪ್ರದೇಶಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟರೆ ತಿಂಗಳು ಗಟ್ಟಲೆ ದುರಸ್ತಿಗೊಳಿಸಲ್ಲ ರೈತರು ತಮ್ಮ ಹಣದಿಂದ ದುರಸ್ತಿ ಗೊಳಿಸಲು ತರಬೇಕಾದ ಅನಿವಾರ್ಯಾತೆಯಿದೆ ತಮ್ಮ ಕ್ಷೇತ್ರ ವ್ಯಾಪ್ತಿಯ ಕಾಡ್ಲೂರ ಮತ್ತು ಗಲ್ಲೆಸುಗೂರು ವ್ಯಾಪ್ತಿಯಲ್ಲಿ ಸಬ್ ಸ್ಟೇಷನ ನಿರ್ಮಾಣ ಏಕೆ ನೆನೆಗುದಿಗೆ ಬಿದ್ದಿದೆ ಎಂದರು. ಕೆಪಿಟಿಸಿಎಲ್ ಅಧೀಕಾರಿ ಮಾತನಾಡಿ ಸ್ಥಳದ ಕೊರತೆ ಮತ್ತು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದರು.

ಸಚಿವರು ಮಾತನಾಡಿ ಸ್ಥಳದ ಬಗ್ಗೆ ಗೊಂದಲ ಉಂಟಾದರೆ ಆಯಾ ಕ್ಷೇತ್ರದ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಸಮಸ್ಯೆ ನಿವಾರಿಸಿ ಹೆಚ್ಚಿನ ನೆರವು ಬೇಕಿದ್ದರೆ ಇಲಾಖೆ ಎಂಡಿಯವರೊAದಿಗೆ ನಾನು ಮಾತನಾಡುವುದಾಗಿ ಸಭೆಯಲ್ಲೆ ಇಂಧನ ಇಲಾಖೆ ಎಂಡಿಯವರೊAದಿಗೆ ಮಾತನಾಡಿ ಟ್ರಾನ್ಸ್ ಫಾರ್ಮರ್ ಕೊರತೆ ನೀಗಿಸಬೇಕೆಂದು ಹೇಳಿದರು.

ಅಲ್ಲದೆ ಇಲಾಖೆಯಲ್ಲಿ ವಿದ್ಯತ್ ಪರಿಕರ ತರಲು ವಾಹನ ಕೊರತೆಯಿದ್ದರೆ ಈ ಭಾಗದ ಕೈಗಾರಿಕೆಗಳೀಗೆ ಸಿಎಸ್‌ಅರ್ ಅನುದಾನದಲ್ಲಿ ವಾಹನ ನೀಡುವಂತೆ ಜಿಲ್ಲಾಧೀಕಾರಿಗಳೀಗೆ ಸೂಚಿಸಿದರು.

ಶಾಸಕ ಹಂಪಯ್ಯ ನಾಯಕ ಮಾತನಾಡಿ ಕವಿತಾಳದಲ್ಲಿ ಜೆಸ್ಕಾಂ ಅಧೀಕಾರಿಗಳ ನಿರ್ಲಕ್ಷö್ಯದಿಂದ ಜನರು ಹಿಡಿ ಶಾಪ ಹಾಕುತ್ತಾರೆ ಅಲ್ಲಿನ ಅಧಿಕಾರಿಗಳು ಶಾಸಕರ ಮಾತಿಗೆ ಬೆಲೆ ನೀಡುತ್ತಿಲ್ಲವೆಂದು ಅಸಮಾಧಾನ ಹೊರಹಾಕಿ ಈ ಕೂಡಲೆ ಸಮಸ್ಯೆ ನಿವಾರಿಸಬೇಕೆಂದರು. 

ಸಚಿವ ಬೋಸರಾಜು ಮಾತನಾಡಿ ನಾನು ಈ ಮೊದಲು ಸಭೆ ಮಾಡಿ ಅಧೇಶ ನೀಡಿದ್ದೇನೆ ಆದರೂ ಈ ವರ್ತನೆ ಸರಿಯಲ್ಲಿ ನಿಮ್ಮ ಇಲಾಖೆಯಲ್ಲಿ ಅಶಿಸ್ತು ಇದೆ ಮತ್ತು ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.

ವೇದಿಕೆ ಮೇಲೆ ಜಿ.ಪಂ ಸಿಇಓ ಶಶಿಧರ ಕುರೇರ ಇದ್ದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ನಾಡಗೀತೆಯೊಂದಿಗೆ ಕೆಡಿಪಿ ಸಭೆ ಪ್ರಾರಂಭಸಿದ್ದು ವಿಶೇಷವಾಗಿತ್ತು.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್